masthmagaa.com:

ಚೀನಾದ ವುಹಾನ್​​ನಲ್ಲಿ ಅಧಿಕಾರಿಗಳು ನೀಡಿರೋ ಲೆಕ್ಕಕ್ಕಿಂತ ಮೂರು ಪಟ್ಟು ಹೆಚ್ಚು ಜನರಿಗೆ ಕೊರೋನಾ ತಗುಲಿತ್ತು ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಧಿಕಾರಿಗಳ ಲೆಕ್ಕದ ಪ್ರಕಾರ ಇಲ್ಲಿ 50,340 ಜನರಿಗೆ ಮಾತ್ರವೇ ಕೊರೋನಾ ತಗುಲಿತ್ತು. ಆದ್ರೆ ವುಹಾನ್​​ನಲ್ಲಿ 1 ಲಕ್ಷದ 68 ಸಾವಿರ ಜನರಿಗೆ ಸೋಂಕು ತಗುಲಿತ್ತು ಅಂತ ಚೀನಾದ ಸಂಶೋಧಕರು ಅಧ್ಯಯನವೊಂದರಲ್ಲಿ ಪತ್ತೆಹಚ್ಚಿದ್ದಾರೆ. ಚೀನಾದಲ್ಲಿ ಮಾರ್ಚ್​​ ಮತ್ತು ಮೇ ತಿಂಗಳಲ್ಲಿ 60 ಸಾವಿರ ಆರೋಗ್ಯಯುತ ಜನರ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ಅದರಲ್ಲಿ ವುಹಾನ್​ನ ಶೇ.1.68 ಮಂದಿಯಲ್ಲಿ ಕೊರೋನಾ ವಿರುದ್ಧದ ಪ್ರತಿಕಾಯಗಳು ಉತ್ಪತ್ತಿಯಾಗಿರೋದು ಪತ್ತೆಯಾಗಿದೆ. ಅದೇ ಹುಬೇ ಪ್ರಾಂತ್ಯದ ಉಳಿದ ಭಾಗಗಳಲ್ಲಿ ಶೇ.59 ಮತ್ತು ಉಳಿದಂತೆ ಚೀನಾದಲ್ಲಿ ಶೇ.38ರಷ್ಟು ಜನರಲ್ಲಿ ಕೊರೋನಾ ವಿರುದ್ಧದ ಪ್ರತಿಕಾಯಗಳು ಪತ್ತೆಯಾಗಿದ್ದವು. ಅಂದ್ರೆ ಅಷ್ಟು ಜನರಿಗೆ ಕೊರೋನಾ ಬಂದು ಹೋಗಿದೆ ಅಂತ ಅರ್ಥ.. ಅಂದಹಾಗೆ ಚೀನಾದ ಹುಬೇ ಪ್ರಾಂತ್ಯದಲ್ಲಿರೋ ವುಹಾನ್​​ನಲ್ಲೇ 2019ರ ಡಿಸೆಂಬರ್​​ನಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.

-masthmagaa.com

Contact Us for Advertisement

Leave a Reply