ಚೀನಾಗೆ ಭೇಟಿ ನೀಡಲಿದ್ದಾರೆ ತೈವಾನ್‌ನ ಮಾಜಿ ನಾಯಕ!

masthmagaa.com:

ಚೀನಾ-ತೈವಾನ್‌ ನಡುವಿನ ಸಂಘರ್ಷದ ನಡುವೆನೂ ಇದೀಗ ತೈವಾನ್‌ನ ಮಾಜಿ ಅಧ್ಯಕ್ಷ ಮಾ ಇಂಗ್‌ ಜೆಯೋ ಚೀನಾಗೆ ಭೇಟಿ ನೀಡಲು ಮುಂದಾಗಿದ್ದಾರೆ. 1949 ನಂತ್ರ ಇದುವರೆಗೂ ಯಾವೊಂದು ತೈವಾನ್‌ನ ನಾಯಕರೂ ಚೀನಾಗೆ ಭೇಟಿ ನೀಡಿಲ್ಲ. ಆದ್ರೆ ಈ ಮಾ ಇಂಗ್‌ ಜೆಯೋ ಕಳೆದ ವರ್ಷ ಚೀನಾಗೆ ಭೇಟಿ ನೀಡದ್ರು. ಈ ಮೂಲಕ ಚೀನಾಗೆ ಭೇಟಿ ನೀಡಿರೋ ಮೊದಲ ಮಾಜಿ ತೈವಾನ್‌ ನಾಯಕ ಅಂತ ಕರೆಸಿಕೊಂಡಿದ್ದಾರೆ. ಇದೀಗ ಪುನಃ ಚೀನಾಗೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ʻಯಾರ್‌ ಕೂಡ ಈ ʻಫ್ಯಾಮಿಲಿ ರೀಯುನಿಯನ್‌ʼ ನಿಲ್ಲಿಸೋಕೆ ಸಾಧ್ಯವಿಲ್ಲ. ತೈವಾನ್‌ನ ಜಲಸಂಧಿಯ ಎರಡು ಕಡೆಗಳು ಒಂದಾಗೋದನ್ನ ತಡೆಯೋಕೆ ಯಾರಿಂದಲೂ ಆಗಲ್ಲ. ಹಾಗೂ ಚರ್ಚಿಸಲಾಗದೇ ಇರೋ ಸಮಸ್ಯೆನೇ ಇಲ್ಲʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply