ಪೆಟ್ರೋಲ್, ಡೀಸೆಲ್ ಟ್ಯಾಕ್ಸ್​​: ರಾಜ್ಯಕ್ಕೆ 6 ತಿಂಗಳಲ್ಲಿ 9,720 ಕೋಟಿ ರೂ. ಆದಾಯ!

masthmagaa.com:

ಕಳೆದ ವರ್ಷ ಮತ್ತು ಈ ವರ್ಷದ ಆರಂಭದಲ್ಲಿ ಕೊರೋನಾ ಹಾವಳಿ, ಲಾಕ್​ಡೌನ್​ ಅಂತೆಲ್ಲಾ ವಾಹನ ಸಂಚಾರ ಬಂದ್ ಆಗಿತ್ತು. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪೆಟ್ರೋಲ್​-ಡೀಸೆಲ್​ ಮೇಲಿನ ತೆರಿಗೆಯಿಂದ ಬರ್ತಿದ್ದ ಆದಾಯ ಕೂಡ ಖೋತಾ ಆಗಿತ್ತು. ಆದ್ರೀಗ ಕೊರೋನಾ ಕಮ್ಮಿಯಾಗಿ, ಎಲ್ಲಾ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಇದರಿಂದ ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ರಾಜ್ಯ ಸರ್ಕಾರಕ್ಕೆ ಬಂಪರ್​ ಆದಾಯ ಬಂದಿದೆ. ಈ ವರ್ಷದ ಏಪ್ರಿಲ್​ 1ರಿಂದ ಸೆಪ್ಟೆಂಬರ್​ 30ರವರೆಗೆ ಪೆಟ್ರೋಲ್​-ಡೀಸೆಲ್​ ಮೇಲಿನ ಟ್ಯಾಕ್ಸ್​ನಿಂದ 9,720 ಕೋಟಿ ರೂಪಾಯಿ ಆದಾಯ ಬಂದಿದೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಬಂದ ಆದಾಯಕ್ಕಿಂತ 48 ಪರ್ಸೆಂಟ್ ಹೆಚ್ಚು. ಪೆಟ್ರೋಲ್ ಮತ್ತು ಡೀಸೆಲ್​ ರೇಟ್​ ಈಗಿರುವಷ್ಟೇ ಇದ್ರೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರಕ್ಕೆ 20,000 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಅಂತ ಕಮರ್ಷಿಯಲ್​ ಟ್ಯಾಕ್ಸ್ ಡಿಪಾರ್ಟ್​ಮೆಂಟ್​​ನ ಅಧಿಕಾರಿಯೊಬ್ಬರು ಹೇಳಿದ್ದಾರೆ ಅಂತ ವರದಿಯಾಗಿದೆ. ಅಂದ್ಹಾಗೆ ಪೆಟ್ರೋಲ್​ ಮೇಲೆ ರಾಜ್ಯ ಸರ್ಕಾರ 35 ಪರ್ಸೆಂಟ್​ ಮತ್ತು ಡೀಸೆಲ್​ ಮೆಲೆ 24 ಪರ್ಸೆಂಟ್​ ಟ್ಯಾಕ್ಸ್ ಹಾಕುತ್ತೆ. ಸದ್ಯ ರಾಜ್ಯದಲ್ಲಿ ಒಂದು ಲೀಟರ್ ಪೆಟ್ರೋಲ್​ ರೇಟ್​ 110ರಿಂದ 112 ರೂಪಾಯಿ ಇದೆ. ಡೀಸೆಲ್​ 100 ರೂಪಾಯಿ ಇದೆ. ಇದರರ್ಥ ಒಂದು ಲೀಟರ್ ಪೆಟ್ರೋಲ್​ನಿಂದ ರಾಜ್ಯ ಸರ್ಕಾರದ ಭೊಕ್ಕಸಕ್ಕೆ 28 ರೂಪಾಯಿ ಹೋಗುತ್ತೆ, ಅದೇ ರೀತಿ ಒಂದು ಲೀಟರ್ ಡೀಸೆಲ್​​ನಿಂದ 21 ರೂಪಾಯಿ ಹೋಗುತ್ತೆ. ಕೇಂದ್ರ ಸರ್ಕಾರಕ್ಕೂ ಆಲ್ಮೋಸ್ಟ್ ಇಷ್ಟೇ, ಇದಕ್ಕಿಂತ ಜಾಸ್ತಿ ಹೋಗುತ್ತೆ. ಇತ್ತೀಚೆಗಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಪೆಟ್ರೋಲ್ ಮತ್ತು ಡೀಸೆಲ್​ ಮೇಲಿನ ತೆರಿಗೆಯನ್ನ ಕಮ್ಮಿ ಮಾಡೋ ಬಗ್ಗೆ ಸುಳಿವು ಕೊಟ್ಟಿದ್ದರು. ಉಪ ಚುನಾವಣೆ ಬಳಿಕ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನ ಪರಾಮರ್ಶಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ಹೇಳಿದ್ದರು.

-masthmagaa.com

Contact Us for Advertisement

Leave a Reply