ಕೊರೊನಾ ವೈರಸ್‌ ಬಗ್ಗೆ ಎಲ್ಲ ಮಾಹಿತಿಯನ್ನ ಚೀನಾ ಶೇರ್‌ ಮಾಡಬೇಕು: WHO

masthmagaa.com:

ಕೋವಿಡ್‌ ವೈರಸ್‌ನ ಮೂಲದ ಕುರಿತು ಯಾವುದೇ ಮಾಹಿತಿಯನ್ನ ಚೀನಾ ಶೇರ್‌ ಮಾಡದೇ ಇರೋದನ್ನ ವಿಶ್ವ ಆರೋಗ್ಯ ಸಂಸ್ಥೆ (WHO) ಟೀಕಿಸಿದೆ. 2020ರಲ್ಲಿ ವುಹಾನ್‌ ಮಾರ್ಕೆಟ್‌ನಲ್ಲಿ ಕಲೆಕ್ಟ್‌ ಮಾಡಿರೊ ಸ್ಯಾಪಂಲ್‌ಗಳ ಡೇಟಾವನ್ನ ಚೀನಾ ನಮಗೆ ನೀಡಲ್ಲ. ಈ ಮೂಲಕ ವೈರಸ್‌ ಮೂಲದ ಬಗ್ಗೆ ಪ್ರಮುಖ ಮಾಹಿತಿಯನ್ನ ಚೀನಾ ತಡೆಹಿಡಿದಿದೆ ಅಂತ WHO ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ವೈರಸ್‌ ಕುರಿತು ತಾನು ನಡೆಸಿರೊ ತನಿಖೆಗಳ ರಿಸಲ್ಟ್‌ನ್ನ ಶೇರ್‌ ಮಾಡಬೇಕು ಅಂತ ಚೀನಾಕ್ಕೆ ಹೇಳಿದೆ. ಅಂದ್ಹಾಗೆ ಇತ್ತೀಚಿಗೆ ಅಂತಾರಾಷ್ಟ್ರೀಯ ತಜ್ಞರ ತಂಡವೊಂದು ಚೀನಾದ ವುಹಾನ್‌ ಮಾರ್ಕೆಟ್‌ನಲ್ಲಿ ವೈರಸ್‌ ಕುರಿತು ತನಿಖೆ ನಡೆಸಿದ್ರು. ಅಲ್ಲಿ ಕಲೆಕ್ಟ್‌ ಮಾಡಿದ್ದ ಸ್ಯಾಂಪಲ್‌ಗಳಲ್ಲಿ ವೈರಸ್‌ನ ಸೋಂಕಿನ ಜೊತೆ ರಕೂನ್‌ ಡಾಗ್‌ಗಳ ಜೆನೆಟಿಕ್‌ ಮಟೀರಿಯಲ್‌ ಇರೋದು ತಿಳಿದು ಬಂದಿತ್ತು. ಇದರ ಬೆನ್ನಲ್ಲೇ ಮಾರ್ಕೆಟ್‌ನಲ್ಲಿ ನಡೆಸಿರೊ ತನಿಖೆಗಳ ವಿವರಗಳನ್ನ ನೀಡುವಂತೆ WHO ಹೇಳಿದೆ.

-masthmagaa.com

Contact Us for Advertisement

Leave a Reply