ವಿಧಾನಸಭಾ ಚುನಾವಣಾ: ಬಿಜೆಪಿ ಪಕ್ಷದಿಂದ ಬರೊಬ್ಬರಿ 9,125 ರ‍್ಯಾಲಿಗಳು, 1,377 ರೋಡ್‌ ಶೋ

masthmagaa.com:

ಇನ್ನು ಚುನಾವಣೆ ಗೆಲ್ಲೋಕೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಬೆವರು ಹರಿಸಿದ್ದು ಬರೋಬ್ಬರಿ 9,125 ರ‍್ಯಾಲಿಗಳು, 1,377 ರೋಡ್‌ಶೋಗಳನ್ನ ನಡೆಸಿದೆ. ಪ್ರಚಾರದ ವೇಳೆ 311 ದೇವಸ್ಥಾನಗಳು ಮತ್ತು ಮಠಗಳಿಗೆ ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ. 3,166 ಸಾರ್ವಜನಿಕ ಪ್ರಚಾರಗಳನ್ನು ಮತ್ತು 9,077 ಸಾರ್ವಜನಿಕ ಸಭೆಗಳನ್ನ ಬಿಜೆಪಿ ಆಯೋಜಿಸಿದೆ. ರಾಜ್ಯದಲ್ಲಿ ಸಾರ್ವಜನಿಕ ರ‍್ಯಾಲಿಗಳು ಮತ್ತು ಸಮಾವೇಶಗಳಲ್ಲಿ 9.87 ಲಕ್ಷ ಜನ, ವಿವಿಧ ನಗರಗಳಲ್ಲಿ ಆಯೋಜಿಸಲಾದ ರೋಡ್‌ಶೋಗಳಲ್ಲಿ 19.81 ಲಕ್ಷ ಜನರು ಭಾಗವಹಿಸಿದ್ದಾರೆ ಅಂತ ಬಿಜೆಪಿ ಹೇಳಿಕೊಂಡಿದೆ. ಪ್ರಧಾನಿ ಮೋದಿ ಅವರು 19 ಸಾರ್ವಜನಿಕ ರ‍್ಯಾಲಿಗಳು ಮತ್ತು 9 ರೋಡ್‌ಶೋಗಳಲ್ಲಿ ಭಾಗವಹಿಸಿದ್ರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ 16 ರ‍್ಯಾಲಿಗಳು ಹಾಗೂ 15 ರೋಡ್‌ಶೋಗಳನ್ನ ನಡೆಸಿದ್ದಾರೆ. ಇತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 40 ರೋಡ್‌ಶೋಗಳಲ್ಲಿ ಪಾಲ್ಗೊಂಡಿದ್ದಾರೆ ಅಂತ ಹೇಳಲಾಗಿದೆ. ಇತ್ತ ಕಾಂಗ್ರೆಸ್‌ 173 ಸಾರ್ವಜನಿಕ ರ‍್ಯಾಲಿಗಳು ಮತ್ತು 55 ರೋಡ್‌ಶೋಗಳನ್ನು ಆಯೋಜಿಸಿತ್ತು.

-masthmagaa.com

Contact Us for Advertisement

Leave a Reply