ಯುವತಿಯನ್ನು ಗುಂಡಿಟ್ಟು ಕೊಂದ ಮಯನ್ಮಾರ್‌ ಪೊಲೀಸರು!

masthmagaa.com:

ಮಯನ್ಮಾರ್​ನಲ್ಲಿ ಮಿಲಿಟರಿ ಕ್ರಾಂತಿಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಯುವತಿಯೊಬ್ಬರು ಬಲಿಯಾಗಿದ್ದಾರೆ. 20 ವರ್ಷದ ಮ್ಯ ಥ್ವಾಟೆ ಥ್ವಾಟೆ ಖಯಿಂಗ್​​ ಫೆಬ್ರವರಿ 9ರಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು. ಈ ವೇಳೆ ಪೊಲೀಸರು ಫೈರ್ ಮಾಡಿದ್ರು. ಆದ್ರೆ ಈ ವೇಳೆ ಇಬ್ಬರಿಗೆ ಗಂಭೀರ ಗಾಯವಾಗಿತ್ತು. ಪೊಲೀಸರು ನಾವು ಹಾರಿಸಿದ್ದು ರಬ್ಬರ್ ಬುಲೆಟ್​​ ಅಂತಾ ಹೇಳಿದ್ರು.

ಆದ್ರೆ ಆಸ್ಪತ್ರೆಗೆ ಹೋಗಿ ಸೇರಿಸಿದ್ರೆ ಇದು ರಬ್ಬರ್ ಬುಲೆಟ್ ಅಲ್ಲ.. ಜೀವ ತೆಗೆಯೋ ರಿಯಲ್ ಗುಂಡು ಅಂತ ಗೊತ್ತಾಗಿದೆ. ತಲೆಗೆ ಗುಂಡೇಟು ತಗುಲಿದ್ದ ಮ್ಯ ಥ್ವಾಟೆ, ನಿನ್ನೆಯವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಆದ್ರೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕ್ರಿಪ್ರ ಕ್ರಾಂತಿ ಬಳಿಕ ಮಯನ್ಮಾರ್​ನಲ್ಲಿ ನಡೆದ ಎರಡನೇ ಸಾವು ಇದಾಗಿದೆ. ಇದಕ್ಕೂ ಮುನ್ನ ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ರು.

-masthmagaa.com

Contact Us for Advertisement

Leave a Reply