masthmagaa.com:

ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಮತ್ತು ಹೆಚ್​.ಎಸ್​. ಪ್ರಣೋಯ್​ಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಸೈನಾ, ಪ್ರಣೋಯ್​​ ಮತ್ತು ಪರುಪಳ್ಳಿ ಕಶ್ಯಪ್ ‘ಯೋನೆಕ್ಸ್ ಥೈಲ್ಯಾಂಡ್​ ಓಪನ್​’ ಟೂರ್ನಮೆಂಟ್​ನಿಂದ ಹಿಂದೆ ಸರಿದಿದ್ದಾರೆ ಅಂತ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (BAI) ತಿಳಿಸಿದೆ. ಸೈನಾ ನೆಹ್ವಾಲ್​ ಮತ್ತು ಪ್ರಣೋಯ್​ಗೆ ಕೊರೋನಾ ಪಾಸಿಟಿವ್ ಬಂದಿದ್ರೆ, ಪರುಪಳ್ಳಿ ಕಶ್ಯಪ್​ ಸೋಂಕಿತರೊಬ್ಬರ ಸಂಪರ್ಕಕ್ಕೆ ಬಂದಿದ್ದಾರೆ.

ತಮಗೆ ಕೊರೋನಾ ಪಾಸಿಟಿವ್ ಬಂದಿರೋದಕ್ಕೆ ಸೈನಾ ನೆಹ್ವಾಲ್ ಅನುಮಾನ ವ್ಯಕ್ತಪಡಿಸಿದ್ದಾರೆ. ‘ನನಗಿನ್ನೂ ಕೊರೋನಾ ಪರೀಕ್ಷೆಯ ವರದಿ ಸಿಕ್ಕಿಲ್ಲ. ರೂಲ್ಸ್ ಪ್ರಕಾರ ಪರೀಕ್ಷೆ ನಡೆಸಿದ 5 ಗಂಟೆಯಲ್ಲಿ ರಿಪೋರ್ಟ್ ಬರಬೇಕು. ನನಗೆ ನಿನ್ನೆ ಪರೀಕ್ಷೆ ನಡೆಸಿದ್ರೂ ವರದಿ ಬಂದಿಲ್ಲ. ಆದ್ರೆ ಇವತ್ತು ಬೆಳಗ್ಗೆ ವಾರ್ಮ್ ಅಪ್ ಮಾಡುವಾಗ ನಿಮಗೆ ಪಾಸಿಟಿವ್ ಬಂದಿದೆ, ನೀವು ಬ್ಯಾಂಕಾಕ್​ ಆಸ್ಪತ್ರೆಗೆ ದಾಖಲಾಗಬೇಕು ಅಂತ ಹೇಳಿದ್ದಾರೆ. ಇದರಿಂದ ನನಗೆ ಕನ್ಫ್ಯೂಸ್ ಆಗ್ತಿದೆ’ ಅಂತ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply