ಮಹಾರಾಷ್ಟ್ರದಲ್ಲಿ ಪೊಲೀಸರನ್ನೂ ಬಿಡ್ತಿಲ್ಲ ಮಹಾಮಾರಿ..!

masthmagaa.com:

ಮಹಾರಾಷ್ಟ್ರ: ದೇಶದಲ್ಲಿ ಕೊರೋನಾ ವೈರಸ್​ನ ಹಾಟ್​ಸ್ಪಾಟ್​ ಆಗಿರೋ ಮಹಾರಾಷ್ಟ್ರದಲ್ಲಿ 714 ಮಂದಿ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಐವರು ಪ್ರಾಣ ಕಳೆದುಕೊಂಡಿದ್ದು, 61 ಪೊಲೀಸರು ಗುಣಮುಖರಾಗಿದ್ದಾರೆ. 648 ಮಂದಿ ಪೊಲೀಸರು ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ಮಹಾರಾಷ್ಟ್ರ ಪೊಲೀಸ್ ಇಲಾಖೆ ತಿಳಿಸಿದೆ.

ಅಲ್ಲದೆ ಲಾಕ್​ಡೌನ್ ಅವಧಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ 194 ಪ್ರಕರಣಗಳು ವರದಿಯಾಗಿವೆ. ಈ ಸಂಬಂಧ 689 ಆರೋಪಿಗಳನ್ನ ಬಂಧಿಸಲಾಗಿದೆ. ಮಹಾರಾಷ್ಟ್ರದಲ್ಲಿ ಇದುವರೆಗೆ 19 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದ್ದು, 731 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply