ಅಮೆರಿಕದಲ್ಲಿ 11 ಮಂದಿ ಭಾರತೀಯರು ಕೊರೋನಾಗೆ ಬಲಿ..!

masthmagaa.com:

ಅಮೆರಿಕದಲ್ಲಿ ಕೊರೋನಾ ಹಾವಳಿ ಮಿತಿ ಮೀರಿದೆ. ಈ ನಡುವೆ ಅಮೆರಿಕದಲ್ಲಿ 11 ಮಂದಿ ಭಾರತೀಯರು ಈ ಮಹಾಮಾರಿಗೆ ಬಲಿಯಾಗಿದ್ದು, 16 ಮಂದಿ ಸೋಂಕಿತರಾಗಿದ್ದಾರೆ ಅಂತ ತಿಳಿದು ಬಂದಿದೆ.

ಮೃತರೆಲ್ಲರೂ ಪುರುಷರಾಗಿದ್ದು, 10 ಮಂದಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ವಾಸವಾಗಿದ್ದರು. ಇವರಲ್ಲಿ ನಾಲ್ವರು ನ್ಯೂಯಾರ್ಕ್​ ಸಿಟಿಯಲ್ಲಿ ಟ್ಯಾಕ್ಸಿ ಓಡಿಸೋ ಕೆಲಸ ಮಾಡುತ್ತಿದ್ದರು. ಇನ್ನು ಫ್ಲೋರಿಡಾದಲ್ಲೂ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ನ್ಯೂಯಾರ್ಕ್​ ಕೊರೋನಾ ವೈರಸ್​​ನ ಪ್ರಮುಖ ಕೇಂದ್ರವಾಗಿದ್ದು, 1.4 ಲಕ್ಷ ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಜೊತೆಗೆ 6 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ನ್ಯೂಜೆರ್ಸಿಯಲ್ಲಿ 48 ಸಾವಿರ ಮಂದಿಗೆ ಸೋಂಕು ತಗುಲಿದ್ದು, 1,500 ಮಂದಿ ಸಾವನ್ನಪ್ಪಿದ್ದಾರೆ.

ಇನ್ನು ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 16  ಮಂದಿ ಸೋಂಕಿತರಾಗಿದ್ದಾರೆ. ಇವರೆಲ್ಲಾ ನ್ಯೂಯಾರ್ಕ್​, ನ್ಯೂಜೆರ್ಸಿ, ಫ್ಲೋರಿಡಾ, ಟೆಕ್ಸಾಸ್​ನಲ್ಲಿ ವಾಸವಿದ್ದು, ಸೆಲ್ಫ್​ ಕ್ವಾರಂಟೈನ್​ನಲ್ಲಿ ಇದ್ದಾರೆ. ಜೊತೆಗೆ ಸೋಂಕಿತರು ಕರ್ನಾಟಕ, ಉತ್ತರಾಖಂಡ್​, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಮೂಲದವರು ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply