ಭಾರತದಲ್ಲಿ ಕೊರೋನಾಗೆ 40 ಲಕ್ಷ ಬಲಿ! ರಾಹುಲ್ ಕೆಂಡ

masthmagaa.com:

ಭಾರತದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಸರ್ಕಾರ ಕೊಟ್ಟ ಅಂಕಿ ಅಂಶಗಳಿಗಿಂತ ಎಂಟು ಪಟ್ಟು ಹೆಚ್ಚಿದೆ ಅಂತ ವಿಶ್ವ ಆರೋಗ್ಯ ಸಂಘಟನೆ ಹೇಳಿಕೆ ನೀಡಿದೆ. ಇದರಲ್ಲಿ ಭಾರತ ಸರ್ಕಾರ ಕೊರೊನಾದ ಸಾವಿನ ಪ್ರಮಾಣದ ಅಂಕಿ – ಅಂಶಗಳನ್ನ ಸರಿಯಾಗಿ ಬಹಿರಂಗಪಡಿಸ್ತಿಲ್ಲ. ಒಂದು ವೇಳೆ ಸರ್ಕಾರದ ಅದನ್ನ ನೀಡಿದ್ರೆ ಕೊರೊನಾದಿಂದ ಮೃತಪಟ್ಟವರ ಪಟ್ಟಿಯಲ್ಲಿ ಭಾರತ ಟಾಪ್‌ಲ್ಲಿ ಇರುತ್ತೆ ಅಂತ ಹೇಳಿದೆ. ಇನ್ನುಇದಕ್ಕೆ ಭಾರತ ಕೂಡ ಪ್ರತಿಕ್ರಿಯಿಸಿದ್ದು”ವಿಶ್ವ ಆರೋಗ್ಯ ಸಂಸ್ಥೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯನ್ನ ಅಂದಾಜು ಮಾಡೋಕೆ ಎರಡು ರೀತಿಯ ಮಾದರಿಗಳನ್ನ ಉಪಯೋಗಿಸುತ್ತೆ. ಆ ಎರಡೂ ಮಾದರಿಗಳಲ್ಲೂ ಭಾರತದ ಸಾವಿನ ಅಂಕಿ ಅಂಶಗಳು ಒಂದಕ್ಕೊಂದು ಹೋಲಿಸಿದ್ರೆ ದೊಡ್ಡಅಂತರ ಇದೆ. ಹಾಗಾಗಿ ಭಾರತದಂತಹ ದೊಡ್ಡ ಜನಸಂಖ್ಯೆ ಇರೋ ದೇಶದಲ್ಲಿಅದನ್ನ ನಿರ್ದಿಷ್ಟವಾಗಿ ಅಂದಾಜು ಮಾಡೋದು ಕಷ್ಟ. ಭಾರತದ ಮಟ್ಟಿಗೆ WHO ಕೊರೋನಾ ಸಾವಿನ ಪ್ರಮಾಣ ಪತ್ತೆಗೆ ಬಳಸಿದ ಮಾದರಿ ಹಾಗು ಅದರಿಂದ ಬಂದ ಫಲಿತಾಂಶಗಳು ಸರಿಹೊಂದೋದಿಲ್ಲ ಅಂತ ಹೇಳಿದೆ. ಇನ್ನು ನ್ಯೂಯಾರ್ಕ್‌ ಟೈಮ್ಸ್‌ ವರದಿಯನ್ನೇ ರೀ ಪೋಸ್ಟ್‌ ಮಾಡಿ ಈ ಬಗ್ಗೆ ಟ್ವೀಟ್‌ ಮಾಡಿರೋ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮೋದಿ ಜೀ ಸುಳ್ಳು ಬಿಟ್ಟು ಬೇರೆ ಹೇಳೋದಿಲ್ಲ. ಆಕ್ಸಿಜನ್‌ ಕೊರತೆಯಿಂದ ಭಾರತದಲ್ಲಿ ಒಬ್ಬರೂ ಸತ್ತಿಲ್ಲ ಅಂತ ಹೇಳ್ತಾರೆ. ಮೋದಿಯವರೇ ಕೊರೋನಾಗೆ ಸತ್ತಿರೋದು ನಲವತ್ತು ಲಕ್ಷ ಜನ.. ಐದು ಲಕ್ಷ ಅಲ್ಲ. ಕೊರೊನಾ ಬಗ್ಗೆ ನಿಮ್ಮ ಸರ್ಕಾರದ ಉಡಾಫೆಯೇ ಇದಕ್ಕೆಲ್ಲಾ ಕಾರಣ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply