ಪತಿಯ ಮೂಗಿಗೆ ಗುದ್ದಿ ಕೊಂದ ಪತ್ನಿ! ಆಗಿದ್ದೇನು ಗೊತ್ತಾ?

masthmagaa.com:

ತನ್ನ ಹುಟ್ಟುಹಬ್ಬಕ್ಕೆ ದುಬೈಗೆ ಕರ್ಕೊಂಡು ಹೋಗ್ಲಿಲ್ಲ ಅಂತ ಮಹಿಳೆಯೊಬ್ಬಳು ತನ್ನ ಗಂಡನ ಮೂಗಿಗೆ ಗುದ್ದಿದ ಪರಿಣಾಮ ಪತಿ ಸಾವನ್ನಪ್ಪಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಅಲ್ಲಿನ ಕಪಲ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಹೀಗಾಗಿದ್ದು ಮೃತ ವ್ಯಕ್ತಿಯನ್ನ ನಿಖಿಲ್‌ ಖನ್ನಾ ಅಂತ ಗುರುತಿಸಲಾಗಿದೆ. ಮೃತ ನಿಖಿಲ್‌, ರೇಣುಕಾ ಎಂಬುವವರ ಜೊತೆ 6 ವರ್ಷದ ಹಿಂದೆ ವಿವಾಹವಾಗಿದ್ದರು ಅಂತ ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ. ಪತ್ನಿ ಪತಿಗೆ ಹೊಡೆದಾಗ ಆತನ ಬಾಯಲ್ಲಿನ ಹಲ್ಲು ಮುರಿದು ರಕ್ತಸ್ರಾವ ಆಗಿ ಪ್ರಜ್ಞೆತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಅಂತ ಪೋಲಿಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply