ಶಾಕಿಂಗ್ ವಿಡಿಯೋ: ಲೈವ್​ ಮ್ಯಾಚ್​ ವೇಳೆ ಪಿಚ್​​ನಲ್ಲೇ ಪ್ರಾಣಬಿಟ್ಟ ಬ್ಯಾಟ್ಸ್​ಮನ್​!

masthmagaa.com:

ಕ್ರಿಕೆಟ್ ಟೂರ್ನಮೆಂಟ್​ ವೇಳೆ ನಾನ್​ ಸ್ಟ್ರೈಕರ್​​ನ ತುದಿಯಲ್ಲಿ ನಿಂತಿದ್ದ ಬ್ಯಾಟ್ಸ್​​ಮನ್ ದಿಢೀರ್​ ಅಂತ​ ಕುಸಿದುಬಿದ್ದು ಮೃತಪಟ್ಟಿರುವ ಶಾಕಿಂಗ್​ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಕ್ರಿಕೆಟ್​ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ. ಅಂದ್ಹಾಗೆ ಪುಣೆಯ ಜುನ್ನಾರ್ ಎಂಬಲ್ಲಿ ಸ್ಥಳೀಯ ಕ್ರಿಕೆಟ್​ ಟೂರ್ನಮೆಂಟ್​ ನಡೀತಿತ್ತು. ಈ ವೇಳೆ ನಾನ್​ ಸ್ಟ್ರೈಕರ್​ನಲ್ಲಿದ್ದ ಬ್ಯಾಟ್ಸ್​ಮನ್​ ಸುಸ್ತಾಗಿ ಕೆಳಗೆ ಕೂತಿದ್ದಾನೆ. ಹೀಗೆ ಕೂತವನು ಹಾಗೇ ಹಿಂದಕ್ಕೆ ಪಲ್ಟಿ ಹೊಡೆದಿದ್ದಾನೆ. ತಕ್ಷಣ ಇದನ್ನ ನೋಡಿದ ಅಂಪೈರ್​ ಆಟವನ್ನ ನಿಲ್ಲಿಸಿದ್ದಾರೆ. ಆಗ ಸ್ಟ್ರೈಕ್​ನಲ್ಲಿದ್ದ ಬ್ಯಾಟ್ಸ್​ಮನ್,​ ಕೀಪರ್, ಬೌಲರ್​ಗಳೆಲ್ಲಾ ಈತನ ಬಳಿ ಓಡಿ ಬಂದಿದ್ದಾರೆ. ಅಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆತ ಹೃದಯಾಘಾತದಿಂದ ಮೃತಪಟ್ಟಿದ್ದ. ಇದಕ್ಕೂ ಮೊದಲು ಸ್ಟ್ರೈಕ್​ನಲ್ಲಿದ್ದ ಬ್ಯಾಟ್ಸ್​ಮನ್​ ಒಂದು ಬಾಲ್ ಬೀಟ್ ಮಾಡಿದ್ದ. ಆಗ ಈತ ಅಂಪೈರ್​ ಬಳಿ ಎಷ್ಟು ಬಾಲ್ ಬಾಕಿ ಉಳಿದಿದೆ ಅಂತ ಕೇಳಿ ಅದನ್ನ ಸ್ಟ್ರೈಕ್​ನಲ್ಲಿದ್ದ ಬ್ಯಾಟ್ಸ್​ಮನ್​ಗೆ ತಿಳಿಸಿದ್ದ. ಆದ್ರೆ ಬೌಲರ್​ ನೆಕ್ಸ್ಟ್​ ಬಾಲ್ ಬೌಲಿಂಗ್ ಮಾಡುವ ಮೊದಲೇ ಈತ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾನೆ.

-masthmagaa.com

Contact Us for Advertisement

Leave a Reply