ತಾಲಿಬಾನಿಗಳಿಂದ ಪಾಕ್‌ಗೆ ಗಂಡಾಂತರ! ದೇಶದ ಹೊರಗೂ ಹಾಗೂ ಒಳಗೂ..

masthmagaa.com:

ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದ ಜೊತೆಗಿನ ಗಡಿ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. 2022ರಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಡ್ಯೂರಾಂಡ್‌ ಗಡಿಯಲ್ಲಿ ಅತಿ ಹೆಚ್ಚು ಉದ್ವಿಗ್ನತೆ ಉಂಟಾಗಿದೆ ಅಂತ International Forum For Rights And Security (IFFRAS) ಹೇಳಿದೆ. ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸ್ತಿರೋ ತಾಲಿಬಾನಿಗಳು ಉಭಯ ದೇಶಗಳ ನಡುವಿನ ಗಡಿರೇಖೆಯನ್ನ ಒಪ್ಪಿಕೊಂಡಿಲ್ಲ. ಹಾಕಿರೊ ಬೇಲಿಯನ್ನ ಕಿತ್ತು ಕಿತ್ತು ಎಸೀತಾ ಇದ್ದಾರೆ. ಹಾಗಾಗಿ ಗಡಿ ಪ್ರದೇಶದಲ್ಲಿ ಹಿಂಸಾಚಾರ ಹೆಚ್ಚಾಗ್ತಿದೆ. ಇನ್ನು ಪಾಕ್‌ಗೆ ಅಫ್ಘಾನಿಸ್ತಾನ್‌ ತಾಲಿಬಾನಿಗಳು ಒಂದ್‌ ಕಡೆಯಾದ್ರೆ ತನ್ನ ನೆಲದಲ್ಲಿರೊ ಟಿಟಿಪಿ ಅಥ್ವಾ ಪಾಕಿಸ್ತಾನ್‌ ತಾಲಿಬಾನಿಗಳು ಮತ್ತೊಂದು ಸಮಸ್ಯೆ. ಇದೀಗ ಟಿಟಿಪಿ ಉಗ್ರರ ದಾಳಿಯಲ್ಲಿ ಕಳೆದ ವರ್ಷದ ಪಾಕ್‌ನ ನಾಗರಿಕರು ಮತ್ತು ರಕ್ಷಣಾ ಸಿಬ್ಬಂದಿ ಸೇರಿದಂತೆ ಸುಮಾರು 419 ಜನ ಮೃತಪಟ್ಟಿದ್ದಾರೆ ಅಂತ ವರದಿಯಾಗಿದೆ. 2022ರಲ್ಲಿ ಟಿಟಿಪಿ ಮತ್ತು ಇತರ ಭಯೋತ್ಪಾದಕ ಗುಂಪುಗಳಿಂದ ಒಟ್ಟು 262 ಭಯೋತ್ಪಾದಕ ದಾಳಿಗಳು ಪಾಕಿಸ್ತಾನದಲ್ಲಿ ಸಂಭವಿಸಿವೆ ಅಂತ ಪಾಕಿಸ್ತಾನ ಇನ್ಸ್ಟಿಟ್ಯೂಟ್‌ ಆಫ್‌ ಪೀಸ್‌ ಸ್ಟಡೀಸ್‌ ತನ್ನ ವರದಿಯಲ್ಲಿ ತಿಳಿಸಿದೆ.

-masthmagaa.com

Contact Us for Advertisement

Leave a Reply