ಟ್ರೆಂಡ್‌ಲ್ಲಿ ಇರುವಂತ 10 ಕನ್ನಡದ ಹೀರೋಯಿನ್ಸ್‌ಗಳು

masthmagaa.com:

ಸದ್ಯಕ್ಕೆ ಟ್ರೆಂಡ್‌ಲ್ಲಿ ಇರುವಂತ 10 ಕನ್ನಡದ ಹೀರೋಯಿನ್ಸ್‌ಗಳು  :

ಯಾರ್‌ ಯಾರು ಎಷ್ಟ್‌ ಮೂವಿ ಮಾಡಿದಾರೆ? ಅವರ ಡೇಟ್‌ ಆಫ್‌ ಬರ್ತ್‌ ಎಷ್ಟು? ಇದೆಲ್ಲದರ ಬಗ್ಗೆಯೂ ಈ ವರದಿಯಲ್ಲಿ ಇದೆ.. ಈ ಲಿಸ್ಟ್‌ಲ್ಲಿ ನಿಮ್ಮ ಫೇವರೇಟ್‌ ಹೀರೊಯಿನ್‌ ಕೂಡ ಇರಬಹುದು.

1. ರಚಿತಾ ರಾಮ್‌ : ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಚಂದನವನದ ಪ್ರಮುಖ ನಾಯಕ ನಟಿ. ಇವರು ಅಕ್ಟೋಬರ್‌ 3, 1990ರಂದು ಜನಿಸಿದರು. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತಾ 2013 ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.ಬೆಂಗಳೂರಿನಲ್ಲಿ ಜನಿಸಿದ ರಚಿತಾರ ಬಾಲ್ಯದ ಹೆಸರು ಬಿಂದಿಯಾ ರಾಮ್. ರಚಿತಾರ ಹಿರಿಯ ಸಹೋದರಿ ನಿತ್ಯಾ ರಾಮ್ ಕನ್ನಡ ಮತ್ತು ತಮಿಳು ಕಿರುತೆರಯಲ್ಲಿ ಹಲವು ಸೀರಿಯಲ್‌ಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಟಿಸಿದ್ದಾರೆ.ಕಥಕ್ ಮತ್ತು ಭರತನಾಟ್ಯದಲ್ಲಿ ತರಬೇತಿ ಪಡೆದ ರಚಿತಾ ರಾಮ್ ಸುಮಾರು 50 ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಸಹೋದರಿ ನಿತ್ಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ `ಬೆಂಕಿಯಲ್ಲಿ ಅರಳಿದ ಹೂವು’ ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದರು. ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಅರಸಿ’ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಟಿಸಿ ಜನಮನ್ನಣೆ ಪಡೆದರು. 2013ರಲ್ಲಿ ತೆರೆಕಂಡ ಡಿ ಬಾಸ್‌ ಅಭಿನಯದ ‘ಬುಲ್‌ಬುಲ್’ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪ್ರವೇಶಿಸಿದರು. ಚಿತ್ರದ ಅಡಿಷನ್‌ಗಾಗಿ ಬಂದ 200ಕ್ಕೂ ಹೆಚ್ಚು ಯುವತಿಯರಲ್ಲಿ ರಚಿತಾ ಆಯ್ಕೆಯಾದರು. ಈ ಚಿತ್ರದಲ್ಲಿ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮತ್ತು ಕ್ಯೂಟ್ ನಟನೆಯಿಂದ ಪ್ರೇಕ್ಷಕರ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು. ನಂತರ ದರ್ಶನರ `ಅಂಬರೀಶ್, ಗಣೇಶ್‌ರ `ದಿಲ್ ರಂಗೀಲಾ’, ಸುದೀಪ್‌ರ `ರನ್ನ’, ಶ್ರೀಮುರಳಿಯವರ `ರಥಾವರ’ ಪುನೀತ್‌ರ `ಚಕ್ರವ್ಯೂಹ’ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದ ಬಹುಬೇಡಿಕೆಯ ನಟಿಯಾದರು. ರನ್ನ ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮಫೇರ್ ಸೌಥ್ ಪ್ರಶಸ್ತಿ ಪಡೆದರು. `ಕಾಮಿಡಿ ಟಾಕೀಸ್’,`ಮಜಾಭಾರತ- 2′ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಇವರು ಒಟ್ಟು 26 ಚಿತ್ರಗಳಲ್ಲಿ ನಟಿಸಿದ್ದಾರೆ. 5 ಚಿತ್ರಗಳ ಚಿತ್ರೀಕರಣ ಮುಗಿದಿದ್ದು ಬಿಡಿಗಡೆಯ ಹಂತದಲ್ಲಿದೆ. ಇವರು ಕನ್ನಡ ಇಂಡಸ್ಟ್ರಿಗೆ ಬಂದು 10 ವರ್ಷಗಳು ಕಳೆದಿದೆ. 32 ವರ್ಷದ ಇವರು ತಮ್ಮ ಫಿಟ್‌ನೆಸ್‌ಗೆ ಜಿಮ್‌ ಮತ್ತು ಹೇಲ್ದಿ ಲೈಫ್‌ ಸ್ಟೈಲ್‌ನ್ನು ಫಾಲೊ ಮಾಡ್ತಾರೆ.

2. ಶ್ರೀನಿಧಿ ಶೆಟ್ಟಿ: 1992 ಅಕ್ಟೋಬರ್ 21ರಂದು ಮಂಗಳೂರಿನಲ್ಲಿ ಜನಿಸಿದ ಶ್ರೀನಿಧಿ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. ಬೆಂಗಳೂರಿನ ಜೈನ ವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಇವರು 2016 ರಲ್ಲಿ ಜರುಗಿದ ಮಿಸ್ ಪೆಜೆಂಟ್ ಸ್ಪರ್ಧೆಯ ವಿಜೇತೆ.ಕೆಲಕಾಲ ಬೆಂಗಳೂರಿನ ಖ್ಯಾತ ಸಾಫ್ಟವೇರ್ ಕಂಪನಿ `ಆಕ್ಸೆಂಚರ್’ ನ ಉದ್ಯೋಗಿಯಾಗಿದ್ದರು.ಈ ಸಮಯದಲ್ಲಿ ಹಲವಾರು ಡಿಸೈನರ್‌ಗಳ ಜೊತೆಗೆ ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ. ಹಲವಾರು ಸೌಂದರ್ಯ ಸ್ಫರ್ಧೆಗಳಲ್ಲಿ ಭಾಗವಹಿಸಿರುವ ಇವರು ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಸ್ಪರ್ಧೆಯ ವಿಜೇತೆ. ದುಬೈ,ಪ್ರಾನ್ಸ್,ಜಪಾನ್,ಸಿಂಗಾಪುರ್,ಥೈಲಾಂಡ್,ಪೊಲ್ಯಾಂಡ್ ದೇಶಗಳ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಇವರು ತಮ್ಮ ಸಿನಿಮಾ ಕೆರಿಯರ್‌ನ್ನು ಕೆಜಿಎಫ್‌ ಚಾಪ್ಟರ್‌ 1 ಚಿತ್ರದ ಮೂಲಕ ಪ್ರಾರಂಭ ಮಾಡಿದ್ರು, ಕೆಜಿಎಫ್‌ ಚಾಪ್ಟರ್‌ 1 ಮತ್ತು 2, ಇವೆರಡು ಚಿತ್ರಗಲು ಅವರಿಗೆ ದೊಡ್ಡ ಯಶಸ್ಸನ್ನ ತಂದು ಕೊಟ್ಟಿತು. ಇವರು 3 ಚಿತ್ರಗಳಲ್ಲಿ ನಟಿಸಿದ್ದಾರೆ. 30 ವರ್ಷದ ಇವರು ಮಾಡೆಲ್‌ ಆಗಿರೋದ್ರಿಂದ ಒಳ್ಳೆ ಫಿಟ್‌ನೆಸ್‌ ಫ್ರೀಕ್‌.

3. ಅದಿತಿ ಪ್ರಭುದೇವ : ಕನ್ನಡ ಅಂದ್ರೆ ಅದಿತಿ, ಅದಿತಿ ಅಂದ್ರೆ ಕನ್ನಡ ಅಂತಾನೆ ಫೇಮಸ್‌ ಆಗಿರುವ ಅದಿತಿ ಪ್ರಭುದೇವ. ಅದಿತಿ ಪ್ರಭುದೇವ ಅಪ್ಪಟ ಕನ್ನಡತಿ. ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿರುವ ಈ ಸ್ಯಾಂಡಲ್‌ವುಡ್‌ ಬ್ಯೂಟಿಗೆ ಸದ್ಯ ಅನೇಕ ಸಿನಿಮಾ ಆಫರ್ ಇದ್ದು ಬ್ಯುಸಿಯಾಗಿದ್ದಾರೆ. 1994ರ ಜನವರಿ 13ರಂದು ಜನಿಸಿದ ಅದಿತಿ ಪ್ರಭುದೇವ ಮೊದಲು ಆಂಕರ್ ಆಗಿ ವೃತ್ತಿಜೀವನ ಪ್ರಾರಂಭಿಸಿದ್ದರು. ಅದಿತಿ ಅವರ ಮೂಲ ಹೆಸರು ಸುದೀಪನಾ. ‘ಗುಂಡ್ಯಾನ್ ಹೆಂಡ್ತಿ’ ಧಾರವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದ್ದರು. 2017ರಲ್ಲಿ ಕೃಷ್ಣ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ನಂತರ ಸಿಂಗ, ಬ್ರಹ್ಮಚಾರಿ, ಓಲ್ಡ್ ಮಾಂಕ್, ರಂಗನಾಯಕಿ, ಬಜಾರ್, ತೋತಾಪುರಿ, ಕುಸ್ತಿ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅದಿತಿ ಪ್ರಭುದೇವ ಅವರಿಗೆ ಪ್ರಾಣಿಗಳೆಂದರೆ ಪಂಚಪ್ರಾಣ. ತಮ್ಮ ಪ್ರಾಣಿ ಪ್ರೀತಿಯನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇವರು ಒಟ್ಟು 16 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 29 ವರ್ಷದ ಇವರು ಜಾಸ್ತಿ ಮನೆ ಕೆಲಸ ಮತ್ತು ಗಾರ್ಡನಿಂಗ್‌ ನಲ್ಲಿ ತೊಡಗಿಕೊಳ್ತಾರೆ ಅಲ್ಲದೇ ಯೋಗ ಮತ್ತು ಧ್ಯಾನ ಅವರ ಫಿಟ್‌ನೆಸ್‌ ಮೆಂಟೇನ್‌ ಮಾಡೋಕೆ ಹೆಲ್ಪ್‌ ಆಗಿದೆ.

4. ನಿಶ್ವಿಕಾ ನಾಯ್ಡು: ಮೇ 19, 1996ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗದ ಯುವನಟಿ. ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಮುಗಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಿಶ್ವಿಕಾರ ಮೊದಲ ಚಿತ್ರ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’. ವಿಶೇಷವೆಂದರೆ ಇವರ ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಎರಡನೇ ಚಿತ್ರ ‘ಅಮ್ಮಾ ಐ ಲವ್ ಯು’ ಚಿತ್ರ ಬಿಡುಗಡೆಯಾಯಿತು. ಹಾಗಾಗಿ ಇವರ ಮೊದಲ ಚಿತ್ರ “ಅಮ್ಮಾ ಐ ಲವ್‌ ಯು” ಅಂತ ಕನ್ಸಿಡರ್‌ ಮಾಡಬಹುದು. ನಿಶ್ವಿಕಾ ಸೌಂದರ್ಯ ಸಿರಿಗೆ ಮನಸೋಲದವರೇ ಇಲ್ಲ. ʼಗುರುಶಿಷ್ಯರುʼ ಸಿನಿಮಾದಲ್ಲಿ ಶರಣ್‌ಗೆ ಜೊಡಿಯಾಗಿ ನಟಿಸಿದ್ದ ನಿಶ್ವಿಕಾ ಈ ಸಿನಿಮಾ ಮೂಲಕ ಕನ್ನಡಿಗರಿಗೆ ತುಂಬಾ ಹತ್ತಿರವಾದ್ರು. ಇವರು ಒಟ್ಟು 8 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 26 ವರ್ಷದ ಇವರು ಯೋಗ ಮಾಡೋದ್ರಲ್ಲಿ ಎಕ್ಸ್ಪರ್ಟ್‌ ಅಂತಾನೆ ಹೇಳಬಹುದು. ಇವರು ಲಾಕ್‌ಡೌನ್‌ ಟೈಮಲ್ಲಿ ಇವರು ವಿವಿಧ ರೀತಿಯ ಯೋಗಾಸನಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡ್ಕೊಳ್ತಿದ್ರು. 26 ವರ್ಷದ ಇವರು ತಮ್ಮ ಫಿಟ್‌ನೆಸ್‌ಗೆ ಜಿಮ್‌ ಮತ್ತು ಹೇಲ್ದಿ ಲೈಫ್‌ ಸ್ಟೈಲ್‌ನ್ನು ಫಾಲೊ ಮಾಡ್ತಾರೆ.

5. ಸಂಗೀತಾ ಶೃಂಗೇರಿ : ಇವರು ಮೇ 19, 1996ರಲ್ಲಿ ಜನಿಸಿದರು. ಸಂಗೀತಾ ಶೃಂಗೇರಿಯವರು ಮೂಲತಃ ಚಿಕ್ಕಮಗಳೂರಿನವರು. ಹಿಂದಿಯ “ಹರ ಹರ ಮಹಾದೇವ” ಸೀರಿಯಲ್‌ನಲ್ಲಿ ಸತಿ ಪಾತ್ರದ ಮೂಲಕ ಜನರ ಮೆಚ್ಚುಗೆ ಪಡೆದಿದ್ರು. ಅವರು 2014 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್‌ ಟೆನ್‌ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದರು ಮತ್ತು ವಿಶ್ವ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು. ಸಂಗೀತಾ ಶೃಂಗೇರಿಯವರು 2012 ರಲ್ಲಿ ಖೋ ಖೋದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಪಡೆದಿದ್ದರು. ಇವರ ಮೊದಲ ಕನ್ನಡ ಚಿತ್ರ A+, ಇದು 2018 ರಲ್ಲಿ ಬಿಡುಗಡೆಯಾಯಿತು. ಸಂಗೀತಾ ಶೃಂಗೇರಿಯವರಿಗೆ ದೊಡ್ಡ ಬ್ರೇಕ್‌ ಕೊಟ್ಟ ಚಿತ್ರ ರಕ್ಷಿತ್‌ ಶೆಟ್ಟಿ ಅಭಿನಯದ “777 ಚಾರ್ಲಿ”. ದೇವಿಕಾ ಪಾತ್ರದಲ್ಲಿ ಎಲ್ಲರ ಮನೆಮಾತಾದರು. ನಂತರ ಇವರು ಡಾರ್ಲಿಂಗ್‌ ಕೃಷ್ಣ ಅಭಿನಯದ “ಲಕ್ಕಿ ಮ್ಯಾನ್‌” ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇವರು ಒಟ್ಟು 5 ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ ಭಾಷೆಯ ಶಾರ್ಟ್‌ ಫಿಲ್ಮ್‌ನಲ್ಲೂ ಅಭಿನಯಿಸಿದ್ದಾರೆ. 26 ವರ್ಷದ ಇವರು ತಮ್ಮ ಫಿಟ್‌ನೆಸ್‌ಗೆ ಜಿಮ್‌ ಮತ್ತು ಹೇಲ್ದಿ ಲೈಫ್‌ ಸ್ಟೈಲ್‌ನ್ನು ಫಾಲೊ ಮಾಡ್ತಾರೆ.

6. ಸಪ್ತಮಿ ಗೌಡ : ಸ್ಯಾಂಡಲ್‌ವುಡ್‌ನಲ್ಲಿ ‘ಕಾಂತಾರ’ ಸಿನಿಮಾದ ಮೂಲಕ ಫೇಮಸ್ ಆದ ನಟಿ ಸಪ್ತಮಿ ಗೌಡ ಇವರು ಜೂನ್‌ 6, 1996ರಲ್ಲಿ ಜನಿಸಿದರು. ಇವರು ಮೂಲತಃ ಬೆಂಗಳೂರಿನವರು. ಸಪ್ತಮಿ ಗೌಡ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಸುಪುತ್ರಿ. ಇವರು ನಟಿ ಮಾತ್ರವಲ್ಲದೇ ಒಳ್ಳೆಯ ಪ್ರೊಫೆಷನಲ್‌ ಸ್ವಿಮ್ಮರ್‌ ಕೂಡ ಹೌದು. 5 ವರ್ಷ ಇದ್ದಾಗಲೇ ಇವರು ಸ್ವಿಮ್ಮಿಂಗ್‌ ಟ್ರೇನಿಂಗ್‌ ಜಾಯ್ನ್‌ ಆದರು. 2006ರಲ್ಲಿ ಮಂಗಳೂರಿನಲ್ಲಿ ನಡೆದ ಸ್ಟೇಟ್‌ ಲೆವೆಲ್‌ ಸ್ವಿಮ್ಮಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಗೋಲ್ಡ್‌ ಮೆಡಲ್‌ ಪಡೆಯುವ ಮೂಲಕ ಸಾಧನೆ ಮಾಡಿದ್ರು. ಆಲ್ಮೋಸ್ಟ್‌ ಇವರು ಪಾರ್ಟಿಸಿಪೇಟ್‌ ಮಾಡಿದಂತ ಸ್ವಿಮ್ಮಿಂಗ್‌ನ ಎಲ್ಲಾ ಕಾಂಪಿಟೇಷನ್‌ನಲ್ಲೂ ಗೋಲ್ಡ್‌, ಸಿಲ್ವರ್‌ ಅಥ್ವಾ ಬ್ರೋಂಜ್‌ ಪದಕಗಳನ್ನ ಪಡಿತಿದ್ರು.ಇವರ ಫಿಟ್‌ನೆಸ್‌ಗೆ ಸ್ವಿಮ್ಮಿಂಗ್‌ ಕೂಡ ಕಾರಣವಾಗಿದೆ. ಇವರು ಸಿವಿಲ್‌ ಇಂಜಿನಿರಿಂಗ್‌ ವಿಭಾಗದಲ್ಲಿ ತಮ್ಮ ಶಿಕ್ಷಣವನ್ನ ಮುಗಿಸಿದ್ದಾರೆ. 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ‘ಪಾಪ್‌ಕಾರ್ನ್ ಮಂಕಿ ಟೈಗರ್’ ಸಿನಿಮಾದಿಂದ ಸ್ಯಾಂಡಲ್‌ವುಡ್‌ಗೆ ಸಪ್ತಮಿ ಗೌಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು, ನಂತರ ಕಾಂತಾರ ಚಿತ್ರದ ಮೂಲಕ ಶಿವನಿಗೆ ಲೀಲಾ ಆಗಿ ಎಲ್ಲರ ಮನಸ್ಸನ್ನ ಗೆದ್ರು. ‘ಕಾಂತಾರ’ ಚಿತ್ರ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಇವರಿಗೆ ‘ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರಕ್ಕೆ ಸೈಮಾ ಅವಾರ್ಡ್‌ ಸಿಕ್ಕಿದೆ. ಇವರು ಸದ್ಯ 2 ಚಿತ್ರಗಳಲ್ಲಿ ನಟಿಸಿದ್ದಾರೆ. ಯುವರಾಜ್‌ಕುಮಾರ್‌ ಅಭಿನಯದ “ಯುವ” ಚಿತ್ರಕ್ಕೂ ಇವರೇ ನಾಯಕಿಯಾಗಲಿದ್ದಾರೆ. ಕಾಶ್ಮೀರಿ ಫೈಲ್ಸ್‌ ಚಿತ್ರವನ್ನ ನಿರ್ದೇಶನ ಮಾಡಿದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ “ದಿ ವ್ಯಾಕ್ಸೀನ್‌ ವಾರ್‌” ಹಿಂದಿ ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಲಿದ್ದಾರೆ. 26 ವರ್ಷದ ಇವರು ಸ್ಮಿಮ್ಮಿಂಗ್‌ ಮಾತ್ರವಲ್ಲದೇ ಜಿಮ್‌ ಮತ್ತು ಹೇಲ್ದಿ ಲೈಫ್‌ ಸ್ಟೈಲ್‌ನ್ನು ಫಾಲೋ ಮಾಡಿ ತಮ್ಮ ಫಿಟ್‌ನೆಸ್‌ನ್ನ ಮೆಂಟೇನ್‌ ಮಾಡ್ತಾರೆ.

7. ಆಶಿಕಾ ರಂಗನಾಥ್‌ : ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ ಚಂದನವನದ ಪ್ರತಿಭಾನಿತ್ವ ನಟಿ. 1996,ಅಗಸ್ಟ್ 5 ರಂದು ಹಾಸನದಲ್ಲಿ ಜನಿಸಿದರು. ಕೋರಮಂಗಲದ ಜ್ಯೋತಿ ನಿವಾಸ ಕಾಲೇಜಿನಲ್ಲಿ ಪಿಯು ಮುಗಿಸಿ MES ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು. ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ಆಶಿಕಾ ಬಾಲ್ಯದಿಂದಲೂ ಹಲವು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.2014 ರಲ್ಲಿ ಜರುಗಿದ `ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್’ ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಅಗಿದ್ದರು. ನಿರ್ದೇಶಕ ಮಹೇಶ್ ಬಾಬು ಇವರನ್ನು ತಮ್ಮ `ಕ್ರೇಜಿ ಬಾಯ್’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಯಿಸಿದರು. ನಂತರ ಡಾ.ಶಿವ ರಾಜ್‌ಕುಮಾರ್ ಅಭಿನಯದ ಮಾಸ್ ಲೀಡರ್, ಗಣೇಶ್ ಅಭಿನಯದ ಮುಗುಳು ನಗೆ ಮತ್ತು ಗರುಡ ಚಿತ್ರದಲ್ಲಿ ನಟಿಸಿದ್ದಾರೆ. 2018 ರಲ್ಲಿ ಆಶಿಕಾ ಮತ್ತು ಶರಣ್ ಕಾಂಬಿನೇಶನ್‌ಲ್ಲಿ ಬಂದ `ರ‍್ಯಾಂಬೋ 2′ ಚಿತ್ರ ಅಭೂತಪೂರ್ವ ಪ್ರದರ್ಶನ ಕಂಡಿತು. ಈ ಚಿತ್ರದ `ಚುಟು ಚುಟು’ ಹಾಡು ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ಹಾಡುಗಳಲ್ಲೊಂದು. ಇವರಿಗೆ ಸೈಮಾ ಅವಾರ್ಡ್‌ ದೊರೆತಿದೆ. ಸದ್ಯ ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ಚಿತ್ರಗಳಲ್ಲೂ ಆಕ್ಟೀವ್‌ ಇದಾರೆ. ಸದ್ಯ 14 ಮೂವಿಗಳಲ್ಲಿ ಇವರು ನಟಿಸಿದ್ದಾರೆ. 26 ವರ್ಷದ ಇವರು ತಮ್ಮ ಫಿಟ್‌ನೆಸ್‌ಗೆ ಜಿಮ್‌ ಮತ್ತು ಹೇಲ್ದಿ ಲೈಫ್‌ ಸ್ಟೈಲ್‌ನ್ನು ಫಾಲೋ ಮಾಡ್ತಾರೆ.

8. ರುಕ್ಮಿಣಿ ವಸಂತ್‌ : “ಬೀರ್‌ಬಲ್ ಟ್ರಯಾಲಜಿ” ಚಿತ್ರದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಂಗಭೂಮಿ ಕಲಾವಿದೆ ರುಕ್ಮಿಣಿ ಈಗ ಸೋಷಿಯಲ್‌ ಮೀಡಿಯಾ ಕ್ವೀನ್‌. ಡಿಸೆಂಬರ್‌ 16, 1996ರಲ್ಲಿ ಜನಿಸಿದ ಮುದ್ದು ಮುಖದ ಚೆಲುವಿಗೆ ಹುಡುಗರು ಫುಲ್ ಫಿದಾ ಆಗಿದ್ದಾರೆ.ಲಂಡನ್‌ನ ರಾಯಲ್ ಅಕಾಡಮಿ ಆಫ್‌ ಡ್ರಾಮಾಟಿಕ್‌ ಆರ್ಟ್ಸ್‌ನ ಪದವೀಧರೆ.ಅನೇಕ ಕನ್ನಡ ಹಾಗೂ ಇಂಗ್ಲೀಷ್‌ ನಾಟಕಗಳಲ್ಲಿ ಅಭಿನಯಿಸಿದ್ದಾರೆ.2019ರಲ್ಲಿ ಬೀರ್‌ಬಲ್‌ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.ಮೊದಲ ಚಿತ್ರದಲ್ಲಿ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ್ ಅಭಿನಯದ ಬಾನದಾರಿಯಲ್ಲಿ ನಾಯಕಿಯಾಗಿ ನಟಿಸಿರುವ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ಸರ್ಫಿಂಗ್ ಸಾಹಸ ಮಾಡಲಿದ್ದಾರೆ. ಚಿತ್ರದ ಲೀಲಾ ಪಾತ್ರಕ್ಕಾಗಿ ಕ್ರೀಡೆಯಲ್ಲಿ ತರಬೇತಿ ಪಡೆದಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯಿಸಿರೋ ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲೂ ರುಕ್ಮಿಣಿ ವಸಂತ್ ನಟಿಸಿದ್ದಾರೆ. ತಮ್ಮ ಪಾತ್ರದ ಮೂಲಕ ಈಗಲೇ ಗಮನ ಸೆಳೆದಿದ್ದಾರೆ.ರುಕ್ಮಿಣಿ ವಸಂತ್ ಬೆಂಗಳೂರು ಮೂಲದವರೆ ಆಗಿದ್ದಾರೆ. ಆದರೆ ಆರ್ಮಿ ಸ್ಕೂಲ್​ಲ್ಲಿ ಓದಿರೋದು ವಿಶೇಷ. ತಂದೆ ವಸಂತ್ ಗೋಪಾಲ್ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವರ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗೋಕೆ ರೆಡಿ ಆಗಿ ನಿಂತಿದೆ. 26 ವರ್ಷದ ಇವರು ತಮ್ಮ ಫಿಟ್‌ನೆಸ್‌ಗೆ ಜಿಮ್‌ ಮತ್ತು ಹೇಲ್ದಿ ಲೈಫ್‌ ಸ್ಟೈಲ್‌ನ್ನು ಫಾಲೋ ಮಾಡ್ತಾರೆ.

9. ಸಂಜನಾ ಆನಂದ್‌ : ಸಂಜನಾ ಆನಂದ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಂಜನಾ ಮಾರ್ಚ್‌ 28 1997ರಲ್ಲಿ ಜನಿಸಿದರು. ಮೂಲತಃ ಬೆಂಗಳೂರಿನವರಾದ ಇವರು `ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ಚಂದನವನಕ್ಕೆ ನಾಯಕನಟಿಯಾಗಿ ಪ್ರವೇಶಿಸಿದರು. ಇಂಜಿನಿಯರಿಂಗ್ ಪದವಿ ಪಡೆದಿರುವ ಸಂಜನಾ ಡೆಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಭರತನಾಟ್ಯ ಕಲಾವಿದೆಯೂ ಆಗಿದ್ದ ಇವರಿಗೆ ಆಕಸ್ಮಿಕವೆಂಬಂತೆ `ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದಲ್ಲಿ ಅವಕಾಶ ಸಿಕ್ಕಿತು. ನಂತರ ಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಬೇಕೆಂದು ಉದ್ಯೋಗಕ್ಕೆ ರಾಜಿನಾಮೆ ನೀಡಿದರು. ಸ್ಯಾಂಡಲ್‌ವುಡ್‌ನಲ್ಲಿ ‘ಕರಿಯಪ್ಪನ ಸೊಸೆ’ ಎಂದೇ ಹೆಸರುವಾಸಿಯಾಗಿರುವ ಸಂಜನಾ ಆನಂದ್‌ ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಸಿನಿಮಾದಲ್ಲಿನ ತಮ್ಮ ನೈಜ ಅಭಿನಯದಿಂದ ಎಲ್ಲರ ಮನ ಗೆದ್ದಿದ್ದರು. ಸದ್ಯ ಕನ್ನಡದ ಬೇಡಿಕೆಯ ಯುವ ನಟಿಯಾಗಿರುವ ಸಂಜನಾ ಆನಂದ್, ತೆಲುಗು ಚಿತ್ರರಂಗದಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ಕನ್ನಡ ಸಿನಿಮಾಗಳು ಕೆಮಿಸ್ಟ್ರಿ ಆಫ್ ಕರಿಯಪ್ಪ, ಕುಷ್ಕ, ಸಲಗ, ಕ್ಷತ್ರಿಯ, ಮಳೆಬಿಲ್ಲು , ವಿಂಡೋಸೀಟ್, ಶೋಕಿವಾಲ
ಇವರು 10 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ “ಹನಿಮೂನ್‌” ಎನ್ನುವ ವೆಬ್‌ ಸಿರೀಸ್‌ನಲ್ಲೂ ನಟಿಸಿದ್ದಾರೆ. 25 ಇವರು ತಮ್ಮ ಫಿಟ್‌ನೆಸ್‌ಗೆ ಜಿಮ್‌ ಮತ್ತು ಹೇಲ್ದಿ ಲೈಫ್‌ ಸ್ಟೈಲ್‌ನ್ನು ಫಾಲೋ ಮಾಡ್ತಾರೆ.

10. ಶ್ರೀಲೀಲಾ : ಇವರು ಜೂನ್‌ 14 2001ರಲ್ಲಿ ಜನಿಸಿದರು. ಮೋಹಕ ಬೆಡಗಿ ಶ್ರೀಲೀಲಾ ಕನ್ನಡ ಚಿತ್ರರಂಗದಲ್ಲಿ ತನ್ನದೇಯಾದ ಹವಾ ಸೃಷ್ಟಿಸಿದ್ದಾರೆ. ಪಡ್ಡೆಹುಡುಗರ ನಿದ್ದೆಗೆಡಿಸಿರುವ ಶ್ರೀಲೀಲಾ ಕಡಿಮೆ ಅವಧಿಯಲ್ಲಿಯೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.ನಟಿ ಶ್ರೀಲೀಲಾ ಸ್ಯಾಂಡಲ್ ವುಡ್ ನ ಬ್ಯುಸಿ ನಟಿಯಾಗಿದ್ದಾರೆ. ಅವರ ಕೈಯಲ್ಲಿಗ ಅನೇಕ ಸಿನಿಮಾ ಆಫರ್ ಗಳಿವೆ. ಕನ್ನಡ ಮಾತ್ರವಲ್ಲದೆ ಟಾಲಿವುಡ್ ನಲ್ಲಿ ಅವರಿಗ ಬ್ಯುಸಿಯಾಗಿದ್ದಾರೆ.ವೈದ್ಯ ವೃತ್ತಿಯಲ್ಲಿ ಮುಂದುವರೆಯಬೇಕೆಂದುಕೊಂಡಿದ್ದ ಶ್ರೀಲೀಲಾರವರಿಗೆ ಸಿನಿಮಾದ ಬಗ್ಗೆ ವಿಶೇಷ ಸೆಳೆತವಿತ್ತು. ಸಿನಿಮಾ ಜೊತೆ ಮೆಡಿಕಲ್‌ ಕೂಡ ಓದ್ತಾ ಇದಾರೆ. ಸಿನಿಮಾಗಳಲ್ಲಿ ನಟಿಸಲು ಶ್ರೀಲೀಲಾರವರಿಗೆ ಆರಂಭದಲ್ಲಿ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಬಳಿಕ ಮನೆಯವರನ್ನು ಒಪ್ಪಿಸಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ತಮ್ಮ ವಿಶಿಷ್ಟ ನಟನೆಯ ಮೂಲಕ ಶ್ರೀಲೀಲಾ ಕನ್ನಡ ಸಿನಿಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಕಿಸ್, ಭರಾಟೆ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಒಟ್ಟು 5 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಇವರು ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಒಟ್ಟು 8 ಚಿತ್ರಗಳು ಇವರ ಕೈಯಲ್ಲಿದೆ. 21 ವರ್ಷದ ಇವರು ತಮ್ಮ ಫಿಟ್‌ನೆಸ್‌ಗೆ ಜಿಮ್‌ ಮತ್ತು ಹೇಲ್ದಿ ಲೈಫ್‌ ಸ್ಟೈಲ್‌ನ್ನು ಫಾಲೋ ಮಾಡ್ತಾರೆ.

-masthmagaa.com

Contact Us for Advertisement

Leave a Reply