ನಂಬಿದ್ರೆ ನಂಬಿ.. 2ನೇ ವಿಶ್ವಯುದ್ಧ ಕಾಲದ ಬಾಂಬ್​ ಸ್ಫೋಟಿಸಿ ವ್ಯಕ್ತಿ ಸಾವು!

masthmagaa.com:

ಎರಡನೇ ಮಹಾಯುದ್ದ ನಡೆದು ಎಂಟು ದಶಕಗಳು ಕಳೀತಾ ಬಂದ್ರು ಕೂಡ ಅದರಲ್ಲಿ ಬಳಕೆಯಾಗಿದ್ದ ಸ್ಫೋಟಕಗಳು ಇನ್ನೂ ಕೂಡ ಜೀವಂತಾಗಿವ, ಜನರನ್ನ ಬಲಿ ತಗೋಳ್ತಾನೇ ಇವೆ. ಈಗ ಅಂಥದ್ದೇ ಒಂದು ಘಟನೆ ನಡೆದಿದ್ದು, ಮಧ್ಯ ಯೂರೋಪ್‌ನ ಝೆಕ್‌ ರಿಪಬ್ಲಿಕ್‌ ಅನ್ನೋ ದೇಶದಲ್ಲಿ ಸ್ಫೋಟಕ ಸ್ಫೋಟಗೊಂಡು ವ್ಯಕ್ತಿಯೊಬ್ಬ ಪ್ರಾಣ ಬಿಟ್ಟಿದ್ದಾನೆ. ಬಾಂಬ್‌ ಮೂಲದ ಬಗ್ಗೆ ಪರಿಶೀಲನೆ ಮಾಡ್ದಾಗ ಅದು ಎರಡನೇ ಮಹಾಯುದ್ದದಲ್ಲಿ ಬಳಕೆಯಾಗಿದ್ದ ಬಾಂಬು ಅಂತ ಗೊತ್ತಾಗಿದೆ. ಅಲ್ದೇ ಅದು ರೆಡ್‌ ಆರ್ಮಿ ಅಂದ್ರೆ ಅವತ್ತಿನ ಯುಎಸ್‌ಎಸ್‌ಆರ್ ಗೆ ಸೇರಿದ್ದು ಅಂತ ಅಂದಾಜು ಮಾಡಲಾಗಿದೆ. ಘಟನೆಯಲ್ಲಿ ಮತ್ತೊಬ್ಬ ಕೂಡ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಅಂತ ಅಲ್ಲಿನ ಪೋಲೀಸರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply