ವಿಸ್ಕಿ ಬಾಟಲಿ ಮಂಗಮಾಯ ಮಾಡಿದ್ರಾ ಟ್ರಂಪ್-ಪಾಂಪಿಯೋ ಜೋಡಿ? ತನಿಖೆ ಶುರು!

masthmagaa.com:

ಅಮೆರಿಕದಲ್ಲಿ ಒಂದು ವಿಚಿತ್ರ ತನಿಖೆ ನಡೀತಿದೆ. ಅಮೆರಿಕದ ಪವರ್ಫುಲ್ ಸ್ಟೇಟ್ ಡಿಪಾರ್ಟ್‌ಮೆಂಟ್ ಈ ತನಿಖೆ ನಡೆಸ್ತಿದೆ. ಸೋ ಯಾವ್ದೋ ಬಹುದೊಡ್ಡ ಕೇಸ್ ಇರಬೋದು ಅಂತ ನೀವು ಅನ್ಕೋಬೋದು ಈಗ. ಆದ್ರೆ ಕೇಳಿ, ಈ ತನಿಖೆ ನಡೀತಿರೋದು ಒಂದು ವಿಸ್ಕಿ ಬಾಟ್ಲಿ ಎಲ್ಲೋಯ್ತು ಅಂತ. ಜಾಪಾನ್ ಕೊಟ್ಟಿದ್ದ ಈ ವಿಸ್ಕಿಗೆ ಒಂದು ಬಾಟಲಿಗೆ 4ವರೆ ಲಕ್ಷ ರೂಪಾಯಿ ಅಂತೆ. ಇಷ್ಟು ದುಬಾರಿ ವಿಸ್ಕಿಗೂ ಅಮೆರಿಕದ ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅಂದಿನ ಸೆಕ್ರಟರಿ ಆಫ್ ಸ್ಟೇಟ್ ಮೈಕ್ ಪಾಂಪಿಯೊಗೂ ಲಿಂಕ್ ಇದೆ. ಅದನ್ನ ಬಿಡಿಸಿ ಹೇಳ್ತೀವಿ. ಅದಕ್ಕೂ ಮೊದಲು ಅಮೆರಿಕದಲ್ಲಿ ಗಿಫ್ಟ್‌ಗಳ  ಸಂಬಂಧ ಇರೋ ಒಂದು ರೂಲ್ಸ್ ಬಗ್ಗೆ ನೋಡೋಣ. ಅಂದಹಾಗೆ ಅಮೆರಿಕದ ಅಧ್ಯಕ್ಷರೂ ಸೇರಿದಂತೆ ಉನ್ನತ ಅಧಿಕಾರಿಗಳು ದೇಶದ ಹಾಗೂ ವಿದೇಶದ ಅತಿಥಿಗಳಿಂದ ಬರೋ ಗಿಫ್ಟ್‌ಗಳನ್ನ ತಾವೇ ಮನೆಗೆ ತಗೊಂಡೋಂಗಗಿಲ್ಲ. ಅದನ್ನ ಅಮೆರಿಕದ ನ್ಯಾಶನಲ್ ಆರ್ಕೈವ್ ಅಥವಾ ಯಾವುದಾದರೂ ಸರ್ಕಾರಿ ವಿಭಾಗಕ್ಕೆ ಹಸ್ತಾಂತರ ಮಾಡಬೇಕು. ಅಥವ ಇಲ್ಲ ಇದು ಬಾಳ ಚೆನ್ನಾಗಿದೆ. ನಂಗೇ ಬೇಕು ಅಂತೇನಾದ್ರೂ ಅನಿಸಿದರೆ, ಆ ಗಿಫ್ಟ್‌ನ ಬೆಲೆ ಎಷ್ಟಿದೆಯೇ ಅಷ್ಟನ್ನ ಅಮೆರಿಕ ಸರ್ಕಾರಕ್ಕೆ ಪೇ ಮಾಡಿ ಖರೀದಿ ಮಾಡಬೇಕು. ಅದು ರೂಲ್ಸ್. ಅರೆ ಇವರಿಗೆ ಬಂದ ಗಿಫ್ಟ್‌ಗೆ ಮತ್ತೆ ಇವರೇ ಯಾಕೆ ಪೇ ಮಾಡಿ ತಗೋಬೇಕು ಅಂತೀರಾ? ಅದಕ್ಕೆ ಉತ್ತರ ಸಿಂಪಲ್. ಈಗ ನೀವು ರೋಡಲ್ಲಿ ಹೋಗ್ತಾ ಇರ್ತೀರಿ ಅನ್ಕೊಳಿ.., ನಿಮಗೆ ಯಾರಾದ್ರೂ ಬಂದು ಸುಮ್ಮನೆ ಗಿಫ್ಟ್ ಕೊಡ್ತಾರಾ? ಖಂಡಿತ ಇಲ್ಲ. ಆದ್ರೆ ನೀವು ನಾಳೆ ಅಮೆರಿಕದ ಅಧ್ಯಕ್ಷ ಆಗ್ಬಿಟ್ರೆ ಆಗ ಸೀನ್ ಚೇಂಜ್ ಆಗುತ್ತೆ. ವಿಶ್ವದ ನಂಬರ್ ವನ್ ಶಕ್ತಿಶಾಲಿ ದೇಶದ ಅಧ್ಯಕ್ಷರನ್ನ ಖುಷಿ ಪಡಿಸೋಕೆ ಎಲ್ಲ ದೇಶಗಳವರೂ ಟ್ರೈ ಮಾಡ್ತಾರೆ. ಸೋ ಒಳ್ಳೋಳ್ಳೆ ಕಾಸ್ಟ್ಲಿ ಗಿಫ್ಟ್ ಕೊಡ್ತಾರೆ. ಸೋ ಅದು ನಿಮಗೆ ವೈಯಕ್ತಿಕವಾಗಿ ಬಂದ ಗಿಫ್ಟ್ ಅಲ್ಲ. ಅದು ಅಮೆರಿಕ ಅಧ್ಯಕ್ಷರ ಹುದ್ದೆಗೆ ಬಂದ ಗಿಫ್ಟ್. ಆ ಹುದ್ದೆಗೆ ಯಾರೇ ಬಂದ್ರೂ ಗಿಫ್ಟ್ ಬರುತ್ತೆ. ಸೋ ಅದು ಅಮೆರಿಕ ಸರ್ಕಾರದ ಸ್ವತ್ತು ಅನ್ನೋದು ಅಮೆರಿಕದ ಈ ನಿಯಮದ ಸಾರಾಂಶ.
2019ರಲ್ಲಿ ಟ್ರಂಪ್ ಮತ್ತು ಪಾಂಪಿಯೋ ಜಪಾನ್ಗೆ ಹೋದಾಗ ಅಲ್ಲಿ ಈ ಕಾಸ್ಟ್ಲಿ ಎಣ್ಣೆ ಕೊಡಲಾಗಿತ್ತು. ಇವರಿಬ್ಬರಿಗೂ ಈ ಎಣ್ಣೆ ಬಾಟ್ಲಿ ಬಿಟ್ಟು ಇನ್ನೂ ನೂರಾರು ಗಿಫ್ಟ್ ಗಳು, ಅತ್ಯಂತ ಬೆಲೆ ಬಾಳುವ ಗಿಫ್ಟ್ ಗಳು ಬಂದಿವೆ ಅದೆಲ್ಲವನ್ನೂ ಇವ್ರು ಸರ್ಕಾರಕ್ಕೆ ಕೊಟ್ಟಿದ್ದಾರೆ. ಆದ್ರೆ ಈ ವಿಸ್ಕಿ ಬಾಟ್ಲಿ ಮಾತ್ರ ಮಂಗಮಾಯ ಮಾಡಿದ್ದಾರೆ ಅಂತ ಈಗ ತನಿಖೆ ನಡಿತಿದೆ. ಎಲ್ಲೋಯ್ತು ದುಬಾರಿ ಮದ್ಯ ಅಂತ ಕೇಳಿದ್ರೆ, ಯಾವುದು? ನಂಗೆ ಗೊತ್ತೇ ಇಲ್ಲ ಅಂತ ಹೇಳ್ತಿದಾರೆ ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿದೆ. ಮದ್ಯ ಬಿಡಿ. ಅದರ ಬಾಟಲಿ ಕೂಡ ಎಲ್ಲಿ ಹುಡುಕಿದ್ರೂ ಸಿಗ್ತಿಲ್ಲ, ಆದ್ರೂ ನಾವು ತನಿಖೆ ಮುಂದುವರಿಸುತ್ತೇವೆ ಅಂತ ಹೇಳಿದ್ದಾರೆ.‌

-masthmagaa.com

Contact Us for Advertisement

Leave a Reply