ಚಿಕಿತ್ಸೆ ಇಲ್ಲದ ಮತ್ತೊಂದು ಖಾಯಿಲೆ ಪತ್ತೆ!

masthmagaa.com:

ಕೊರೋನಾ ವೈರಸ್ ಆದನಂತ್ರ ಅದ್ರ ಹೊಸ ಹೊಸ ರೂಪಗಳಿಗೆ ಜಗತ್ತೇ ಕಂಗೆಟ್ಟುಹೋಗಿದೆ. ಅದ್ರ ನಡುವೆಯೇ ಈಗ ಮತ್ತೊಂದು ವೈರಸ್ ಅಟ್ಟಹಾಸ ಶುರು ಮಾಡೋ ಎಲ್ಲಾ ಲಕ್ಷಣ ಕಾಣ್ತಾ ಇದೆ. ಈಗಾಗಲೇ ಇಂಗ್ಲೆಂಡ್​​ನಲ್ಲಿ 154 ಮಂದಿಯಲ್ಲಿ ಈ ಹೊಸ ವೈರಾಣು ಪತ್ತೆಯಾಗಿದೆ. ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಕೂಡ ನೋರೋ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹುಷಾರಾಗಿರಿ ಅಂತ ಎಚ್ಚರಿಸಿದೆ. ಇಂಗ್ಲೆಂಡ್​ನಲ್ಲಿ ಜುಲೈ 19ರಿಂದ ಕೊರೋನಾ ಸಂಬಂಧಿತ ಬಹುತೇಕ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿದ್ದು, ಇದೇ ಟೈಮಲ್ಲಿ ನೋರೋ ವೈರಸ್ ಹೆಚ್ಚುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಇದು ಅಮೆರಿಕದ ಸಿಡಿಸಿ ಅಂದ್ರೆ ಸೆಂಟ್ರಲ್ ಫರ್ ಡಿಸೀಸ್ ಕಂಟ್ರೋಲ್ ಪ್ರಕಾರ, ನೋರೋವೈರಸ್ ಒಂದು ಭಯಾನಕವಾದ ಸಾಂಕ್ರಾಮಿಕ ಕಾಯಿಲೆ. ಇದು ವಾಂತಿ ಮತ್ತು ಡಯೇರಿಯಾಗೆ ಕಾರಣವಾಗುತ್ತೆ. ಈ ಸೋಂಕು ತಗುಲಿದ ವ್ಯಕ್ತಿಯೊಬ್ಬ ಕೋಟ್ಯಂತರ ವೈರಾಣುವನ್ನು ಹೊರಸೂಸಬಹುದು. ಅವುಗಳಲ್ಲಿ ಕೆಲವೊಂದು ವೈರಾಣು ಮಾತ್ರವೇ ಬೇರೆ ಜನರಿಗೆ ಸೋಂಕು ಹರಡೋ ತಾಕತ್ತು ಹೊಂದಿರುತ್ತೆ. ಕಲುಷಿತ ಆಹಾರ, ನೀರು ಮತ್ತು ಕಲುಷಿತ ವಸ್ತುವನ್ನು ಮುಟ್ಟಿ ಕೈ ತೊಳೆಯದೇ ಬಾಯಿಗೆ ಕೈ ಹಾಕಿದ್ರೆ ಈ ಸೋಂಕು ಹರಡುತ್ತೆ. ಸೋಂಕಿತರ ಸಂಪರ್ಕಕ್ಕೆ ಮತ್ತೋರ್ವ ವ್ಯಕ್ತಿ ಬಂದ್ರೆ ಅವನಿಗೂ ಕೊರೋನಾ ಹರಡೋ ಭೀತಿ ಇರುತ್ತೆ. ಉಳಿದ ವೈರಸ್​​ಗಳು ಹೇಗೆ ದೇಹದೊಳಗೆ ಹೋಗಿ ಹಾವಳಿ ಶುರು ಮಾಡುತ್ತೋ ಅದೇ ರೀತಿ ಇದು ಕೂಡ ಹೋಗಿ ತನ್ನದೇ ಶೈಲಿಯಲ್ಲಿ ಹಾವಳಿ ಶುರು ಹಚ್ಕೊಳ್ಳುತ್ತೆ. ಸಿಡಿಸಿ ಪ್ರಕಾರ ಹಲವು ಬಗೆಯ ನೋರಾ ವೈರಸ್​​ಗಳಿವೆ.. ಈಗ ಕೊರೋನಾದಲ್ಲಿ ವಿವಿಧ ಬಗೆ ಇದ್ಯಲ್ವಾ ಅದೇ ರೀತಿ.. ನೋರಾ ವೈರಸ್​​ನ ಯಾವುದಾದ್ರೂ ಒಂದು ಬಗೆ ಮನುಷ್ಯನಿಗೆ ಬಂದು ಗುಣಮುಖನಾದ್ರೂ ಕೂಡ ಅದೇ ನೋರಾವೈರಸ್​​ನ ಮತ್ತೊಂದು ಬಗೆಯಿಂದ ರಕ್ಷಣೆ ನೀಡೋದಿಲ್ಲ. ಇದನ್ನ ತಡೆಯೋದು ಹೇಗೆ ಅನ್ನೋ ಪ್ರಶ್ನೆ ಬರಬಹುದು. ಇಲ್ಲೂ ಅಷ್ಟೆ.. ಇದನ್ನ ತಡೆಯೋಕೆ ಸ್ವಚ್ಛತೆಯೇ ಮೊದಲ ದಾರಿ.. ಶೌಚಾಲಯಕ್ಕೆ ಹೋದ್ರೆ, ಕಲುಷಿತ ವಸ್ತುಗಳನ್ನು ಮುಟ್ಟಿದ್ರೆ ಸೋಪು ಹಾಕಿ ಚೆನ್ನಾಗಿ ಕೈ ತೊಳೆಯಬೇಕು.. ಇದು ಹರಡ್ತಿದೆ ಅಂತ ಗೊತ್ತಾದ್ಕೂಡ್ಲೆ ಮಾಸ್ಕ್ ಹಾಕ್ಕೊಂಡು ಓಡಾಡ್ಬೇಕು. ಒಂದೇ ಮಾತಲ್ಲಿ ಹೇಳ್ಬೇಕಾದ್ರೆ ಕೊರೋನಾ ತಡೆಯೋಕೆ ಏನೇನ್ ಫಾಲೋ ಮಾಡ್ತೀವೋ ಅದ್ನೆ ಫಾಲೋ ಮಾಡಿದ್ರೆ ಸಾಕು. ವೈದ್ಯಕೀಯ ಲೋಕದಲ್ಲಿ ಈ ವೈರಸ್​​ಗೆ ಯಾವುದೇ ಚಿಕಿತ್ಸೆ ಇಲ್ಲ. ಸಾಕಷ್ಟು ದ್ರವ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸೋದೇ ಇದಕ್ಕೆ ಒಂದು ರೀತಿಯ ಚಿಕಿತ್ಸೆ.. ಹೆಚ್ಚೆಚ್ಚು ದ್ರವ ವಸ್ತುಗಳ ಸೇವನೆ ವಾಂತಿ ಮತ್ತು ಡಯೇರಿಯಾ ತಡೆಯುತ್ತೆ.. ಅದು ಬಿಟ್ರೆ ಬೇರೆ ಟ್ರೀಟ್ಮೆಂಟ್ ಇಲ್ಲ.

-masthmagaa.com

Contact Us for Advertisement

Leave a Reply