ಪಂಜಾಬ್​ ಕೋರ್ಟ್ ಬ್ಲಾಸ್ಟ್ ಕೇಂದ್ರದ ತಂಡದಿಂದ ತನಿಖೆ

masthmagaa.com:

ನಿನ್ನೆ ಪಂಜಾಬ್​​​​​ನ ಲೂದಿಯಾನಾದ ಕೋರ್ಟ್​​ನಲ್ಲಿ ನಡೆದ ಸ್ಫೋಟದ ಹಿಂದೆ ಯಾರ ಕೈ ಇದೆ.. ಯಾಕಾಗಿ ಸ್ಫೋಟ ನಡೆಸಲಾಗಿದೆ ಅಂತ ಇನ್ನೂ ಕೂಡ ತಿಳಿದು ಬಂದಿಲ್ಲ. ಹೀಗಾಗಿ ಪಂಜಾಬ್ ಸರ್ಕಾರ ಈಗ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಗೃಹಸಚಿವ ಅಮಿತ್ ಶಾಗೆ ಕರೆ ಮಾಡಿರೋ ಸಿಎಂ ಚರಣ್​ಜೀತ್ ಸಿಂಗ್ ಚನ್ನಿ, ತನಿಖೆಗೆ ನೆರವು ಕೇಳಿದ್ದಾರೆ. ಅದ್ರ ಬೆನ್ನಲ್ಲೇ ಕೇಂದ್ರ ಸರ್ಕಾರ ಪಂಜಾಬ್​​​​ಗೆ ತನಿಖಾ ತಂಡ ಕಳುಹಿಸಿಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಚರಣ್​ಜೀತ್​, ಮಾಜಿ ಸಚಿವ ಬಿಕ್ರಂ ಮಜೀತಿಯಾ ಹೆಸರು ಕೇಳಿ ಬಂದಿರೋ ಮಾದಕ ವಸ್ತು ಪ್ರಕರಣದ ವಿಚಾರಣೆ ದಿನವೇ ಈ ಘಟನೆ ನಡೆದಿದೆ. ಸೋ ಲಿಂಕ್ ಇದ್ರೂ ಇರಬಹುದು ಅಂತ ಹೇಳಿದ್ದಾರೆ. ಇನ್ನು ಘಟನೆ ಬಗ್ಗೆ ಮಾತಾಡಿರೋ ಲೂದಿಯಾನಾ ಪೊಲೀಸರು, ಪ್ರಾಥಮಿಕ ತನಿಖೆಯಲ್ಲಿ ಘಟನೆಯಲ್ಲಿ ಪ್ರಾಣ ಬಿಟ್ಟ ವ್ಯಕ್ತಿಯೇ ಸ್ಫೋಟಕ್ಕೆ ಕಾರಣವಾಗಿರಬಹುದು.. ಈ ಬಗ್ಗೆ ಸ್ಫೋಟಕ ಎಕ್ಸ್​​ಪರ್ಟ್​​ಗಳು ತನಿಖೆ ನಡೆಸ್ತಿದ್ದಾರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply