ಯುಕ್ರೇನ್‌ ಯುದ್ದದಲ್ಲಿ ನಾವು ಅಣ್ವಸ್ತ್ರ ಬಳಸಲ್ಲ: ರಷ್ಯಾ ಸ್ಪಷ್ಟನೆ

masthmagaa.com:

ಯುಕ್ರೇನ್‌ ಮೇಲೆ ನಾವು ಅಣುಯುದ್ದ ಮಾಡೋದಿಲ್ಲ ಅಂತ ರಷ್ಯಾ ಹೇಳಿದೆ. ಪಾಶ್ಚೀಮಾತ್ಯ ದೇಶಗಳು ಸೇರಿದಂತೆ ಇಡೀ ವಿಶ್ವ, ಎಲ್ಲಿ ರಷ್ಯಾ ಈ ಕದನದಲ್ಲಿ ಅಣ್ವಸ್ತ್ರಗಳನ್ನ ಬಳಸುತ್ತೋ ಅನ್ನೋ ಚಿಂತೆಗೀಡಾಗಿರೋ ಹೊತ್ತಲ್ಲೇ ರಷ್ಯಾ ಈ ರೀತಿ ಹೇಳಿದೆ. ರಷ್ಯಾದ ವಿದೇಶಾಂಗ ಇಲಾಖೆಯ ವಕ್ತಾರ ಅಲೆಕ್ಸಿ ಜೇಸ್ತೇವ್‌ ಮಾತಾಡಿ “ನಾವು ನಮ್ಮ ಈ ಮಿಲಿಟರಿ ಆಪರೇಷನ್‌ನಲ್ಲಿ ನ್ಯೂಕ್ಲಿಯರ್‌ ಅಸ್ತ್ರಗಳನ್ನ ಬಳಸೋದಿಲ್ಲ, ಪಾಶ್ಚೀಮಾತ್ಯ ದೇಶಗಳು ನಮ್ಮ ವಿರುದ್ದ ಮಾಡ್ತಿರೋ ಅಪರಾಧಗಳು ಒಪ್ಪಿಕೊಳ್ಳುವಂತವಲ್ಲ ಅಂತ ಹೇಳಿದ್ದಾರೆ. ಆದ್ರೆ ರಷ್ಯಾ ಈ ರೀತಿ ಎಷ್ಟೇ ಹೇಳಿದ್ರು ಕೂಡ ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಯಾಕಂದ್ರೆ ಯುಕ್ರೇನ್‌ ಮೇಲೆ ಯುದ್ದ ಮಾಡೋ ಕೆಲವು ದಿನಗಳ ಮುಂಚೆ ಕೂಡ ನಾವು ಯಾವುದೇ ದಾಳಿ ಮಾಡಲ್ಲ ಅಂತಾನೇ ಸದ್ದಿಲ್ಲದೇ ನುಗ್ಗಿತ್ತು ರಷ್ಯಾ.

-masthmagaa.com

Contact Us for Advertisement

Leave a Reply