ತಾಂಜಾನಿಯ ಟೂರಿಸಂಗೆ ಹಣ ನೀಡೋದು ನಿಲ್ಲಿಸಿದ ವರ್ಲ್ಡ್‌ ಬ್ಯಾಂಕ್‌!

masthmagaa.com:

ಪೂರ್ವ ಆಫ್ರಿಕಾದ ತಾಂಜಾನಿಯ ಟೂರಿಸಂಗೆ ಇದೀಗ ವರ್ಲ್ಡ್‌ ಬ್ಯಾಂಕ್‌ ಹಣ ಸಹಾಯ ಮಾಡೋದನ್ನ ನಿಲ್ಲಿಸಿದೆ. ದಕ್ಷಿಣ ತಾಂಜಾನಿಯದಲ್ಲಿನ ಫಾರೆಸ್ಟ್‌ ರೇಂಜರ್ಸ್‌ ಅಲ್ಲಿನ ಹಳ್ಳಿ ಜನರ ಮೇಲೆ ದಬ್ಬಾಳಿಕೆ ನಡೆಸ್ತಿದ್ದಾರೆ. ಹಳ್ಳಿ ಜನರ ಹತ್ಯೆ, ಅತ್ಯಾಚಾರ ಮಾಡೋದು ಹಾಗೂ ಅವ್ರನ್ನ ಬಲವಂತವಾಗಿ ಹಳ್ಳಿಯಿಂದ ಹೊರಹಾಕಿ ಹಿಂಸಾಚಾರ ಮಾಡ್ತಿದ್ದಾರೆ. ಅದು ಅಲ್ದೇ ತಾಂಜಾನಿಯಾದಲ್ಲಿ ಶುರು ಮಾಡಲಾಗಿರೋ Regrow ಅನ್ನೋ ಯೋಜನೆಯಿಂದ ಈ ಹಿಂಸಾಚಾರಗಳು ಜಾಸ್ತಿಯಾಗಿದ್ವು ಅನ್ನೋ ಆರೋಪದ ಮೇಲೆ ವರ್ಲ್ಡ್‌ ಬ್ಯಾಂಕ್‌ ಕಳವಳ ವ್ಯಕ್ತಪಡಿಸಿ ಈ ನಿರ್ಧಾರ ಕೈಗೊಂಡಿದೆ.

-masthmagaa.com

Contact Us for Advertisement

Leave a Reply