ವಿಶ್ವಕಪ್‌ 2023: ಭಾರತ Vs ಪಾಕ್ ಮ್ಯಾಚ್‌ಗೆ ಭಾರಿ ಭದ್ರತೆ, 7,000 ಪೊಲೀಸ್‌ ಸಿಬ್ಬಂದಿ ನಿಯೋಜನೆ

masthmagaa.com:

ಏಕದಿನ ವಿಶ್ವಕಪ್‌ 2023ರ ಭಾರತ ಮತ್ತು ಪಾಕಿಸ್ತಾನ್‌ ನಡುವಿನ ಪಂದ್ಯ ಅಕ್ಟೋಬರ್‌ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಲ್ಲರೂ ಹುಬ್ಬೇರಿಸಿ ಕಾತುರದಿಂದ ಕಾಯುತ್ತಿರುವ ಈ ಮ್ಯಾಚ್‌ಗೆ ಬಿಗಿ ಭದ್ರತಾ ಕ್ರಮಗಳ ಸಿದ್ಧತೆಗಳು ನಡೆಯುತ್ತಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಒಟ್ಟು 7,000 ಪೊಲೀಸ್‌ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಇದರೊಂದಿಗೆ ಭದ್ರತೆ ಮತ್ತು ಟ್ರಾಫಿಕ್‌ ನಿರ್ವಹಣೆಗಾಗಿ 4,000 ಹೋಮ್‌ ಗಾರ್ಡ್ಸ್‌, 21 ಪೊಲೀಸ್ ಉಪ ಆಯುಕ್ತರು, 47 ಸಹಾಯಕ ಪೊಲೀಸ್‌ ಆಯುಕ್ತರು, 131 ಪೊಲೀಸ್‌ ಇನ್ಸ್‌ಪೆಕ್ಟರ್ಸ್‌, 369 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ಸ್‌, 6,875 ಹೆಡ್‌ ಕಾನ್ಸ್ಟೇಬಲ್ಸ್‌ ನಿಯೋಜಿಸಲಾಗಿದೆ. ನಿಯೋಜಿಸಲಾದ ಭದ್ರತಾ ಪಡೆಗಳು ಕೋಮು ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ವಹಿಸಲಿದ್ದಾರೆ. ಕೆಮಿಕಲ್‌, ಬಯೋಲಾಜಿಕಲ್‌, ರೇಡಿಯೋಲಾಜಿಕಲ್‌ ಹಾಗೂ ನ್ಯೂಕ್ಲಿಯರ್‌ಗಳಂತಹ ಅಪಾಯಗಳನ್ನು ಪತ್ತೆ ಹಚ್ಚಲಿದ್ದಾರೆ ಅಂತ ಅಹಮದಾಬಾದ್‌ ಪೊಲೀಸ್‌ ತಿಳಿಸಿದ್ದಾರೆ.

 

 

-masthmagaa.com

 

 

Contact Us for Advertisement

Leave a Reply