IPL ಹರಾಜು: RCB ಬುಟ್ಟಿಗೆ ಮ್ಯಾಕ್ಸ್​​ವೆಲ್.. ಬರೋಬ್ಬರಿ ₹14.25​ ಕೋಟಿಗೆ ಸೇಲ್

masthmagaa.com:

ಈ ಬಾರಿ ನಡೆಯಲಿರೋ ಐಪಿಎಲ್​ ಸೀಸನ್ 14ರ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ ನಡೀತಿದೆ. ವಿಶೇಷ ಅಂದ್ರೆ ಪಂಜಾಬ್ ತಂಡ ಕೈಬಿಟ್ಟಿದ್ದ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್​ರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. ಮ್ಯಾಕ್ಸ್​ವೆಲ್​ರನ್ನ ಬುಟ್ಟಿಗೆ ಹಾಕಿಕೊಳ್ಳಲು ಆರ್​ಸಿಬಿ, ಸಿಎಸ್​ಕೆ ಮತ್ತು ಕೆಕೆಆರ್​ ತಂಡಗಳು ಪೈಪೋಟಿಗೆ ಇಳಿದಿದ್ದವು. ಕೊನೆಗೆ ₹2 ಕೋಟಿ ರೂಪಾಯಿ ಮೂಲ ಬೆಲೆಯ ಮ್ಯಾಕ್ಸ್​ವೆಲ್​ಗೆ ₹14.25 ಕೋಟಿ ಕೊಟ್ಟು ಆರ್​ಸಿಬಿ ಖರೀದಿಸಿತು. ಮತ್ತೊಬ್ಬ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್​​ರನ್ನ ಡೆಲ್ಲಿ ಕ್ಯಾಪಿಟಲ್ಸ್​ 2.2 ಕೋಟಿ ರೂಪಾಯಿಗೆ ಖರೀದಿಸಿದೆ. ಇನ್ನು ರಾಜಸ್ಥಾನ ರಾಯಲ್ಸ್​ ತಂಡ ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್​ರನ್ನ ಬರೋಬ್ಬರಿ 16.25 ಕೋಟಿ ಕೊಟ್ಟು ಖರೀದಿಸಿತು. ಇದು ಐಪಿಎಲ್​​ ಇತಿಹಾಸದಲ್ಲಿ ನಡೆದ ಈವರೆಗಿನ ಹೈಯೆಸ್ಟ್​ ಬಿಡ್​. ಇನ್ನು ಸದ್ಯ ಐಸಿಸಿ ಟಿ-20 ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನದಲ್ಲಿರೋ ಇಂಗ್ಲೆಂಡ್​​ನ ಡೇವಿಡ್ ಮಲನ್​ರನ್ನ ಮೂಲ ಬೆಲೆಯಾದ 1.5 ಕೋಟಿಗೆ ಪಂಜಾಬ್ ಕಿಂಗ್ಸ್​ ತಂಡ ಖರೀದಿಸಿದೆ.

ಮೋಯಿನ್ ಅಲಿ – ₹7 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
ಶಿವಮ್ ದುಬೆ – ₹4.4 ಕೋಟಿ – ರಾಜಸ್ಥಾನ ರಾಯಲ್ಸ್

-masthmagaa.com

Contact Us for Advertisement

Leave a Reply