ಕಾಬೂಲ್​ನಲ್ಲಿ ತಾಲಿಬಾನಿಗಳ ನಿರ್ಬಂಧ! ಹೊಸ ರೂಲ್ಸ್​!

masthmagaa.com:

ಕಾಬೂಲ್ ಏರ್​​ಪೋರ್ಟ್​ ಆವರಣದಲ್ಲಿ​​ ತಾಲಿಬಾನಿಗಳು ಒಂದಷ್ಟು ನಿರ್ಬಂಧಗಳನ್ನು ವಿಧಿಸಿ, ಆದೇಶ ಹೊರಡಿಸಿದ್ದಾರೆ. ಜನ ಏರ್​ಪೋರ್ಟ್​ ಹೊರಗೆ ಕ್ಯೂ ನಿಲ್ಲಬೇಕು. ಜನ ಗುಂಪು ಗುಂಪಾಗಿ ಸೇರಬಾರದು ಅಂತ ತಿಳಿಸಿದೆ. ಅದ್ರ ಬೆನ್ನಲ್ಲೇ ಕಾಬೂಲ್ ಏರ್​ಪೋರ್ಟ್​​ನಲ್ಲಿ ಗಲಾಟೆ ನಡೆದು, ಅದ್ರಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಅಂತ ಯುನೈಟೆಡ್ ಕಿಂಗ್​ಡಮ್​​ನ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಏರ್​ಪೋರ್ಟ್​​ನಲ್ಲಿ ಜನರನ್ನು ಮ್ಯಾನೇಜ್ ಮಾಡೋದು, ಸ್ಥಳಾಂತರ ಮಾಡೋದು ತುಂಬಾ ಕಷ್ಟವಾಗ್ತಿದೆ. ಅಮೆರಿಕದ ಡೆಡ್​ಲೈನ್ ಒಳಗೆ ಅಂದ್ರೆ ಆಗಸ್ಟ್​ 31ರ ಒಳಗಾಗಿ ಎಲ್ಲಾ ಪ್ರಜೆಗಳನ್ನು ಸ್ಥಳಾಂತರ ಮಾಡೋಕೆ ಯಾವ ದೇಶಕ್ಕೂ ಸಾಧ್ಯವಿಲ್ಲ ಅಂತಲೂ ತಿಳಿಸಿದೆ. ಇತ್ತ ಯೂರೋಪಿಯನ್ ಯೂನಿಯನ್​​ನ ವಿದೇಶಾಂಗ ನೀತಿಯ ಮುಖ್ಯಸ್ಥ ಜೋಸೆಪ್ ಬೋರೆಲ್ ಕೂಡ ಇದೇ ಮಾತು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply