ʼಚೀನಾ ಲ್ಯಾಬ್‌ನಲ್ಲಿ ಶಸ್ತ್ರಾಸ್ತ್ರದಂತೆ ಕೊರೋನ ತಯಾರಿʼ: ವುಹಾನ್‌ ವಿಜ್ಞಾನಿ

masthmagaa.com:

ಇತ್ತೀಚೆಗೆ ಜಗತ್ತನ್ನೇ ಕಾಡಿದ್ದ ಕೊರೊನಾ ವೈರಸ್‌ ಚೀನಾದ ಲ್ಯಾಬ್‌ನಿಂದ ಸೋರಿಕೆಯಾಗಿದೆ ಅನ್ನೊಕೆ ಯಾವುದೇ ಸಾಕ್ಷ್ಯಗಳಿಲ್ಲ ಅಂತ ಅಮೆರಿಕ ಹೇಳಿತ್ತು. ಇದೀಗ ಕೊರೊನಾ ಮೂಲದ ಬಗ್ಗೆ ಚೀನಾದ ವುಹಾನ್‌ ಲ್ಯಾಬ್‌ನ ಸಂಶೋಧಕರೊಬ್ರು ಸ್ಫೋಟಕ ಹೇಳಿಕೆ ನೀಡಿರೋ ಬಗ್ಗೆ ವರದಿಯಾಗಿದೆ. ವುಹಾನ್‌ ಲ್ಯಾಬ್‌ನಲ್ಲಿ ರಿಸರ್ಚರ್‌ ಆಗಿ ಕೆಲಸ ಮಾಡ್ತಿದ್ದ ಚಾವೊ ಶಾನ್‌ ಅನ್ನೋವ್ರೊಬ್ರು ಇಂಟರ್‌ನ್ಯಾಷನಲ್‌ ಪ್ರೆಸ್‌ ಅಸೋಸಿಯೇಷನ್‌ನ ಜೆನಿಫರ್‌ ಜೆಂಗ್‌ಗೆ ಸಂದರ್ಶನ ನೀಡಿದ್ದಾರೆ ಎನ್ನಲಾಗಿದೆ. 2021ರ ಸೆಪ್ಟಂಬರ್‌ನಲ್ಲಿ ಈ ಇಂಟರ್‌ವ್ಯೂ ಮಾಡಲಾಗಿದ್ದು ಈಗ ಅದ್ರ ಜೆನಿಫರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಅದ್ರ ಟ್ರಾನ್ಸ್‌ಕ್ರಿಪ್ಷನ್‌ ಶೇರ್‌ ಮಾಡಿದ್ದಾರೆ. ಇದ್ರಲ್ಲಿ ಕೊರೊನಾ ವೈರಸ್‌ನ್ನ ಬಯೋವೆಪನ್‌ ಅಂದ್ರೆ ಜೈವಿಕ ಅಸ್ತ್ರವಾಗಿ ಚೀನಾ ಉದ್ದೇಶಪೂರ್ವಕವಾಗಿಯೇ ಅಭಿವೃದಿಪಡಿಸಿದೆ ಅಂತ ಹೇಳಿದ್ದಾರೆ. ಜೊತೆಗೆ 2019ರಲ್ಲಿ ಚಾವೊ ಶಾನ್‌ ಅವ್ರಿಗೆ ಅವರ ಉನ್ನತ ಅಧಿಕಾರಿಯೊಬ್ರು 4 ಕೊರೊನಾ ವೈರಸ್‌ ಸ್ಟ್ರೇನ್‌ಗಳನ್ನ ಕೊಟ್ಟು, ಇದ್ರಲ್ಲಿ ಯಾವುದು ಹೆಚ್ಚು ಅಪಾಯಕಾರಿ ಹಾಗೂ ವೇಗವಾಗಿ ಹರಡುತ್ತದೆ ಅನ್ನೊದನ್ನ ಗುರುತಿಸುವ ಟಾಸ್ಕ್‌ ನೀಡಲಾಗಿತ್ತು ಎನ್ನಲಾಗಿದೆ. ಇನ್ನು ಇದೇ ವೇಳೆ ಚಾವೋರ ಕೆಲ ಸಹಸಿಬ್ಬಂದಿಗಳು ಕಾಣೆಯಾಗಿದ್ರು, ಆದ್ರೆ ಕೇಳಿದ್ರೆ ಯಾರೋ ಅಥ್ಲೀಟ್‌ಗಳು ಉಳಿದುಕೊಂಡಿರೋ ಹೋಟೆಲ್‌ನಲ್ಲಿ ಅವ್ರ ಹೆಲ್ತ್‌-ಹೈಜೀನ್‌ ಚೆಕ್‌ ಮಾಡೋಕೆ ಹೋಗಿದ್ದಾರೆ ಅನ್ನೋ ಉತ್ತರ ಬಂದಿತ್ತು. ಆದ್ರೆ ಹೈಜೀನ್‌ ಚೆಕ್‌ ಮಾಡೋಕೆ ವೈರಸ್‌ ರಿಸರ್ಚ್‌ರ್‌ಗಳ ಅವಶ್ಯಕತೆ ಇರಲ್ಲ. ಅವ್ರು ಕೊರೊನಾ ವೈರಸ್‌ನ್ನ ಹರಡೋಕೆ ಹೋಗಿದ್ರು ಅಂತ ಚಾವೊ ಶಾನ್‌ ಸಂಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಜಗತ್ತಿನಾದ್ಯಂತ ಲಕ್ಷಾಂತರ ಜನರ ಸಾವಿಗೆ ಈ ಕೊರೊನಾ ವೈಸರ್‌ ಕಾರಣವಾಗಿತ್ತು. ಜಗತ್ತಿನ ಆರ್ಥಿಕತೆ ಮೇಲೆ ನೀಡಿರೋ ಹೊಡೆತವನ್ನ, ವಿಶ್ವ ಈಗೀಗ ಸುಧಾರಿಸಿಕೊಳ್ತಿದೆ. ಅದರ ಮೂಲವನ್ನ ಹುಡುಕೋಕೆ ಅನೇಕ ತಜ್ಞರು ಪ್ರಯತ್ನಪಟ್ಟಿದ್ದಾರೆ. ಇಲ್ಲಿವರೆಗೂ ಚೀನಾ ಈ ವೈರಸ್‌ ತನ್ನದಲ್ಲ ಅಂತಾನೇ ಹೇಳ್ತಾ ಬಂದಿದೆ. ಈಗಲೂ ಕೂಡ ಈ ಸಂಶೋಧಕರ ಹೇಳಿಕೆಗೆ ಸಾಕ್ಷ್ಯಗಳಿದ್ರೆ ಮಾತ್ರ ಚೀನಾವನ್ನ ಆರೋಪಿಸಬಹದು.

masthmagaa.com:

Contact Us for Advertisement

Leave a Reply