ಯಶ್‌ 19ನೇ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ, ನಿರ್ದೇಶಕಿ ಗೀತು ಮೋಹನ್‌ದಾಸ್ !

masthmagaa.com:

ಕೆಜಿಎಫ್ ಸ್ಟಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಯಶ್ ಅವರ ಮುಂದಿನ ಚಿತ್ರ ಘೋಷಣೆಗಾಗಿ ಕಾಯುತ್ತಿದ್ದಾರೆ. ಕೆಜಿಎಫ್ ಚಾಪ್ಟರ್‌ 1 ಮತ್ತು 2ರ ಯಶಸ್ಸಿನ ನಂತರ ಯಶ್‌ಗೆ ಆಫರ್‌ಗಳ ಮಹಾಪೂರವೇ ಹರಿದುಬರುತ್ತಿದೆ. ಯಶ್‌ಗೆ ಕನ್ನಡ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಹಲವು ಆಫರ್‌ಗಳು ಬಂದಿತ್ತು, ಹಲವಾರು ಆಫರ್‌ಗಳನ್ನ ಯಶ್‌ ತಿರಸ್ಕರಿಸಿದ್ದಾರೆ. ಆದರೆ ಈಗ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ಯಶ್‌ ಅವರ 19ನೇ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿಲಿದ್ದಾರೆ ಅಂತ ಸುದ್ದಿಯಾಗಿದೆ.

ಯಶ್ ಮತ್ತು ಗೀತು ಮೋಹನ್‌ದಾಸ್ ಕಳೆದ ಒಂದು ವರ್ಷದಿಂದ ಸಿನಿಮಾದ ಬಗ್ಗೆ ಮತ್ತು ಶೂಟಿಂಗ್‌ಗಳ ಬಗ್ಗೆ ಚರ್ಚೆ ಮಾಡ್ತಾ ಇದ್ದರು. ಗೀತು ಅವರ ಡೈರೆಕ್ಷನ್‌ಗೆ ಯಶ್ ಫಿದಾ ಆಗಿದ್ದರು. ಭಾರತೀಯ ಚಿತ್ರರಂಗದ ಕೆಲವು ದೊಡ್ಡ ಡೈರೆಕ್ಟರ್‌ಗಳ ಜೊತೆ ಯಶ್ ಸಿನಿಮಾ ಮಾಡ್ತಾರೆ ಅಂತ ಎಲ್ಲರೂ ನಿರೀಕ್ಷಿಸುತ್ತಿದ್ದಾಗ, ರಾಕಿಂಗ್ ಸ್ಟಾರ್ ಮಲಯಾಳಂ ಚಿತ್ರರಂಗದ ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಮೂಲಗಳ ಪ್ರಕಾರ ಯಶ್‌ಗೆ ಬಂದ ಅತ್ಯಂತ ಶಕ್ತಿಶಾಲಿ ಸ್ಕ್ರಿಪ್ಟ್‌ಗಳಲ್ಲಿ ಇದು ಒಂದಾಗಿದೆ.

ಯಶ್‌ ಯಾವಗಲೂ ಸಿನಿಮಾ ಸೆಲೆಕ್ಟ್‌ ಮಾಡೋದಕ್ಕೆ ತಮ್ಮ ಮನಸಿನ ಮಾತನ್ನ ಕೇಳ್ತಾರೆ. “ಯಶ್‌ನಿಂದ ನಿರೀಕ್ಷೆಗಳು ಗಗನಕ್ಕೇರಿವೆ, ಬಜೆಟ್‌ನ್ನ ಬೆನ್ನಟ್ಟುವ ಬದಲು ಒಳ್ಳೆ ಕತೆಯಿರುವ ಸಿನಿಮಾಗೆ ಸಹಿ ಹಾಕುವ ಅಂಚಿನಲ್ಲಿದ್ದಾರೆ. ಇನ್ನು 30 ದಿನಗಳಲ್ಲಿ ಗೀತು ಮೋಹನ್ ದಾಸ್ ಚಿತ್ರ ಘೋಷಣೆಯಾಗುವ ನಿರೀಕ್ಷೆಯಿದೆ. ಈ ವಿಷಯ ಇನ್ನೂ ಚರ್ಚೆಯ ಹಂತದಲ್ಲಿದೆ. 15 ದಿನದಲ್ಲಿ ಘೋಷಣೆ ಆಗಬಹುದು ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply