ಪೆಸಿಫಿಕ್‌ ಸಾಗರದ ಕೆಳಗೆ ಪತ್ತೆ ಆಗಿದ್ದು ಏನು ಗೊತ್ತಾ?

masthmagaa.com:

ಪೆಸಿಫಿಕ್‌ ಸಾಗರದ ಕೆಳಗೆ ವಿಜ್ಞಾನಿಗಳು ಹಳದಿ ಇಟ್ಟಿಗೆಯಿಂದ ಮಾಡಿದ ದಾರಿಯನ್ನ ಪತ್ತೆ ಹಚ್ಚಿದ್ದಾರೆ. ಈ ವಿಡಿಯೋ ಯುಟ್ಯೂಬ್‌ನಲ್ಲಿ ವೈರಲ್‌ ಆಗಿದೆ. ಎಕ್ಸ್‌ಪ್ಲೊರೇಷನ್‌ ವೆಸಲ್‌ ನಾಟುಲಸ್‌ ಅನ್ನೋ ಅನ್ವೇಷಣಾ ಹಡಗಿನ ಸಿಬ್ಬಂದಿ ಲಿಲಿಯೊಕಲಾನಿ ರಿಡ್ಜ್‌ ಅಂದ್ರೆ ಸಮುದ್ರದಲ್ಲಿನ ಪರ್ವತವನ್ನ ಅಧ್ಯಯನ ಮಾಡೋವಾಗ ವಿಚಿತ್ರವಾಗಿ ಕಾಣೊ ಈ ರಚನೆ ಕಂಡುಬಂದಿದೆ. ಇನ್ನ ವಿಡಿಯೋ ಕ್ಲಿಪ್‌ನಲ್ಲಿ ಒಬ್ಬ ಸಂಶೋಧಕ ಈ ದಾರಿಯನ್ನ ʻಅಟ್ಲಾಂಟಿಸ್‌ಗೆ ಹೋಗುವ ದಾರಿʼ ಅಂತ ವರ್ಣಿಸಿದ್ದಾರೆ. ಆದ್ರೆ ಈ ಪ್ರದೇಶದಲ್ಲಿ ಹಿಂದೆ ಜ್ವಾಲಾಮುಖಿ ಉಕ್ಕಿರೋದ್ರಿಂದ ಕಲ್ಲುಗಳು ಸತತವಾಗಿ ಕೂಲ್‌ ಆಗೋದು ಹೀಟ್‌ ಆಗೋದು ಆಗಿ ಈ ರೀತಿ ರಚನೆ ಉಂಟಾಗಿರಬಹುದು ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply