ಇಮ್ರಾನ್‌ ಖಾನ್‌ ಮಾಜಿ ಹೆಂಡ್ತಿಗೂ ನವಾಜ್‌ ಷರೀಫ್‌ ಮಗಳಿಗೂ ಮಾತಿನ ಯುದ್ದ

masthmagaa.com:

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಹೆಂಡ್ತಿ ಮತ್ತು ನವಾಜ್ ಷರೀಫ್ ಮಗಳು ಮರ್ಯಮ್ ನಡುವೆ ಮಾತಿನ ಯುದ್ಧ ಶುರುವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜುಲೈ 25ರಂದು ಚುನಾವಣೆ ನಡೆಸಲು ನಿರ್ಧರಿಸಿರೋದ್ರಿಂದ ಪ್ರಚಾರ ಜೋರಾಗಿದೆ. ಹೆಂಗಾದ್ರು ಮಾಡಿ ಗೆಲ್ಲಲೇ ಬೇಕು ಅಂತ ತೆಹ್ರೀಕ್ ಇ ಇನ್​​ಸಾಫ್ ಪಕ್ಷದ ಇಮ್ರಾನ್ ಖಾನ್​ ಮತ್ತು ಪಿಎಂಎಲ್​ಎನ್ ಅಂದ್ರೆ ಪಾಕಿಸ್ತಾನ್ ಮುಸ್ಲಿಂ ಲೀಗ್​​​ನ ಮರ್ಯಮ್ ನವಾಜ್ ಷರೀಫ್​​​​ ಪಣ ತೊಟ್ಟಿದ್ದಾರೆ. ಇದೇ ರೀತಿ ಮಾತಿನ ಯುದ್ಧ ಕೂಡ ಜೋರಾಗಿದೆ. ಪ್ರಚಾರದ ವೇಳೆ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್​​, ಮರ್ಯಮ್ ನವಾಜ್ ಮಗ ಜುನೈದ್ ಸಫ್ದರ್​ ಬ್ರಿಟನ್​​ನಲ್ಲಿ ಶ್ರೀಮಂತರ ಆಟ ಅಂತ ಕರೆಸಿಕೊಳ್ಳುವ ಪೋಲೋ ಆಡ್ತಿದ್ದಾನೆ. ಇದು ರಾಜರ ಆಟ ಅಂತಲೇ ಕರೆಸಿಕೊಳ್ಳುತ್ತೆ. ಇದಕ್ಕೆ ತಮ್ಮದೇ ಆದ ಕುದುರೆ ಬೇಕು, ಭಾರಿ ಪ್ರಮಾಣದಲ್ಲಿ ದುಡ್ಡು ಬೇಕು.. ಅದನ್ನ ಚಿಕಿತ್ಸೆ ನೆಪದಲ್ಲಿ ಲಂಡನ್​​ನಲ್ಲಿರೋ ನವಾಜ್ ಷರೀಫ್ ಕೂಡ ನೋಡ್ತಾರೆ ಅಂತ ಕಿಡಿಕಾರಿದ್ರು. ಇದ್ರ ಬೆನ್ನಲ್ಲೇ ಸಿಡಿದೆದ್ದ ಪಿಎಂಎಲ್ಎನ್​​​​​​​​​​​​​​​​ ಪಕ್ಷದ ನಾಯಕಿ ಮರ್ಯಮ್, ನನ್ನ ಮಗ ಪೋಲೋ ಸುಮ್ನೆ ಆಡ್ತಿಲ್ಲ. ಕೆಂಬ್ರಿಡ್ಜ್​ ಯುನಿವರ್ಸಿಟಿಗಾಗಿ ಆಡ್ತಿದ್ದಾನೆ. ಅವನು ನವಾಜ್ ಷರೀಪ್ ಮೊಮ್ಮಗನೇ ಹೊರತು ಗೋಲ್ಡ್​​ಸ್ಮಿತ್​​ ಮೊಮ್ಮಗ ಅಲ್ಲ..ಜುನೈದ್​​​​ ಓದುತ್ತಿರೋ ಕಾಲೇಜಿಗೆ ಗೌರವ ತರ್ತಿದ್ದಾನೆ.. ಅದೇ ನಿಮ್ಮ ಮಕ್ಕಳಂತೆ​ ಯಹೂದಿಯ ಮಡಿಲಲ್ಲಿ ಬೆಳೆಯುತ್ತಿಲ್ಲ ಅಂದಿದ್ದಾರೆ. ಇಮ್ರಾನ್ ಖಾನ್​ರ ಮಾಜಿ ಪತ್ನಿ ಜೆಮಿಮಾ ಗೋಲ್ಡ್​ಸ್ಮಿತ್ ಯಹೂದಿ ಧರ್ಮದವರು. ಜೆಮಿಮಾ ಗೋಲ್ಡ್​​​ಸ್ಮಿತ್​​ 1995ರಲ್ಲಿ ಇಮ್ರಾನ್ ಖಾನ್​ರನ್ನು ಮದ್ವೆಯಾಗಿದ್ರು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಆದ್ರೆ 2004ರಲ್ಲಿ ಪಾಕಿಸ್ತಾನ ಬಿಟ್ಟು ಲಂಡನ್​​​ಗೆ ಹಾರಿದ್ರು. ಇವರು ಕೂಡ ಮರ್ಯಮ್ ನವಾಜ್​ ಮಾತಿನ ಬಾಣಕ್ಕೆ ತಿರುಗುಬಾಣ ಬಿಟ್ಟಿದ್ದಾರೆ. ನನ್ನ ಮಕ್ಕಳು ಯಹೂದಿಯ ಮಡಿಲಲ್ಲಿ ಬೆಳೆಯುತ್ತಿದ್ದಾರೆ ಅಂತ ಮರ್ಯಮ್ ಹೇಳಿದ್ದಾರೆ. ನಾನು 2004ರಲ್ಲಿ ಇದೇ ಕಾರಣಕ್ಕೆ ಪಾಕಿಸ್ತಾನ ಬಿಟ್ಟುಬರಬೇಕಾಯ್ತು. ಅಲ್ಲಿರುವಾಗ ಪ್ರತಿದಿನವೂ ನಾನು ಮಾಧ್ಯಮ ಮತ್ತು ರಾಜಕಾರಣಿಗಳಿಂದ ಯಹೂದಿ ವಿರೋಧಿ ಧೋರಣೆಗಳನ್ನು ಎದುರಿಸಬೇಕಾಯ್ತು. ಹಲವಾರು ಬಾರಿ ಮನೆ ಮುಂದೆ ಪ್ರತಿಭಟನೆ, ಕೊಲೆ ಬೆದರಿಕೆಗಳನ್ನು ಕೂಡ ನೀಡಲಾಯ್ತು ಅಂತ ಹೇಳಿದ್ದಾರೆ. ಇದ್ರಿಂದ ಮರ್ಯಮ್​​ಗೆ ಏನ್ ಅನ್ನಿಸ್ತೋ ಏನೋ, ನಿಮ್ಮ ಮಾಜಿ ಪತಿ ಕುಟುಂಬದ ವಿಚಾರ ಎಳೆದಿದ್ದಕ್ಕೆ ನಾನು ಎಳೆಯಬೇಕಾಯ್ತು ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಮರ್ಯಮ್ ವಿರುದ್ಧ ಲಂಡನ್​​ನಲ್ಲಿ ಒಂದು ದೂರು ದಾಖಲಾಗಿದೆ. ಇದ್ರಲ್ಲಿ ಯಹೂದಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮರ್ಯಮ್ ನವಾಜ್​ ಷರೀಫ್​​​ಗೆ ಯುನೈಟೆಡ್​ ಕಿಂಗ್​​ಡಮ್ ಪ್ರವೇಶಕ್ಕೆ ಅವಕಾಶ ನೀಡಬಾರದು.. ನಿರ್ಬಂಧ ವಿಧಿಸಬೇಕು ಅಂತ ಒತ್ತಾಯಿಸಲಾಗಿದೆ.

-masthmagaa.com

Contact Us for Advertisement

Leave a Reply