7 ಗಂಟೆಯಲ್ಲಿ 101 ಮಹಿಳೆಯರಿಗೆ ಸಂತಾನ ಹರಣ ಆಪರೇಷನ್​!

masthmagaa.com:

ಚತ್ತೀಸ್​ಗಡದ ಸುರ್ಗುಜಾ ಜಿಲ್ಲೆಯ ಸರ್ಕಾರಿ ಸಂತಾನ ಹರಣ ಆಪರೇಷನ್ ಕೇಂದ್ರದಲ್ಲಿ ಸರ್ಜನ್ ಒಬ್ಬರು 7 ಗಂಟೆಯ ಒಳಗೆ 101 ಮಹಿಳೆಯರಿಗೆ ಸಂತಾನ ಹರಣ ಆಪರೇಷನ್ ಮಾಡಿದ್ದಾರೆ. ಆದ್ರೆ ಇದ್ರಲ್ಲೇನೋ ಅಕ್ರಮ ನಡೆದಿದೆ ಅಂತ ಸ್ಥಳೀಯ ಪತ್ರಿಕೆಗಳು ವರದಿ ಮಾಡಿದ್ವು. ಈ ಬಗ್ಗೆ ದೂರುಗಳು ಬಂದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ ಅಲೋಕ್ ಶುಕ್ಲಾ, ಆಪರೇಷನ್​​ಗೆ ಒಳಗಾದ ಎಲ್ಲಾ ಮಹಿಳೆಯರು ಆರೋಗ್ಯವಾಗೇ ಇದ್ದಾರೆ. ಆದ್ರೂ ಕೂಡ ಓರ್ವ ಸರ್ಜನ್ ಒಂದು ದಿನಕ್ಕೆ 30 ಆಪರೇಷನ್​​ಗಳನ್ನು ಮಾತ್ರವೇ ಮಾಡಲು ಅವಕಾಶ ಇದೆ. ಹೀಗಾಗಿ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply