ವಿಶ್ವದ ಅತಿಹಿರಿಯ ಮನುಷ್ಯ ಜೀವಿ ಇನ್ನಿಲ್ಲ… ಯಾರು ಗೊತ್ತಾ?

masthmagaa.com:

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ, ಅನ್ನೋ ಗೌರವಕ್ಕೆ ಪಾತ್ರವಾಗಿದ್ದ ಜಪಾನಿನ ಕಾನೆ ತನಾಕ ಇಹಲೋಕ ತ್ಯಜಿಸಿದ್ದಾರೆ. 119 ವರ್ಷಗಳ ಕಾಲ ಬದುಕಿದ್ದ ಇವ್ರು ಜನಸಿದ್ದು ಜನವರಿ 2, 1903 ರಲ್ಲಿ ಅದೇ ವರ್ಷ ರೈಟ್‌ ಸಹೋದರರು ಮೊದಲ ವಿಮಾನ ಹಾರಿಸಿದ್ರು. ಇನ್ನು ಆ ಮೂಲಕ ಭೂಮಿಯ ಮೇಲೆ ಹೆಚ್ಚು ಕಾಲ ಬದುಕಿದ್ದ ಎರಡನೇ ವ್ಯಕ್ತಿ ಅನ್ನೋ ಹಿರಿಮೆಗೆ ಇವ್ರು ಪಾತ್ರವಾಗಿದ್ದರು. ಮೊದಲ ಸ್ಥಾನದಲ್ಲಿ ಫ್ರಾನ್ಸ್‌ನ ಜಾನೆ ಕೆಲ್ಮಂಟ್‌ ಇದ್ದಾರೆ. ಇವರು 1875 ರಲ್ಲಿ ಹುಟ್ಟಿ1997ರಲ್ಲಿ ಮೃತಪಟ್ಟಿದ್ದು ಸುಮಾರು 122 ವರ್ಷಗಳ ಕಾಲ ಬದುಕಿದ್ರು. ಇವರ ನಂತರ ಅತಿ ಹಿರಿಯ ಜೀವಿ ಅಂತ ಕರೆಸಿಕೊಂಡಿದ್ದ ತನಾಕ ಗಿನ್ನಿಸ್‌ ವಲ್ಡ್‌ ಬುಕ್ ರೆಕಾರ್ಡ್‌ಗೂ ಸೇರಿದ್ರು. ಈಗ ಕೊನೆಯುಸಿರೆಳೆದಿದ್ದಾರೆ. ಅಂದ್ಹಾಗೆ ಇವರ ನಂತರ ಈಗ ಫ್ರೆಂಚ್‌ ಮಹಿಳೆ ಲುಕಿಲ್‌ ರಂಡನ್‌ ಸಧ್ಯ ವಿಶ್ವದ ಹಿರಿಯ ಮನುಷ್ಯ ಜೀವಿ. 1904 ರಲ್ಲಿ ಜನಿಸಿರೋ ಅವರಿಗೆ ಈಗ 118ರ ಪ್ರಾಯ.

-masthmagaa.com

Contact Us for Advertisement

Leave a Reply