ಮಿಸ್ ಆಗಿ 2, 4 ತಿಂಗಳ ಶಿಶುಗಳಿಗೆ ಕೊರೋನಾ ಲಸಿಕೆ ಹಾಕಿದ ನರ್ಸ್! ಆಮೇಲೆ?

masthmagaa.com:
ಬ್ರೆಜಿಲ್​​ನಲ್ಲಿ ನವಜಾತ ಶಿಶುಗಳಿಗೆ ಮಿಸ್ ಆಗಿ ಫೈಜರ್ ಲಸಿಕೆ ಹಾಕಲಾಗಿದೆ. ಸದ್ಯ ಎರಡೂ ಮಕ್ಕಳನ್ನು ಆಸ್ಪತ್ರೆಗೆ ದಾಖಿಲಿಸಲಾಗಿದೆ. ಒಂದು 2 ತಿಂಗಳ ಹೆಣ್ಣುಮಗು ಮತ್ತು 4 ತಿಂಗಳ ಗಂಡು ಮಗುವಿಗೆ ಹೀಗೆ ಲಸಿಕೆ ಹಾಕಲಾಗಿದೆ. ಡಿಫ್ತೀರಿಯಾ, ಟೆಟಾನಸ್​, ಪೆರ್ಟುಸಿಸ್​​, ಹೆಪಟೈಟಿಸ್ ಬಿಗೆ ವಿರುದ್ಧವಾಗಿ ಲಸಿಕೆ ಹಾಕಬೇಕಿತ್ತು. ಆದ್ರೆ ಮಿಸ್ ಆಗಿ ಫೈಜರ್ ಲಸಿಕೆ ಹಾಕಲಾಗಿದೆ. ಇದ್ರಿಂದ ಸೀರಿಯಸ್ ರಿಯಾಕ್ಷನ್ ಆಗಿದ್ದು, ಮಕ್ಕಳಿಗೆ ಸದ್ಯ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಲಸಿಕೆ ಹಾಕಿದ ನರ್ಸ್​ನ್ನು ಅಮಾನತು ಮಾಡಲಾಗಿದ್ದು, ತನಿಖೆಗೆ ಒಳಪಡಿಸಲಾಗಿದೆ. ಹಲವು ದೇಶಗಳಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಫೈಜರ್ ಲಸಿಕೆ ಹಾಕಲಾಗ್ತಿದೆ. ಬ್ರೆಜಿಲ್​​ನಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಫೈಜರ್ ಲಸಿಕೆ ಹಾಕಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
-masthmagaa.com

Contact Us for Advertisement

Leave a Reply