ಎನ್‌ ಎಸ್‌ ಬೋಸರಾಜು ಸಚಿವ ಸ್ಥಾನ ಸಿಕ್ಕಿದ್ದು ಹೇಗೆ?

masthmagaa.com:

ಸಚಿವ ಸಂಪುಟದಲ್ಲಿ ಶಾಸಕರು ಅಲ್ಲ ಹಾಗೂ ವಿಧಾನಪರಿಷತ್‌ ಸದಸ್ಯರೂ ಅಲ್ಲದ ಎನ್‌ ಎಸ್‌ ಬೋಸರಾಜು ಅವ್ರಿಗೆ ಸಚಿವ ಸ್ಥಾನ ಒಲಿದು ಬಂದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಕೆಲ ಘಟಾನುಘಟಿ ಬಿಜೆಪಿ ನಾಯಕರ ವಿರುದ್ಧ ಜನರಿಂದ ಆಯ್ಕೆಯಾಗಿ ವಿಧಾನಸಭೆಗೆ ಬಂದಿದ್ದೇವೆ. ಆದರೂ ಜನಪ್ರತಿನಿಧಿ ಅಲ್ಲದ ಬೋಸ್‌ರಾಜ್‌ಗೆ ಹೇಗೆ ಸಚಿವ ಸ್ಥಾನ ಸಿಕ್ತು ಅಂತ ಕಾಂಗ್ರೆಸ್‌ನ ಒಳಗೇ ಹಲವು ನಾಯಕರು ಅಸಮಾಧಾನವನ್ನ ಕೂಡ ವ್ಯಕ್ತಪಡಿಸ್ತಿದ್ದಾರೆ. ಇತ್ತ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರಿಂದ ಹೈಕಮಾಂಡ್​ನಿಂದಲೇ ಬೋಸರಾಜ್​ ಅವರಿಗೆ ಮಂತ್ರಿಭಾಗ್ಯ ಒಲಿದುಬಂದಿದೆ ಅಂತ ತಿಳಿದು ಬಂದಿದೆ. ರಾಯಚೂರು ನಗರ ಕ್ಷೇತ್ರದ ಟಿಕೆಟ್‌ನ್ನ​ ಮುಸ್ಲಿಂ ಅಭ್ಯರ್ಥಿಗೆ ನೀಡಲು ನಿರ್ಧಾರವಾಗಿತ್ತು. ಆದ್ರೆ, ಬೋಸರಾಜ್ ಅವರು ರಾಯಚೂರು ನಗರ ಟಿಕೆಟ್​ ಆಕಾಂಕ್ಷಿಯಾಗಿದ್ದರು. ತಮಗೆ ಕೊಡಬೇಕು. ಇಲ್ಲ ತಮ್ಮ ಪುತ್ರ ರವಿ ಬೋಸರಾಜ್‌ಗೆ ಕೊಡಬೇಕು ಅಂತ ಪಟ್ಟು ಹಿಡಿದಿದ್ರು. ಕೊನೆಗೆ ಹೈಕಮಾಂಡ್‌ ಮಧ್ಯಸ್ಥಿಕೆವಹಿಸಿ, ಖುದ್ದು ರಾಹುಲ್‌ ಗಾಂಧಿ ಮಾತುಕತೆ ನಡೆಸಿದ್ರು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಂಎಲ್​ಸಿ ಮಾಡಿ ಪ್ರಮುಖ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಬೋಸರಾಜ್​ಗೆ ಅಚ್ಚರಿ ರೀತಿಯಲ್ಲಿ ಮಂತ್ರಿ ಸ್ಥಾನ ಒಲಿದು ಬಂದಿದೆ.

-masthmagaa.com

Contact Us for Advertisement

Leave a Reply