ಉತ್ತರ ಪ್ರದೇಶದಲ್ಲಿ ಭಾರಿ ರಸ್ತೆ ಅಪಘಾತ: 8 ಸಾವು

masthmagaa.com:

ಉತ್ತರ ಪ್ರದೇಶದ ಭೋಜಿಪುರ್‌ ಬಳಿ ನಡೆದ ಭಾರಿ ರಸ್ತೆ ಅಪಘಾತದಲ್ಲಿ ಒಂದು ಮಗು ಸೇರಿ 8 ಮಂದಿ ಮೃತಪಟ್ಟಿದ್ದಾರೆ. ಬರೇಲಿ ಇಂದ ನೈನಿತಾಲ್‌ಗೆ ಸಂಪರ್ಕ ಕಲ್ಪಿಸೋ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತಿದ್ದ ಕಾರು ಲಾರಿಯೊಂದಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ತಕ್ಷಣ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಸೆಂಟ್ರಲ್‌ ಲಾಕ್‌ ಆಗಿದ್ದರಿಂದ ಕಾರಿನ ಬಾಗಿಲುಗಳನ್ನ ತೆಗೆಯಲಾಗಿಲ್ಲ. ಹೀಗಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ 8 ಮಂದಿ ಸುಟ್ಟು ಭಸ್ಮವಾಗಿದ್ದಾರೆ.

-masthmagaa.com

Contact Us for Advertisement

Leave a Reply