ಮಹಾರಾಷ್ಟ್ರದಲ್ಲಿ ಮಹಾಮಳೆಗೆ 138 ಮಂದಿ ಬಲಿ!

masthmagaa.com:

ಮಹಾರಾಷ್ಟ್ರದಲ್ಲಿ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 138ಕ್ಕೆ ಏರಿಕೆಯಾಗಿದೆ. 38 ಮಂದಿ ಗಾಯಗೊಂಡಿದ್ದು, ಇನ್ನೂ 59 ಜನ ನಾಪತ್ತೆಯಾಗಿದ್ದಾರೆ. ಇವರ ಜೊತೆಗೆ 75 ಪ್ರಾಣಿಗಳು ಕೂಡ ಜೀವ ಬಿಟ್ಟಿವೆ ಅಂತಲೂ ಸರ್ಕಾರ ಮಾಹಿತಿ ನೀಡಿದೆ. ಮೃತರ ಕುಟುಂಬಗಳಿಗೆ ಸರ್ಕಾರದ ಕಡೆಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. 90 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಅದ್ರಲ್ಲೂ ಕೊಂಕಣ ಪ್ರದೇಶದಲ್ಲಿ ಮಳೆಯಬ್ಬರ ತುಂಬಾ ಜೋರಾಗಿದ್ದು, ಪ್ರವಾಹ ಮತ್ತು ಭೂಕುಸಿತದಿಂದಾಗಿ ಹಲವರು ಸಿಕ್ಕಾಕೊಂಡಿದ್ದಾರೆ. ಸತಾರ ಜಿಲ್ಲೆಯಲ್ಲೂ ಪ್ರವಾಹದಲ್ಲಿ ಹಲವರು ಕೊಚ್ಚಿ ಹೋಗಿದ್ದಾರೆ. ಈ ಮೂಲಕ ಸತಾರಾ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಗೋಂಡಿಯಾ, ಚಂದ್ರಾಪುರ ಜಿಲ್ಲೆಗಳಲ್ಲೂ ಸಾವಿನ ವರದಿಯಾಗಿದೆ. ಇದಲ್ಲದೆ ರಾಯಗಡ್, ರತ್ನಾಗಿರಿ, ಪಾಲ್ಘರ್, ಥಾಣೆ, ಸಿಂಧುದುರ್ಗ್, ಕೊಲ್ಹಾಪುರ, ಸಾಂಗ್ಲಿಯಲ್ಲೂ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದೆ. ಮಹಾರಾಷ್ಟ್ರದ ಪ್ರವಾಹ ಪರಿಸ್ಥಿತಿ ಸಂಬಂಧ ಭಾರತೀಯ ವಾಯುಪಡೆ ಹಲವು ಹೆಲಿಕಾಪ್ಟರ್ ಗಳು, ಒಂದು ಸಿ-17 ಗ್ಲೋಬ್ ಮಾಸ್ಟರ್ ವಿಮಾನ ಹಾಗೂ ಎರಡು ಸಿ-130 ಸುಪರ್ ಹರ್ಕುಲಿಸ್ ವಿಮಾನಗಳನ್ನ ನಿಯೋಜನೆ ಮಾಡಿದೆ. ಈ ನಡುವೆ ಮಹರಾಷ್ಟ್ರದ ಕೊಲ್ಹಾಪುರ ಸೇರಿದಂತೆ ರಾಜ್ಯವಾಪಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತ ಆಗಿದೆ. ಕೊಲ್ಹಾಪುರ ಹೈವೇಯಲ್ಲಂತೂ ಸಾವಿರಾರು ವಾಹನಗಳು ಹೆದ್ದಾರಿಗಳಲ್ಲಿ ಸ್ಟಕ್ ಆಗಿ ನಿಂತುಕೊಂಡಿರೋ ದೃಶ್ಯಗಳು ಕಂಡುಬರುತ್ತಿವೆ. ಈ ಕೊಲ್ಹಾಪುರ ಹೈವೇಯಲ್ಲಿ 2019ರಲ್ಲೂ ಇದೇ ಥರ ಮಳೆ ಬಂದು ರಸ್ತೆ ಮುಳುಗಿ 30 ಸಾವಿರಕ್ಕೂ ಅಧಿಕವಾಹನಗಳು ಸ್ಟಕ್ ಆಗಿ ನಿಂತುಕೊಂಡಿದ್ದನ್ನ ಇಲ್ಲಿ ನೆನಪು ಮಾಡಿಕೊಳ್ಳಬಹುದು.

-masthmagaa.com

Contact Us for Advertisement

Leave a Reply