‌ʻಮಾಡು ಇಲ್ಲವೇ ಮಡಿʼ! ಇಸ್ರೇಲ್‌ ಪ್ರಧಾನಿ ದೊಡ್ಡ ಘೋಷಣೆ! ಮಿಡಲ್‌ ಈಸ್ಟ್‌ನಲ್ಲಿ ಮಹಾಯುದ್ಧ ಫಿಕ್ಸ್‌?

masthmagaa.com:

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಕಾಳಗ ಕಂಡು ಕೇಳರಿಯದ ರೀತಿಯಲ್ಲಿ ಉದ್ವಿಗ್ನವಾಗ್ತಿದ್ದು ಈ ಯುದ್ಧ ಇಡೀ ಮಿಡಲ್‌ ಈಸ್ಟ್‌ಗೆ ವ್ಯಾಪಿಸೋ ಆತಂಕ ಶುರುವಾಗಿದೆ. ಅದಕ್ಕೆ ಕಾರಣ, ಈಗ ಇಸ್ರೇಲ್‌ ಮಾಡಿರೋ ಅತಿದೊಡ್ಡ ಘೋಷಣೆ. ನಿನ್ನೆ ಅಂದ್ರೆ ಶನಿವಾರ ಹಮಾಸ್‌ ವಿರುದ್ದ ಹೇಳಿಕೆ ಕೊಟ್ಟಿರೋ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್‌ಗೆ ಈಗ ಮಾಡು ಇಲ್ಲವೇ ಮಡಿ ಅಥವಾ ‌ʻಡೂ ಆರ್‌ ಡೈʼ ಅನ್ನೋ ಆಯ್ಕೆ ಮಾತ್ರ ಉಳಿದಿದೆ. ನಮಗೆ ಇದು ಕಷ್ಟ ಆಗಬೋದು. ಆದ್ರೆ ಇದನ್ನ ನಾವು ಮಾಡಲೇಬೇಕಾಗುತ್ತೆ. ನನಗೆ ಈಗ ಯಾವುದೇ ಅನುಮಾನವೂ ಉಳಿದುಕೊಂಡಿಲ್ಲ. ನಾವು ಈ ಯುದ್ದದಲ್ಲಿ ಗೆದ್ದೇ ಗೆಲ್ತೇವೆ. ಇದು ನಮಗೆ ಸೆಕೆಂಡ್‌ ಸ್ಟೇಜ್‌, ನಾವು ಹೆಚ್ಚಿನ ಪಡೆಗಳನ್ನ ಗಾಜಾ ಕಡೆಗೆ ಕಳುಹಿಸ್ತಾ ಇದ್ದೀವಿ, ಇಸ್ರೇಲ್‌ ಸೈನಿಕರು ಪ್ರತೀಕಾರವನ್ನ ತೀರಿಸಿಕೊಳ್ತಿಲ್ಲ. ಗಾಜಾ ಅನ್ನೋ ನಮ್ಮ ಮಾತೃಭೂಮಿಯನ್ನ‌ ವಶಕ್ಕೆ ಪಡೆಯುತ್ತಿದ್ದಾರೆ. ನಮ್ಮ ನೆಲೆವನ್ನ ನಾವು ರಕ್ಷಣೆ ಮಾಡಬೇಕಿದೆ ಅಂತೇಳಿದ್ದಾರೆ. ಈ ಮೂಲಕ ಗಾಜಾದಲ್ಲಿ ಹಮಾಸ್‌ಗಳನ್ನ ನಾಶ ಮಾಡೋದು ಮಾತ್ರ ಅಲ್ಲ. ಆ ಪ್ರದೇಶವನ್ನ ಇಸ್ರೇಲ್‌ಗೆ ಸೇರಿಸಿಕೊಳ್ತೀವಿ ಅನ್ನೋ ಅರ್ಥದಲ್ಲಿ ಇಸ್ರೇಲ್‌ ಪ್ರಧಾನಿ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ಇಸ್ರೇಲ್‌ ನೆಲ, ಜಲ, ಆಕಾಶ ಮೂರು ಕಡೆಯಿಂದಲೂ ಈಗ ಗಾಜಾ ಮೇಲೆ ಅಟ್ಯಾಕ್‌ ಮಾಡುತ್ತೆ. ಮಾನವೀಯತೆ ವಿರುದ್ದ ದಾಳಿ ಮಾಡಿದ ಒಬ್ಬೊಬ್ಬ ಹಮಾಸ್‌ಗಳನ್ನೂ ನಾವು ಬಿಡಲ್ಲ ಅಂತ ನೆತನ್ಯಾಹು ಅಬ್ಬರಿಸಿದ್ದಾರೆ. ಇನ್ನು ಇಸ್ರೇಲ್ ಪ್ರಧಾನಿಗಳ ಬಾಯಲ್ಲಿ ಇಂಥದೊಂದು ಹೇಳಿಕೆ ಹೊರ ಬರ್ತಿದ್ದಂತೆ ಈಗ ಮಧ್ಯಪ್ರಾಚ್ಯದಾದ್ಯಂತ ಯುದ್ದದ ಕಾರ್ಮೋಡ ಜೋರಾಗಿ ಆವರಿಸಿಕೊಳ್ತಿದೆ. ಈಗಾಗಲೇ ಇರಾನ್‌ ಹಾಗೂ ಲೆಬಾನಾನ್‌ನಲ್ಲಿರೋ ಹಿಜ್ಬುಲ್ಲಾಗಳು ಇಸ್ರೇಲ್‌ ಮೇಲೆ ದಾಳಿ ಮಾಡೋದಾಗಿ ಹೇಳಿವೆ. ಗಾಜಾದ ಒಳಗೆ ಇಸ್ರೇಲ್‌ ಗ್ರೌಂಡ್‌ ಅಟ್ಯಾಕ್‌ ಮಾಡಿದ್ರೆ ಆಗ ಖಡಾಖಂಡಿತವಾಗಿ ಯುದ್ದಕ್ಕೆ ಇಳೀತೀವಿ ಅಂತ ಈ ಎರಡು ಸೇನೆಗಳು ತಿಳಿಸಿವೆ. ಇನ್ನೊಂದು ಕಡೆ ಸಿರಿಯಾದಿಂದಲೂ ರಾಕೆಟ್‌ ದಾಳಿಗಳು ನಡೆಯುತ್ತಿವೆ. ಒಮನ್‌ನ ಹೌತಿ ಬಂಡುಕೋರರೂ ಇಸ್ರೇಲ್‌ಗೆ ಬೆದರಿಕೆ ಹಾಕಿದ್ದಾರೆ. ಸೋ ಇಸ್ರೇಲ್‌ ತಾನು ಹೇಳಿದ ರೀತಿ ಗಾಜಾಗೆ ಸೇನೆ ನುಗ್ಗಿಸಿದ್ದೇ ಆದ್ರೆ ಮಧ್ಯಪ್ರಾಚ್ಯ ಅತಿದೊಡ್ಡ ಯುದ್ದ ಭೂಮಿಯಾಗಬೋದು ಅಂತ ಅಂತಾರಾಷ್ಟ್ರೀಯವಾಗಿ ತೀವ್ರ ಕಳವಳ ವ್ಯಕ್ತಪಡಿಸಲಾಗ್ತಿದೆ. ಈಗಾಗಲೇ ಅಮೆರಿಕ ಕೂಡ ತನ್ನ ನೌಕಾಪಡೆಯನ್ನ ಇಸ್ರೇಲ್‌ ಪರವಾಗಿ ಸಜ್ಜುಗೊಳಿಸ್ತಿದೆ. ತನ್ನ ಸೇನೆ ಹಾಗೂ ವಾಯುರಕ್ಷಣಾ ವ್ಯವಸ್ಥೆಯನ್ನ ಇಸ್ರೇಲ್‌ಗೆ ಕೊಡ್ತಿದೆ. ಹಮಾಸ್‌ಗಳು ಸಹ ಇಸ್ರೇಲ್‌ ವಿರುದ್ದ ಯಾವುದೇ ರೀತಿಯಲ್ಲೂ ಹೋರಾಡೋಕೆ ರೆಡಿ ಅಂತ ಪ್ರಚೋದನೆ ಕೊಡ್ತಿದ್ದಾರೆ. ಇದರ ನಡುವೆಯೇ ಇಸ್ರೇಲ್‌ನ ಈ ಶಪಥ ಜಾಗತಿಕವಾಗಿ ಅದರಲ್ಲೂ ಮಿಡಲ್‌ಈಸ್ಟ್‌ನಲ್ಲಿ ದೊಡ್ಡ ಆತಂಕ ಹಾಗೂ ಸಂಚಲನಕ್ಕೆ ಕಾರಣವಾಗಿದೆ. ಮತ್ತೊಂದು ಕಡೆ ವಿಶ್ವಸಂಸ್ಥೆ ಕೂಡ ಕದನ ವಿರಾಮ ಘೋಷಿಸೋದಕ್ಕೆ ಹರಸಾಹಸ ಪಡ್ತಿದ್ದು ಇಸ್ರೇಲ್‌ ಗಾಜಾ ಮೇಲೆ ದಾಳಿ ಮಾಡಬಾರ್ದು ಅಂತ ಸೂಚನೆ ಕೊಟ್ಟಿದೆ. ಇಸ್ರೇಲ್‌ ಗಾಜಾಗೆ ನುಗ್ಗಿದ್ರೆ ಯಾರೂ ಊಹಿಸದ ಪ್ರಮಾಣದಲ್ಲಿ ಸಾವು ನೋವು ಉಂಟಾಗಬೋದು. ಹೀಗಾಗಿ ಇಸ್ರೇಲ್‌ ಇದನ್ನ ಈ ಕೂಡಲೇ ನಿಲ್ಲಿಸಬೇಕು ಅಂತ ವಿಶ್ವಸಂಸ್ಥೆ ಹೇಳ್ತಿದೆ. ಆದ್ರೆ ಇಸ್ರೇಲ್‌ ಮಾತ್ರ ವಿಶ್ವಸಂಸ್ಥೆಯ ಮಾತಿಗೆ ಯಾವುದೇ ಕಿಮ್ಮತ್ತು ಕೊಟ್ಟಿಲ್ಲ. ಈ ನುಡವೆ ಈಗ ಉತ್ತರ ಗಾಜಾದಲ್ಲಿ ಇಸ್ರೇಲ್‌ ಪಡೆಗಳು ಹಮಾಸ್‌ಗಳ ಮೇಲೆ ಶೆಲ್ಲಿಂಗ್‌ ನಡೆಸ್ತಿದ್ದು ಉಗ್ರರ ಟನಲ್‌ಗಳನ್ನ ನಾಶ ಮಾಡ್ತಿದ್ದಾರೆ ಅಂತ ಇಸ್ರೇಲ್‌ ಸೇನೆ ತಿಳಿಸಿದೆ. ಒಟ್ನಲ್ಲಿ ಇಸ್ರೇಲ್‌ ಹಾಗೂ ಹಮಾಸ್ ನಡುವಿನ ಕಾಳಗ ಹಿಂದೆಂದಿಗಿಂತಲೂ ಭೀಕರ ಸ್ವರೂಪಕ್ಕೆ ತಿರುಗ್ತಿದ್ದು ಇಡೀ ಜಗತ್ತಿನ ಕಣ್ಣು ಈಗ ಮಧ್ಯಪ್ರಾಚ್ಯದ ಕಡೆಗೆ ನೆಟ್ಟಿದೆ.

-masthmagaa.com

Contact Us for Advertisement

Leave a Reply