ಕಲ್ಲಿದ್ದಲು ಇದೆ! ಕರೆಂಟೂ ಇರುತ್ತೆ ಎಂದ ಕೇಂದ್ರ ಸರ್ಕಾರ!

masthmagaa.com:

ದೇಶದಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ಕರೆಂಟ್ ಉತ್ಪಾದನೆಯಾಗದೆ ವಿದ್ಯುತ್ ಸಮಸ್ಯೆ ಆಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಒಂದು ಸೂಚನೆ ಮತ್ತು ಎಚ್ಚರಿಕೆ​​ಯನ್ನ ಕೊಟ್ಟಿದೆ. ಸೂಚನೆ ಏನಂದ್ರೆ, ಕೇಂದ್ರದ ವಿದ್ಯುತ್​ ಸ್ಥಾವರಗಳಲ್ಲಿ ಉತ್ಪಾದನೆಯಾಗಿ ಹಂಚಿಕೆಯಾಗದ ಕರೆಂಟ್​ ಅನ್ನ ತಮ್ಮ ತಮ್ಮ ರಾಜ್ಯದ ಬಳಕೆದಾರರಿಗೆ ಪೂರೈಸಿ. ಒಂದುವೇಳೆ ಬೇಡಿಕೆಗಿಂತ ಹೆಚ್ಚು ಕರೆಂಟ್ ಉತ್ಪಾದನೆಯಾಗ್ತಿದ್ರೆ ಅದನ್ನ ನಮ್ಮ ಗಮನಕ್ಕೆ ತನ್ನಿ. ಆ ಹೆಚ್ಚುವರಿ ಕರೆಂಟ್​ ಅನ್ನ ಅವಶ್ಯಕತೆ ಇರೋ ರಾಜ್ಯಗಳಿಗೆ ಪೂರೈಸ್ತೀವಿ ಅನ್ನೋದು. ವಾರ್ನಿಂಗ್ ಏನಂದ್ರೆ, ಕೆಲವೊಂದು ರಾಜ್ಯಗಳು ತಮ್ಮ ಬಳಕೆದಾರರಿಗೆ ಕರೆಂಟ್​ ಅನ್ನ ಪೂರೈಸೋ ಬದಲು ಪವರ್ ಕಟ್​ ಅಥವಾ ಲೋಡ್​ ಶೆಡ್ಡಿಂಗ್ ಮೊರೆ ಹೋಗ್ತಿವೆ. ಜೊತೆಗೆ ಕರೆಂಟ್​ ಅನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಿವೆ. ಹೀಗೆ ಮಾಡಿದ್ರೆ ಅಂಥಾ ರಾಜ್ಯಗಳಿಗೆ ನಾವು ಕರೆಂಟ್​ ಅನ್ನ ಪೂರೈಸೋದಿಲ್ಲ ಎಂದಿದೆ. ಆ ರಾಜ್ಯಗಳು ಯಾವುವು ಅಂತ ಹೇಳಿಲ್ಲ.

ಇನ್ನು ದೇಶದಲ್ಲಿ ಕಲ್ಲಿದ್ದಲನ್ನ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಎಲ್ಲಾ ಪ್ರಯತ್ನ ಮಾಡ್ತಿದ್ದೀವಿ. ಕಲ್ಲಿದ್ದಲು ಕೊರತೆ ಆಗೋಕೆ ಬಿಡಲ್ಲ ಅಂತ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ನಿನ್ನೆ ದಾಖಲೆಯ 1.94 ಮಿಲಿಯನ್ ಟನ್​ ಕಲ್ಲಿದ್ದಲನ್ನ ಸಪ್ಲೈ ಮಾಡಿದ್ದೀವಿ. ನಮ್ಮ ಬಳಿ ಇನ್ನೂ 22 ದಿನಕ್ಕಾಗುವಷ್ಟು ಕಲ್ಲಿದ್ದಲು ಸ್ಟಾಕ್ ಇದೆ. ಈ ಹಿಂದೆ ಕೆಲವೊಂದು ರಾಜ್ಯಗಳು ಕಲ್ಲಿದ್ದಲನ್ನ ಕಳಿಸಬೇಡಿ ಅಂತೆಲ್ಲಾ ಮನವಿ ಮಾಡಿಕೊಂಡಿದ್ವು. ಅಷ್ಟು ಸ್ಟಾಕ್ ಇತ್ತು ಅಂತಾನೂ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಮುಂದುವರಿದು, ಕಲ್ಲಿದ್ದಲು ಕೊರತೆಗೆ ಮಳೆಯೇ ಕಾರಣ. ಮಳೆಯಿಂದಾಗಿ ಕಲ್ಲಿದ್ದಲು ಉತ್ಪಾದನೆ ಕಮ್ಮಿಯಾಯ್ತು. ಇದರಿಂದ ಕಲ್ಲಿದ್ದಲಿನ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜಾಸ್ತಿಯಾಗಿದೆ. ಪ್ರತಿ ಟನ್​ ಕಲ್ಲಿದ್ದಲಿಗೆ 60 ರೂಪಾಯಿ ದ್ದಿದ್ದು ಈಗ 190 ರೂಪಾಯಿ ಆಗಿದೆ. ಕಲ್ಲಿದ್ದಲು ಆಮದು ಮಾಡಿಕೊಂಡು ಕರೆಂಟ್​ ಉತ್ಪಾದಿಸುತ್ತಿದ್ದ ವಿದ್ಯುತ್ ಸ್ಥಾವರಗಳು ಕಳೆದ 15-20 ದಿನಗಳಿಂದ ಬಂದ್ ಆಗಿವೆ. ಅಥವಾ ಅವುಗಳು ಕರೆಂಟ್ ಉತ್ಪಾದನೆ ಕಮ್ಮಿ ಮಾಡಿವೆ. ಇದು ದೇಶೀಯ ಕಲ್ಲಿದ್ದಲು ಮೇಲಿನ ಒತ್ತಡ ಹೆಚ್ಚಾಗುವಂತೆ ಮಾಡಿದೆ ಅಂತಾನೂ ಕೋಲ್ ಮಿನಿಸ್ಟರ್​ ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply