ದೇಶಕ್ಕೆ ಬರದ ವಿಶ್ವದ ಅತಿದೊಡ್ಡ ಹಡುಗು! ಯಾಕೆ?

masthmagaa.com:

ಭಾರತದ ಬಂದರುಗಳಲ್ಲಿ ಸರಿಯಾದ ಮೂಲಸೌಕರ್ಯ ವ್ಯವಸ್ಥೆ ಇಲ್ದೇ ಇರೋದ್ರಿಂದ ವಿಶ್ವದ ಅತಿದೊಡ್ಡ ಕಂಟೇನರ್ ಹಡಗು ಭಾರತಕ್ಕೆ ಬಂದಿಲ್ಲ ಅನ್ನೋದು ಗೊತ್ತಾಗಿದೆ. 400 ಮೀಟರ್‌ ಉದ್ದ ಹಾಗೂ 20 ಅಡಿ ಉದ್ದದ 24 ಸಾವಿರ ಕಂಟೇನರ್‌ಗಳನ್ನ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರೊ ʻಎವರ್‌ ಅಲಾಟ್ʼ ಹಡಗು ತಂಗಲು ಬೇಕಾದ ವ್ಯವಸ್ಥೆ ಭಾರತೀಯ ಬಂದರುಗಳಲ್ಲಿ ಇಲ್ಲ. ಹೀಗಾಗಿ ಇದು ಭಾರತಕ್ಕೆ ಬರ್ತಾಯಿಲ್ಲ ಅಂತ ಹೇಳಲಾಗ್ತಿದೆ. ಲಂಕಾದ ಕೊಲೊಂಬೊ ಬಂದರಿಗೆ ಬರಲಿರೊ ಈ ಎವರ್‌ ಅಲಾಟ್‌ ಹಡಗು ಸದ್ಯ ದಕ್ಷಿಣ ಆಫ್ರಿಕಾದಲ್ಲಿದೆ. ಭಾರತದ ಅತಿದೊಡ್ಡ ಕಂಟೇನರ್‌ ಹ್ಯಾಂಡ್ಲಿಂಗ್‌ ವ್ಯವಸ್ಥೆ ಹೊಂದಿರೊ ಜವಾಹರಲಾಲ್‌ ನೆಹರೂ ಪೋರ್ಟ್‌ ಕೂಡ ಇಂಥ ಹಡಗುಗಳಿಗೆ ನ್ಯಾವಿಗೇಟ್ ಮಾಡಲು ಅಗತ್ಯವಿರುವ 17-ಮೀಟರ್ ಡ್ರಾಫ್ಟ್ ಅನ್ನು ಹೊಂದಿಲ್ಲ. ಅಂದ್ರೆ ಒಂದು ಹಡಗು ನೀರಿನ ತಳವನ್ನ ಮುಟ್ಟದೇ ತೇಲೋಕೆ ಬೇಕಾದ ಕನಿಷ್ಟ ನೀರಿನ ಆಳ. ಈ ರೀತಿ ಭಾರತದ ಬಂದರುಗಳ ಅಸಾಮರ್ಥ್ಯದಿಂದ ವಿಶ್ವದ ಅತಿದೊಡ್ಡ ಹಡಗುಗಳನ್ನ ಸರಿಯಾಗಿ ಬಳಸಿಕೊಳ್ಳೋಕೆ ಆಗ್ತಿಲ್ಲ ಅಂತ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply