ಝಾಂಬಿ ಡಿಟೆಕ್ಟಿವ್‌ ಖ್ಯಾತಿಯ ನಟಿ ಜಂಗ್ ಚೇ-ಯುಲ್ ಅನುಮಾನಾಸ್ಪದ ಸಾವು!

masthmagaa.com:

ಝಾಂಬಿ ಡಿಟೆಕ್ಟಿವ್‌ ಸಿನಿಮಾದಲ್ಲಿ ಕಾಣಿಸಿಕೊಂಡ ದಕ್ಷಿಣ ಕೊರಿಯಾದ ನಟಿ ಜಂಗ್ ಚೇ-ಯುಲ್ ತಮ್ಮ 26 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಸಾವಿನ ಹಿಂದಿನ ಕಾರಣದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಏಪ್ರಿಲ್ 11 ರಂದು ಮನೆಯವರು ಮತ್ತು ಆಕೆಯ ಏಜೆನ್ಸಿ ಮ್ಯಾನೇಜ್‌ಮೆಂಟ್ ಎಸ್ ಆಕೆಯ ಸಾವಿನ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

ಅನುಮಾನಸ್ಪದವಾಗಿ ಸಾವಿಗೀಡಾಗಿರುವ ಜಂಗ್ ಳ ಕುಟುಂಬ ಆಕೆಯ ಅಂತ್ಯಕ್ರಿಯೆಯನ್ನು ಪ್ರೈವೇಟ್‌ ಆಗಿ ನಡೆಸುತ್ತಿದೆ. ಆಕೆಯ ಸಾವಿನ ಕುರಿತು ಸುಳ್ಳು ಸುದ್ದಿ ಹಬ್ಬಿಸದಂತೆ ಅಭಿಮಾನಿಗಳಿಗೆ ಅವರ ಕುಟುಂಬದವರು ಮನವಿ ಮಾಡಿದ್ದಾರೆ. ಇನ್ನು ಅವರ ಸಾವಿನ ಕುರಿತು ಸ್ಟೇಟ್ಮೆಂಟ್ ಕೊಟ್ಟಿರುವ ಮ್ಯಾನೇಜ್ ಮೆಂಟ್ ಎಸ್  “ಇಂದು, ನಾವು ದುಃಖಕರ ಮತ್ತು ಹೃದಯವಿದ್ರಾವಕ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದೇವೆ. ನಟಿ ಜಂಗ್ ಚೇ ಯುಲ್ ಅವರು ಏಪ್ರಿಲ್ 11, 2023 ರಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಬೇರೆಯವರಿಗಿಂತ ಹೆಚ್ಚಿನ ದುಃಖದಲ್ಲಿದ್ದ ಕುಟುಂಬದವರ ಇಚ್ಛೆಗೆ ಅನುಗುಣವಾಗಿ, ಅಂತ್ಯಕ್ರಿಯೆಯನ್ನು ಪ್ರೈವೇಟ್‌ ಆಗಿ ಸದ್ದಿಲ್ಲದೆ ನಡೆಸಲಾಗುವುದು” ಎಂದು ತಿಳಿಸಿದೆ.

ನಟಿಯ ಕೊನೆಯ ಪೋಸ್ಟ್‌ನ್ನ ನೋಡಿ ಅಭಿಮಾನಿಗಳು ಕುಟುಂಬದವರಿಗೆ ಕಾಮೆಂಟ್‌ ಮೂಲಕ ಸಮಾಧಾನ ಹೇಳುತ್ತಿದ್ದಾರೆ. ಲಿಫ್ಟ್‌ನಲ್ಲಿದ್ದ ಆಕೆಯ ಕೊನೆಯ ಫೋಟೊಗೆ ಅಭಿಮಾನಿಗಳು ಮರುಗಿ ಬೇಸರ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply