ಗಡಿದಾಟಿ ಭಾರತಕ್ಕೆ ಬಂದಿದ್ದ 29 ಮಯನ್ಮಾರ್‌ ಸೈನಿಕರು ಮರಳಿ ತಾಯ್ನಾಡಿಗೆ!

masthmagaa.com:

ಮಯನ್ಮಾರ್‌ ಸೇನೆ ಹಾಗೂ ಅಲ್ಲಿನ ಬಂಡುಕೋರರ ನಡುವೆ ನಡೆದಿದ್ದ ಸಂಘರ್ಷದ ಹಿನ್ನಲೆಯಲ್ಲಿ ಭಾರತದ ಗಡಿ ದಾಟಿ ಬಂದಿದ್ದ ಮಯನ್ಮಾರ್‌ ಸೈನಿಕರನ್ನ ವಾಪಾಸ್‌ ಕಳಿಸಲಾಗಿದೆ. ಮಯನ್ಮಾರ್‌ನ People’s Defence Force (PDF) ನಡೆಸಿದ ಗುಂಡಿನ ದಾಳಿಯಿಂದ ದಿಕ್ಕಾಪಾಲಾಗಿ‌, ಗಡಿದಾಟಿ ಮಿಜೊರಾಮ್‌ಗೆ ಬಂದಿದ್ದ 29 ಜನ ಮಯನ್ಮಾರ್‌ ಸೈನಿಕರನ್ನು ನಿನ್ನೆ ‌ವಾಪಾಸ್ ಕಳಿಸಲಾಗಿದೆ. ಅಂದ್ಹಾಗೆ ಮಯನ್ಮಾರ್‌ನಲ್ಲಿ ಇತ್ತೀಚೆಗೆ ಇಂತಹ ಉಗ್ರ ಗುಂಪುಗಳ ದಾಳಿಗಳು ವಿಪರೀತವಾಗಿವೆ. ಇದುವರೆಗೆ ಒಟ್ಟು 74 ಸೈನಿಕರು ಈ ರೀತಿ ಗಡಿದಾಟಿದ್ದಾರೆ. ಅಸ್ಸಾಂ ರೈಫಲ್ಸ್‌ನ ಕಸ್ಟಡಿಯಲ್ಲಿದ್ದ 29 ಮಂದಿ ಮಯನ್ಮಾರ್‌ ಸೈನಿಕರನ್ನ ಮಣಿಪುರದ ಮೊರೇಹ್‌ವರೆಗೆ ಏರ್‌ಲಿಫ್ಟ್‌ ಮಾಡಿ, ನಂತರ ಮಯನ್ಮಾರ್‌ನ ಟಮು ಅನ್ನೊ ಟೌನಿಗೆ ಕಳಿಸಿಕೊಡಲಾಗಿದೆ.

-masthmagaa.com

Contact Us for Advertisement

Leave a Reply