ಟೆಕ್ನಾಲಜಿ ವಿಚಾರವಾಗಿ ಚೀನಾ ತಡೆಯೋರಿಲ್ಲ: ಅಬ್ಬರಿಸಿದ ಜಿನ್‌ಪಿಂಗ್

masthmagaa.com:

ʻಜಗತ್ತಿನ ಯಾವ ಶಕ್ತಿಯೂ ಚೀನಾದ ಟೆಕ್ನಾಲಜಿ ಬೆಳವಣಿಗೆಯನ್ನ ನಿಲ್ಲಿಸೋಕಾಗಲ್ಲ ಅಂತ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಹೇಳಿಕೆ ಕೊಟ್ಟಿದ್ದಾರೆ. ಇತ್ತೀಚೆಗಷ್ಟೆ ನೆದರ್‌ಲೆಂಡ್‌ ಪ್ರಧಾನಿ ಮಾರ್ಕ್‌ ರುಟ್‌ ಅವ್ರನ್ನ ಜಿನ್‌ಪಿಂಗ್‌ ಮೀಟ್‌ ಮಾಡಿ, ಪ್ರಮುಖ ಟೆಕ್ನಾಲಜಿ ಸಮಸ್ಯೆಗಳು, ಅದ್ರಲ್ಲೂ ಸೆಮಿಕಂಡಕ್ಟರ್‌ ವಲಯದ ವಿಚಾರವಾಗಿ ಮಾತನಾಡಿದ್ರು. ನಂತರ ರಿಯಾಕ್ಟ್‌ ಮಾಡಿರೋ ಜಿನ್‌ಪಿಂಗ್, ʻಚೀನಾದ ಜನರು ಕಾನೂನುಬದ್ಧವಾಗಿ ಅಭಿವೃದ್ದಿಯ ಹಕ್ಕನ್ನ ಹೊಂದಿದ್ದಾರೆ. ಚೀನಾಗೆ ಹಾಗೂ ಅದ್ರ ಜೊತೆ ಸಂಬಂಧ ಬೆಳೆಸೋ ದೇಶಗಳಿಗೆ ಉಪಯೋಗ ಆಗೋ ರೀತಿ ವಿದೇಶಾಂಗ ಸಂಬಂಧ ಬೆಳೆಸೋಕೆ ಒತ್ತು ನೀಡಲಾಗುತ್ತೆʼ ಅಂತೇಳಿದ್ದಾರೆ. ಹೀಗಂತ ಚೀನೀ ಮಾಧ್ಯಮಗಳು ವರದಿ ಮಾಡಿವೆ. ಅಂದ್ಹಾಗೆ ನೆದರ್‌ಲೆಂಡ್‌ ಅಮೆರಿಕ ಜೊತೆ ಸೇರಿ ಚೀನಾಗೆ ಹೋಗ್ತಿದ್ದ ಚಿಪ್‌ ಟೆಕ್ನಾಲಜಿ ರಫ್ತಿನ ಮೇಲೆ ನಿರ್ಬಂಧ ಹಾಕಿತ್ತು. ಇದಾದ್ಮೇಲೆ ಚೀನಾ ಹಾಗೂ ನೆದರ್‌ಲೆಂಡ್‌ ಮದ್ಯ ವೈಮನಸ್ಯ ಶುರು ಆಗಿತ್ತು. ನೆದರ್‌ಲ್ಯಾಂಡ್‌ನ ಚಿಪ್‌ ತಯಾರು ಮಾಡೋ ಮಷಿನ್‌ಗಳ ಉತ್ಪಾದಕಾ ಕಂಪನಿ ASML ವ್ಯವಹಾರಕ್ಕೆ ಭಾರೀ ಹೊಡೆತ ಬಿದ್ದಿತ್ತು. ಚಿಪ್‌ ತಯಾರಿಕೆ ಬಳಸೋ ಅಲ್ಟ್ರಾವೈಲೆಟ್‌ ಲಿಥೋಗ್ರಫಿ ಮಷಿನ್‌ಗಳ ರಫ್ತಿನ ಮೇಲೆ ಹೊಡೆತ ಬಿದ್ದಿತ್ತು. ಇದೀಗ ಉಭಯ ದೇಶಗಳು ಮತ್ತೆ ಸಹಕಾರ ಜಾಸ್ತಿ ಮಾಡೋಕೆ ಮುಂದಾಗಿರೋದು ಚೀನಾ ಚಿಪ್‌ ಇಂಡಸ್ಟ್ರಿಗೆ ಬೂಸ್ಟ್‌ ಸಿಕ್ಕಂತಾಗಿದೆ. ಇದೇ ಕಾರಣಕ್ಕೆ ಜಿನ್‌ಪಿಂಗ್‌ ರೊಚ್ಚಿಗೆದ್ದು ಇನ್ನು ನಮ್ಮನ್ನ ತಡೆಯೋರಿಲ್ಲ ಅಂತ ಅಬ್ಬರಿಸಿದ್ದಾರೆ. ಅಲ್ಲದೆ ಇಂಡೈರೆಕ್ಟಾಗಿ ಅಮೆರಿಕಗೆ ಟಾಂಗ್‌ ಕೊಟ್ಟಿರೋ ಜಿನ್‌ಪಿಂಗ್‌, ʻವಿಜ್ಞಾನ ಹಾಗೂ ಟೆಕ್ನಾಲಜಿ ವಿಚಾರಗಳನ್ನಿ ನಿರ್ಬಂಧ ಏರೋದ್ರಿಂದ, ಸಪ್ಲೈ ಚೈನ್‌ ಹಾಳು ಮಾಡೋದ್ರಿಂದ, ದೇಶಗಳ ಮದ್ಯ ವೈಮನಸ್ಯ ಬೆಳೆಯುತ್ತೆ, ಸಹಕಾರ ಬೆಳೆಯೋದ್ರ ಬದಲು ಆ ದೇಶಗಳು ಎದುರುಬದರಾಗಿ ನಿಲ್ಲಬೇಕಾಗುತ್ತೆʼ ಅಂದಿದ್ದಾರೆ. ಇನ್ನು ಡಚ್ ಪಿಎಂ ಮಾರ್ಕ್‌ ರುಟ್‌ ಕೂಡ ಚೀನಾ ಜೊತೆಗೆ ಟೆಕ್ನಾಲಜಿ ರಫ್ತು ಮಾಡೋದ್ರ ಬಗ್ಗೆ ಸುಳಿವು ನೀಡಿದ್ದಾರೆ. ಈಗಾಗ್ಲೆ ಇವಿ ಹಾಗೂ AI ಕ್ಷೇತ್ರದಲ್ಲಿ ಭರ್ಜರಿ ಅಭಿವೃದ್ಧಿ ಕಾಣ್ತಿರೋ ಚೀನಾಗೆ ಈಗ ನೆದರ್‌ಲೆಂಡ್‌ ಟೆಕ್ನಾಲಜಿಯಿಂದ ಹೊಸ ಹುರುಪು ಸಿಗಬೋದು ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply