3 ರಾಜ್ಯಗಳ ಲೋಕಸಭೆ ಸೀಟು ಹಂಚಿಕೆ ವಿಚಾರ:‌ ಕಂಗಾಲಾದ ಕಾಂಗ್ರೆಸ್!

masthmagaa.com:

ಲೋಕಸಭೆ ಎಲೆಕ್ಷನ್‌ ಕಾವು ಜೋರಾಗತೊಡಗಿದಂತೆ INDI ಮೈತ್ರಿ ಕೂಟದಲ್ಲಿ 3 ರಾಜ್ಯಗಳ ಸೀಟು ಹಂಚಿಕೆ ವಿಚಾರ ಗೊಂದಲದ ಗೂಡಾಗಿ ಪರಿಣಮಿಸ್ತಿದೆ. ಪಂಜಾಬ್‌ನಲ್ಲಿ ಆಡಳಿತರೂಢ ಆಮ್‌ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್‌ನ ರಾಜ್ಯ ನಾಯಕರು ಮುನಿಸಿಕೊಂಡು ಸ್ವತಂತ್ರ ಸ್ಪರ್ಧೆ ಮಾಡೋ ಬಗ್ಗೆ ಹೇಳಿಕೆ ನೀಡಿದ್ರು. ಇತ್ತ ಪಶ್ಚಿಮ ಬಂಗಾಳದಲ್ಲಿ TMC ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೂಡ ಗುರುವಾರ TMC ಏಕಾಂಗಿ ಸ್ಫರ್ಧೆ ಮಾಡುತ್ತೆ ಅಂತ ಹೇಳಿದ್ದಾರೆ. ಇನ್ನೊಂದೆಡೆ ಉದ್ದವ್ ಠಾಕ್ರೆ ಬಣದ ಶಿವಸೇನೆ ಕೂಡ ಕಾಂಗ್ರೆಸ್‌ಗೆ 23 ಸೀಟ್‌ ಕೇಳಿದ್ದಕ್ಕೆ ಕಾಂಗ್ರೆಸ್‌ ನೋ ಅಂದಿದೆ. ಹೀಗಾಗಿ ಈ ಎಲ್ಲ ರಾಜ್ಯಗಳ ಸೀಟು ಹಂಚಿಕೆ INDI ಮೈತ್ರಿ ಕೂಟಕ್ಕೆ ದೊಡ್ಡ ತಲೆನೋವಾಗಿ ಕಾಡಲಾರಂಭಿಸಿದೆ.‌

-masthmagaa.com

Contact Us for Advertisement

Leave a Reply