ಕೊರೋನಾಗಿಂತ ಹಸಿವಿಗೆ ಬಲಿಯಾದವರೆ ಹೆಚ್ಚು!

masthmagaa.com:

ವಿಶ್ವದ ಹಸಿವಿನ ಪ್ರಮಾಣ 2020ರಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಅಂತ ಓಕ್ಸಂ ಅನ್ನೋ ಹಕ್ಕುಗಳ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ. 2019ಕ್ಕೆ ಹೋಲಿಸಿದ್ರೆ 2020ರಲ್ಲಿ ಹಸಿವಿನ ಪ್ರಮಾಣ 6 ಪಟ್ಟು ಜಾಸ್ತಿಯಾಗಿದೆ. ಅಷ್ಟು ಜನ ಕ್ಷಾಮದಂತಹ ಪರಿಸ್ಥಿತಿ ಎದುರಿಸ್ತಿದ್ದಾರೆ ಅಂತ ಸಂಸ್ಥೆ ಹೇಳಿದೆ. ಕೊರೋನಾಗಿಂತಲೂ ಹಸಿವಿನಿಂದಲೇ ಹೆಚ್ಚು ಜನ ಪ್ರಾಣ ಕಳೆದುಕೊಳ್ತಿದ್ದಾರೆ. ಪ್ರತಿ ಒಂದು ನಿಮಿಷದಲ್ಲಿ ಕೊರೋನಾಗೆ 7 ಮಂದಿ ಬಲಿಯಾಗ್ತಿದ್ರೆ, ಹಸಿವಿನಿಂದ 11 ಮಂದಿ ಪ್ರಾಣ ಕಳೆದುಕೊಳ್ತಿದ್ದಾರೆ ಅನ್ನೋ ಶಾಕಿಂಗ್ ಮಾಹಿತಿ ನೀಡಿದೆ. ಜಗತ್ತಿನಲ್ಲಿ ಒಟ್ಟು 15.5 ಕೋಟಿ ಜನ ಆಹಾರದ ಕೊರತೆ ಎದುರಿಸುತ್ತಿದ್ದು, ಈ ಸಂಖ್ಯೆ 2019ಕ್ಕೆ ಹೋಲಿಸಿದ್ರೆ 2020ರಲ್ಲಿ 2 ಕೋಟಿ ಜಾಸ್ತಿಯಾಗಿದೆ. ಅವರಲ್ಲೂ ಆಹಾರ ಕೊರತೆ ಎದುರಿಸುತ್ತಿರುವವರ ಪೈಕಿ 3ನೇ 2ರಷ್ಟು ಜನರ ದೇಶಗಳಲ್ಲಿ ಸೇನಾ ಸಂಘರ್ಷ ನಡೀತಾ ಇದೆ. ಕೊರೋನಾ ಮಹಾಮಾರಿ ಹೊರತಾಗಿಯೂ ವಿಶ್ವದಲ್ಲಿ ಸೇನಾ ವೆಚ್ಚ 5100 ಕೋಟಿ ಡಾಲರ್​​ನಷ್ಟು ಹೆಚ್ಚಾಗಿದೆ. ಈ ದುಡ್ಡು ಹಸಿವಿನ ವಿರುದ್ಧ ಹೋರಾಟಕ್ಕೆ ಅಂತ ವಿಶ್ವಸಂಸ್ಥೆ ಬಳಿ ಇದ್ಯಲ್ವಾ ಆ ದುಡ್ಡಿಗಿಂತ 6 ಪಟ್ಟು ಜಾಸ್ತಿ ಇದೆ.
ಹಸಿವನ್ನೇ ಒಂದು ಅಸ್ತ್ರದ ರೀತಿ ಬಳಸಲಾಗ್ತಿದೆ. ಇದ್ರಲ್ಲಿ ಜನರನ್ನು ಅನ್ನ ನೀರಿಂದ ವಂಚಿತರನ್ನಾಗಿ ಮಾಡೋದ್ರಿಂದ ಹಿಡಿದು ಮಾನವೀಯ ಸಹಾಯವನ್ನು ತಡೆಯೋದು ಕೂಡ ಸೇರಿದೆ ಅಂತ ಓಕ್ಸಮ್​​ ಅಮೆರಿಕದ ಅಧ್ಯಕ್ಷ ಮತ್ತು ಸಿಇಒ ಎಬಿ ಮ್ಯಾಕ್ಸ್​​ಮೆನ್ ಹೇಳಿದ್ದಾರೆ. ಹೀಗಾಗಿ ಜಗತ್ತಿನ ಎಲ್ಲಾ ದೇಶಗಳ ಸರ್ಕಾರಗಳು ಸೈನ್ಯ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು. ಪರಿಹಾರ ನೀಡುವ ಸಂಸ್ಥೆಗಳು ವಿವಾದಿತ ಪ್ರದೇಶಗಳು ಮತ್ತು ಅನಿವಾರ್ಯತೆ ಇರುವವರಿಗೆ ಸಹಾಯ ಮಾಡಬೇಕು ಅಂತ ಮ್ಯಾಕ್ಸ್​ಮೆನ್ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply