ಬೆಂಗಳೂರಿನಲ್ಲಿ WPL ಉದ್ಘಾಟನಾ ಪಂದ್ಯ: ಡೆಲ್ಲಿ, ಮುಂಬೈ ಮಧ್ಯೆ ಕಾದಾಟ!

masthmagaa.com:

ವುಮೆನ್ಸ್‌ ಪ್ರೀಮಿಯರ್‌ ಲೀಗ್‌(WPL)ನ ಎರಡನೇ ಆವೃತ್ತಿಗೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಾಲನೆ ದೊರೆತಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಸೆಣೆಸಾಟ ನಡೆಸಿವೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿದ್ದು, ಆರಂಭಿಕ 11 ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಇನ್ನುಳಿದ 11 ಪಂದ್ಯಗಳು ಹಾಗೂ ಮಾರ್ಚ್‌ 17ರ ಫೈನಲ್‌ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಮತ್ತೊಂದೆಡೆ ಭಾರತ-ಇಂಗ್ಲೆಂಡ್‌ ನಡುವಿನ 4ನೇ ಟೆಸ್ಟ್‌ ರಾಂಚಿಯಲ್ಲಿ ಶುರುವಾಗಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿರೋ ಆಂಗ್ಲ ಪಡೆ ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 302ರನ್‌ ಕಲೆಹಾಕಿದೆ. ಈ ವೇಳೆ ಜಾನಿ ಬೇರ್ಸ್ಟೋ ವಿಕೆಟ್‌ ಪಡೆಯೊ ಮೂಲಕ ಆರ್‌. ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ದ 100 ವಿಕೆಟ್‌ ಪಡೆದ ದಾಖಲೆ ಬರೆದ್ರು. ಇನ್ನು ಆಕಾಶ್‌ ದೀಪ್‌ ಬೌಲಿಂಗ್‌ಗೆ ಆರಂಭಿಕ ಆಘಾತ ಅನುಭವಿಸಿದ ಇಂಗ್ಲೆಂಡ್‌ಗೆ ಜೋ ರೂಟ್‌ ಆಸರೆಯಾಗಿದ್ದಾರೆ. ಅವರು 106ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

-masthmagaa.com

Contact Us for Advertisement

Leave a Reply