ರಾಹುಲ್​ ಗಾಂಧಿ ಹೇಳಿಗೆ ಅನುಮೋದಿಸಲ್ಲ ಎಂದ ಅಮೆರಿಕ

masthmagaa.com:

ಭಾರತದ ಸಂಸತ್​ನಲ್ಲಿ ಪಾಕಿಸ್ತಾನ ಮತ್ತು ಚೀನಾ ಕುರಿತು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮಾಡಿದ ಕಾಮೆಂಟ್​ ಅನ್ನ ನಾವು ಅನುಮೋದಿಸಲ್ಲ ಅಂತ ಅಮೆರಿಕ ಹೇಳಿದೆ. ಕೇಂದ್ರ ಸರ್ಕಾರವನ್ನ ಟೀಕಿಸುವಾಗ ರಾಹುಲ್​ ಗಾಂಧಿ, ನಮ್ಮ ದೇಶದ ವಿದೇಶಾಂಗ ನೀತಿಯ ದೊಡ್ಡ ಗುರಿ ಅಂದ್ರೆ ಅದು ಪಾಕಿಸ್ತಾನ ಮತ್ತು ಚೀನಾವನ್ನ ದೂರ ದೂರ ಇಡೋದಾಗಿರಬೇಕು. ಆದ್ರೆ ಮೋದಿ ಸರ್ಕಾರ ಆ ಎರಡೂ ದೇಶಗಳನ್ನ ಹತ್ತಿರ ತಂದುಬಿಟ್ಟಿದೆ. ಇದು ದೇಶದ ಜನರ ವಿರುದ್ಧ ಮಾಡಿದ ಅತಿದೊಡ್ಡ ಅಪರಾಧ. ಗಣರಾಜ್ಯೋತ್ಸವಕ್ಕೆ ಯಾಕೆ ಯಾವ ವಿದೇಶಿ ಅತಿಥಿ ಕೂಡ ಬಂದಿಲ್ಲ ಅನ್ನೋದನ್ನ ನಿಮ್ಮನ್ನ ನೀವು ಪ್ರಶ್ನೆ ಮಾಡ್ಕೊಳ್ಳಿ. ನಮ್ಮ ದೇಶ ಕಂಪ್ಲೀಟಾಗಿ ಐಸೋಲೇಟ್​ ಆಗಿದೆ, ನಮ್ಮನ್ನ ಸುತ್ತುವರಿದುಬಿಟ್ಟಿದ್ದಾರೆ ಅಂತೆಲ್ಲಾ ರಾಹುಲ್​ ಗಾಂಧಿ ಹೇಳಿದ್ದರು. ಈ ಬಗ್ಗೆ ಯುಎಸ್​ ಸ್ಟೇಟ್​ ಡಿಪಾರ್ಟ್​ಮೆಂಟ್​ನ ವಕ್ತಾರ ನೆಡ್​ ಪ್ರೈಸ್ ಅವರನ್ನ ಕೇಳ್ದಾಗ, ನಾವು ಇಂಥಾ ಟೀಕೆಗಳನ್ನ ಎಂಡೋರ್ಸ್ ಮಾಡಲ್ಲ ಎಂದಿದ್ದಾರೆ. ಜೊತೆಗೆ ಪಾಕ್​ ಮತ್ತು ಚೀನಾ ನಡುವಿನ ಸಂಬಂಧದ ಬಗ್ಗೆ ಮಾತನಾಡಲು ನಾನು ಆ ದೇಶದ ಜನರಿಗೆ ಬಿಟ್ಟುಬಿಡ್ತೀನಿ. ಅಮೆರಿಕ ಮತ್ತು ಚೀನಾ – ಇವರೆಡರ ಮಧ್ಯೆ ಯಾವುದಾದ್ರೂ ಒಂದು ದೇಶವನ್ನ ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಯಾವ ದೇಶಕ್ಕೂ ಇಲ್ಲ. ಅಮೆರಿಕ ಜೊತೆಗಿನ ಪಾರ್ಟ್​ನರ್​ಶಿಪ್​​ ಹೇಗಿರುತ್ತೆ ಅಂತ ಬಂದಾಗ ಆ ದೇಶಗಳಿಗೆ ಆಯ್ಕೆಗಳನ್ನ ಕೊಡೋದು ನಮ್ಮ ಉದ್ದೇಶ. ಚೀನಾಗೆ ಹೋಲಿಸಿದ್ರೆ ಅಮೆರಿಕ ಜೊತೆಗಿನ ಪಾರ್ಟ್​ನರ್​​ಶಿಪ್​​ನಿಂದ ಸಾಕಷ್ಟು ಅನುಕೂಲಗಳಿವೆ ಅಂತ ನೆಡ್​ ಪ್ರೈಸ್​ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply