ಸಿಕ್ತು..ಸಿಕ್ತು..ಇರುವೆ ಲೆಕ್ಕ ಸಿಕ್ತು! 20,000,000,000,000,000 ಇರುವೆ!

masthmagaa.com:

ಭೂಮಿ ಮೇಲೆ ಎಷ್ಷು ಇರುವೆಗಳಿವೆ ಅನ್ನೊ ಪ್ರಶ್ನೆಗೆ ರಿಸರ್ಚ್‌ ಒಂದ್ರಲ್ಲಿ ಉತ್ತರಿಸಲಾಗಿದೆ. ಸುಮಾರು 200 ಲಕ್ಷ ಕೋಟಿ ಇರುವೆಗಳು ಇರಬಹುದು ಅಂತ PNAS ಜರ್ನಲ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಇರುವೆಗಳು ಸುಮಾರು 1200 ಕೋಟಿ ಕೆಜಿಯಷ್ಟು ತೂಕವನ್ನ ಹೊಂದಿವೆ ಅಂತಾನೂ ಅಂದಾಜಿಸಲಾಗಿದೆ. ಈ ತೂಕ ಜಗತ್ತಿನಲ್ಲಿರೊ ಎಲ್ಲಾ ಕಾಡು ಪಕ್ಷಿಗಳು ಮತ್ತು ಕಾಡು ಸಸ್ತನಿಗಳ ಒಟ್ಟು ವೇಟ್‌ಗಿಂತ ಜಾಸ್ತಿಯಾಗಿದೆ. ಅಷ್ಟೇ ಅಲ್ದೇ ಭೂಮಿ ಮೇಲಿರೊ ಮಾನವರ ಒಟ್ಟು ತೂಕದ ಐದನೇ ಒಂದು ಭಾಗಕ್ಕೆ ಸಮವಿದೆ ಅಂತ ಹೇಳಲಾಗಿದೆ. ಒಟ್ಟು 15,700 ಇರುವೆ ಪ್ರಭೇದಗಳನ್ನ ಹಾಗೂ ಉಪಪ್ರಭೇದಗಳನ್ನ ಗುರುತಿಸಿ, ಹೆಸರಿಸಲಾಗಿದೆ. ಇನ್ನು ಅನೇಕ ಪ್ರಭೇದಗಳಿಗೆ ಹೆಸರಿಸೋದು ಬಾಕಿಯಿದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಇನ್ನು ಇವರು ಇಷ್ಟು ಇರುವೆಗಳಿವೆ ಅಂತ ಹೇಳಿದ್ರು ಅನ್ನೊದನ್ನ ನೋಡಿದ್ರೆ, ʻಸಂಶೋಧನಾಕಾರರು ಇರುವೆಗಳ ಕುರಿತು 489 ಅಧ್ಯಯನಗಳನ್ನ ವಿಶ್ಲೇಷಣೆ ಮಾಡಿದ್ದಾರೆ. ಹಾಗೂ ಎಲ್ಲ ಖಂಡಗಳಲ್ಲೂ ಕಾಡುಗಳು, ಮರುಭೂಮಿಗಳು, ಹುಲ್ಲುಗಾವಲು ಪ್ರದೇಶ ಹಾಗೂ ನಗರಗಳಲ್ಲಿ ಸಾವಿರಾರು ಇರುವೆ ತಜ್ಞರು ಹೋಗಿ ಸಂಶೋಧನೆ ನಡೆಸಿದ್ದಾರೆ. ಇವೆಲ್ಲ ರಿಸರ್ಚ್‌ಗಳ ಆಧಾರ ಮೇಲೆ ವಿಜ್ಞಾನಿಗಳು 200 ಲಕ್ಷ ಕೋಟಿ ಇರುವೆಗಳು ಭೂಮಿ ಮೇಲೆ ಇರೊ ಸಾಧ್ಯತೆಯನ್ನ ಅಂದಾಜಿಸಿದ್ದಾರೆ.

-masthmagaa.com

Contact Us for Advertisement

Leave a Reply