ಜಾಗತಿಕವಾಗಿ ಧೂಮಪಾನ ಮಾಡೋರ ಸಂಖ್ಯೆಯಲ್ಲಿ ಇಳಿಕೆ!

masthmagaa.com:

ಪ್ರಪಂಚದ 150 ದೇಶಗಳಲ್ಲಿ ಟೊಬ್ಯಾಕೊ ಅಥ್ವಾ ತಂಬಾಕು ಬಳಕೆದಾರರು ಕಡಿಮೆ ಆಗಿದ್ದಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಅಥ್ವಾ WHO ತಿಳಿಸಿದೆ. ಈ ಲಿಸ್ಟ್‌ನಲ್ಲಿ ಭಾರತ ಕೂಡ ಇದ್ದು, ಈ ವಿಚಾರವಾಗಿ ಬಹಳ ಎಫೆಕ್ಟಿವ್‌ ಕ್ರಮಗಳನ್ನ ಭಾರತ ತಗೊಂಡಿದೆ ಅಂತ WHO ಹೇಳಿದೆ. 2000ನೇ ಇಸವಿಯಲ್ಲಿ ಮೂರರಲ್ಲಿ ಒಬ್ರು ಧೂಮಪಾನ ಮಾಡಿದ್ರು. 2022ರಲ್ಲಿ ಐವರಲ್ಲಿ ಒಬ್ರು ಸ್ಮೋಕ್‌ ಮಾಡ್ತಿದ್ದಾರೆ ಅಂತ WHO ಹೇಳಿದೆ. ಆದ್ರೆ 2025ರ ಒಳಗೆ ಪ್ರಪಂಚದ ಒಟ್ಟಾರೆ ತಂಬಾಕು ಸೇವನೆ ಮಾಡೋರನ್ನ 30% ಕಡಿಮೆ ಮಾಡೋ ಗೋಲನ್ನ ರೀಚ್‌ ಆಗೋಕೆ ಆಗಿಲ್ಲ ಅಂತ WHO ಹೇಳಿದೆ.

-masthmagaa.com

Contact Us for Advertisement

Leave a Reply