ಷೇರುಪೇಟೆಯಲ್ಲಿ ಐತಿಹಾಸಿಕ ಟಿ+0 ಸೆಟಲ್‌ಮೆಂಟ್‌ ಜಾರಿ!

masthmagaa.com:

ಅವತ್ತಿನ ಷೇರು ವ್ಯವಹಾರವನ್ನೇ ಅಂದೇ ಇತ್ಯರ್ಥಗೊಳಿಸುವಂಥ ಐತಿಹಾಸಿಕ ‘ಟಿ+0 ಸೆಟಲ್‌ಮೆಂಟ್‌ ಸೈಕಲ್‌’ ವ್ಯವಸ್ಥೆ ಗುರುವಾರದಿಂದ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಇದನ್ನ ವಿಶ್ವದ ಅತ್ಯಂತ ಫಾಸ್ಟೆಸ್ಟ್‌ ಸ್ಟಾಕ್‌ ಸೆಟಲ್‌ಮೆಂಟ್‌ ವ್ಯವಸ್ಥೆ ಅಂತ ಹೇಳಲಾಗ್ತಿದೆ. ಮೊದಲ ಹಂತದಲ್ಲಿ 25 ಷೇರುಗಳ ವಹಿವಾಟನ್ನ ಈ ವ್ಯವಸ್ಥೆ ಒಳಗೆ ಸೆಟಲ್‌ ಮಾಡಲಾಗಿದೆ. ಅಂದ್ಹಾಗೆ ಇಷ್ಟು ದಿನ, ಸ್ಟಾಕ್‌ ಮಾರ್ಕೆಟ್‌ನಲ್ಲಿ ಟಿ+1 ಸೆಟಲ್‌ಮೆಂಟ್‌ ವ್ಯವಸ್ಥೆ ಇತ್ತು. ಇದ್ರಲ್ಲಿ ಷೇರುಗಳನ್ನ ಮಾರಾಟ ಮಾಡಿದ ಮರುದಿನ ಖಾತೆಗೆ ಹಣ ಜಮಾ ಮಾಡಲಾಗ್ತಿತ್ತು. ಆದ್ರೆ ಟಿ+0 ಸೆಟಲ್‌ಮೆಂಟ್‌(T+0, Trade + 0 settlement) ವ್ಯವಸ್ಥೆಯಲ್ಲಿ ಅವತ್ತಿನ ಟ್ರೇಡಿಂಗ್‌ ಅವತ್ತೇ ಸೆಟಲ್‌ ಆಗುತ್ತೆ. ಮಧ್ಯಾಹ್ನ 1:30ರೊಳಗೆ ಷೇರುಗಳನ್ನ ಮಾರಾಟ ಮಾಡಿದರೆ, ಅದೇ ದಿನ ಸಂಜೆ 4:30ರೊಳಗೆ ನಿಮ್ಮ ಡಿಮ್ಯಾಟ್‌ ಖಾತೆಗೆ ಹಣ ಜಮಾ ಆಗುತ್ತೆ. ಸದ್ಯ ಪ್ರಾಯೋಗಿಕವಾಗಿ ಸೆಬಿ ಈ ವ್ಯವಸ್ಥೆ ಜಾರಿ ಮಾಡಿದೆ. ಇವತ್ತು SBI, ಟಾಟಾ ಕಮ್ಯುನಿಕೇಶನ್ಸ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ವೇದಾಂತ ಸೇರಿದಂತೆ 25 ಷೇರುಗಳನ್ನ ಈ ವ್ಯವಸ್ಥೆ ಅಡಿ ಸೆಟಲ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply