ರಾಜ್ಯ ನದಿ ವಿವಾದಗಳ ಪರ ವಾದ ಮಾಡಿದ ವಕೀಲರಿಗೆ 122.76 ಕೋಟಿ ರೂಪಾಯಿ ಶುಲ್ಕ!

masthmagaa.com:

ನದಿ ವಿವಾದದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸೋಕೆ ವಕೀಲರಿಗಾಗಿ ರಾಜ್ಯ ಸರ್ಕಾರ 122.76 ಕೋಟಿ ರೂಪಾಯಿ ಪಾವತಿಸಿದೆ ಅಂತ ಮಾಹಿತಿ ಗೊತ್ತಾಗಿದೆ. ಕಾವೇರಿ, ಕೃಷ್ಣಾ ಹಾಗೂ ಮಹದಾಯಿ ನದಿ ವಿವಾದಗಳ ವಿಚಾರಣೆ ವೇಳೆ ವಕೀಲರಿಗಾಗಿ ಖರ್ಚಾಗಿರೋ ಹಣದ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಹೇಳಿದ್ದಾರೆ. ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೆರಿ ರಾಜ್ಯಗಳ ನಡುವಿನ ಜಲ ವಿವಾದದ ಇತ್ಯರ್ಥಕ್ಕೆ 1990ರಲ್ಲಿ ಕಾವೇರಿ ಜಲವಿವಾದ ನ್ಯಾಯಮಂಡಳಿ ರಚಿಸಲಾಗಿದೆ. ಅಲ್ಲಿಂದ 2017ರ ಜುಲೈವರೆಗೆ ಒಟ್ಟು 580 ಸೀಟಿಂಗ್‌ಗಳು ನಡೆದಿವೆ. ಈ ಪ್ರಕರಣಗಳಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರಿಗೆ 54.13 ಕೋಟಿಗೂ ಅಧಿಕ ಶುಲ್ಕ ನೀಡಲಾಗಿದೆ. ಇನ್ನು 2004ರಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶಗಳ ನಡುವಿನ ಜಲವಿವಾದ ಬಗೆಹರಿಸೋಕೆ ಕೃಷ್ಣ ಜಲವಿವಾದ ನ್ಯಾಯಮಂಡಳಿ ರಚಿಸಲಾಗಿದೆ. ಅಲ್ಲಿಂದ 2013ರವರೆಗೆ 43.24 ಕೋಟಿ ರೂಪಾಯಿ ಪೇ ಮಾಡಲಾಗಿದೆ. ಇನ್ನು ಮಹಾದಾಯಿ ಪ್ರಕರಣದಲ್ಲಿ 25.38 ಕೋಟಿ ರೂಪಾಯಿ ನೀಡಲಾಗಿದೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply