masthmagaa.com:
ಈ ಬಾರಿ ನಡೆಯಲಿರೋ ಐಪಿಎಲ್ ಸೀಸನ್ 14ರ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ ನಡೀತಿದೆ. ವಿಶೇಷ ಅಂದ್ರೆ ಪಂಜಾಬ್ ತಂಡ ಕೈಬಿಟ್ಟಿದ್ದ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. ಮ್ಯಾಕ್ಸ್ವೆಲ್ರನ್ನ ಬುಟ್ಟಿಗೆ ಹಾಕಿಕೊಳ್ಳಲು ಆರ್ಸಿಬಿ, ಸಿಎಸ್ಕೆ ಮತ್ತು ಕೆಕೆಆರ್ ತಂಡಗಳು ಪೈಪೋಟಿಗೆ ಇಳಿದಿದ್ದವು. ಕೊನೆಗೆ ₹2 ಕೋಟಿ ರೂಪಾಯಿ ಮೂಲ ಬೆಲೆಯ ಮ್ಯಾಕ್ಸ್ವೆಲ್ಗೆ ₹14.25 ಕೋಟಿ ಕೊಟ್ಟು ಆರ್ಸಿಬಿ ಖರೀದಿಸಿತು. ಮತ್ತೊಬ್ಬ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ರನ್ನ ಡೆಲ್ಲಿ ಕ್ಯಾಪಿಟಲ್ಸ್ 2.2 ಕೋಟಿ ರೂಪಾಯಿಗೆ ಖರೀದಿಸಿದೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡ ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್ರನ್ನ ಬರೋಬ್ಬರಿ 16.25 ಕೋಟಿ ಕೊಟ್ಟು ಖರೀದಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ನಡೆದ ಈವರೆಗಿನ ಹೈಯೆಸ್ಟ್ ಬಿಡ್. ಇನ್ನು ಸದ್ಯ ಐಸಿಸಿ ಟಿ-20 ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನದಲ್ಲಿರೋ ಇಂಗ್ಲೆಂಡ್ನ ಡೇವಿಡ್ ಮಲನ್ರನ್ನ ಮೂಲ ಬೆಲೆಯಾದ 1.5 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡ ಖರೀದಿಸಿದೆ.
ಮೋಯಿನ್ ಅಲಿ – ₹7 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
ಶಿವಮ್ ದುಬೆ – ₹4.4 ಕೋಟಿ – ರಾಜಸ್ಥಾನ ರಾಯಲ್ಸ್
-masthmagaa.com
Contact Us for Advertisement