ನೂತನ ಸಂಸತ್ ಕಟ್ಟಡದ ಮುಂದೆ ಪ್ರತಿಭಟನೆ ಮಾಡಲು ಹೊರಟಿದ್ದ ಕುಸ್ತಿಪಟುಗಳ ಬಂಧನ!

masthmagaa.com:

ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ WFI ಮುಖ್ಯಸ್ಥ ಬ್ರಿಜ್‌ ಭೂಷಣ್‌ ವಿರುದ್ದ ಕುಸ್ತಿಪಟುಗಳ ಹೋರಾಟ ಮುಂದುವರೆದಿದೆ. ಇದೀಗ ಹೊಸ ಸಂಸತ್ ಕಟ್ಟಡದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಪ್ರಯತ್ನಿಸುತ್ತಿದ್ದ ಕುಸ್ತಿಪಟುಗಳನ್ನ ಪೊಲೀಸರು ಬಂಧಿಸಿದ್ದಾರೆ. ವಿನೇಶ್​ ಪೋಗಟ್,ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಕೆಲವು ಕುಸ್ತಿಪಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಾತಾಡಿರುವ ಕುಸ್ತಿಪಟು ಸಾಕ್ಷಿ ಮಲಿಕ್‌, ಲೈಂಗಿಕ ದೌರ್ಜನ್ಯ ನಡೆಸಿರುವ ಗೂಂಡಾ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರು ಇಂದು ಹೊಸ ಸಂಸತ್ತಿನಲ್ಲಿ ಕುಳಿತಿದ್ದಾರೆ. ಆದರೆ ನಮ್ಮನ್ನ ರಸ್ತೆಯಲ್ಲಿ ಎಳೆದುಕೊಂಡು ಹೋಗಲಾಗ್ತಿದೆ. ಭಾರತೀಯ ಕ್ರೀಡಾಪಟುಗಳಿಗೆ ಇದು ಅತ್ಯಂತ ದುಃಖದ ದಿನ ಅಂತ ಹೇಳಿದ್ದಾರೆ. ಇತ್ತ ಕುಸ್ತಿಪಟುಗಳ ಬಂಧನಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ʻಪಟ್ಟಾಭಿಷೇಕ ಮುಗಿದಿದೆ ಇದೀಗ ಅಹಂಕಾರಿ ರಾಜ ಬೀದಿಗಳಲ್ಲಿ ಸಾರ್ವಜನಿಕರನ್ನ ಹತ್ತಿಕ್ಕುತ್ತಿದ್ದಾನೆʼ ಅಂತ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದ್‌ ಕಡೆ ಕುಸ್ತಿಪಟುಗಳನ್ನ ಪೊಲೀಸರು ಎಳೆದು ಹೋಗುತ್ತಿರುವ ವಿಡಿಯೋ ಹಾಗೂ ಫೊಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಪೊಲೀಸರ ಕ್ರಮವನ್ನ ಖಂಡಿಸಿದ್ದಾರೆ.

-masthmagaa.com

Contact Us for Advertisement

Leave a Reply