ಹಾಸ್ಟೆಲ್​ನಲ್ಲಿ ಕೊರೋನಾ ಸ್ಫೋಟ: 190 ವಿದ್ಯಾರ್ಥಿಗಳು, ಶಿಕ್ಷಕರಿಗೆ ಪಾಸಿಟಿವ್

masthmagaa.com:

ಕೊರೋನಾ ಹಾವಳಿ ಕಮ್ಮಿಯಾಯ್ತು ಅಂತ ಶಾಲಾ-ಕಾಲೇಜು, ಹಾಸ್ಟೆಲ್​ಗಳನ್ನ ಹಂತ ಹಂತವಾಗಿ ಓಪನ್ ಮಾಡಲಾಗ್ತಿದೆ. ಆದ್ರೀಗ ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ಶಾಲಾ ಹಾಸ್ಟೆಲ್​ವೊಂದರಲ್ಲಿ ಬರೋಬ್ಬರಿ 190 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇದರಲ್ಲಿ 186 ವಿದ್ಯಾರ್ಥಿಗಳು ಮತ್ತು 4 ಶಿಕ್ಷಕರು ಇದ್ದಾರೆ. ಇದರ ಬೆನ್ನಲ್ಲೇ ಶಾಲಾ ಆವರಣವನ್ನ ಕಂಟೈನ್​ಮೆಂಟ್​ ಝೋನ್ ಅಂತ ಘೋಷಿಸಲಾಗಿದೆ. ಪಾಸಿಟಿವ್ ಬಂದಿರೋ ಬಹುತೇಕ ವಿದ್ಯಾರ್ಥಿಗಳು ಅಮ್ರಾವತಿ ಮತ್ತು ಯಾವಟ್ಮಲ್​ ಜಿಲ್ಲೆಯವರಂತೆ. ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ನಂಬರ್ಸ್​ ಜಾಸ್ತಿಯಾಗೋಕೆ ಈ ಎರಡು ಜಿಲ್ಲೆಗಳ ಕೊಡುಗೆ ಕೂಡ ಇದೆ. ಇದೀಗ ಇದೇ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್​ವೊಂದರಲ್ಲಿ ಕೊರೋನಾ ದೃಢಪಟ್ಟಿರೋದು ಆತಂಕ ಹೆಚ್ಚಿಸಿದೆ.

-masthmagaa.com

Contact Us for Advertisement

Leave a Reply